ಸೈಕಲ್‌ನಲ್ಲಿ ಬೆಂಗಳೂರು ರೌಂಡ್ಸ್‌ ಮಾಡಿದ ಅಪ್ಪು..

ಪುನೀತ್‌ ರಾಜ್‌ಕುಮಾರ್‌ ಸೈಕಲ್‌ನಲ್ಲಿ ಬೆಂಗಳೂರು ರೌಂಡ್ಸ್‌ ಮಾಡಿದ್ದಾರೆ. ಬೆಳಗ್ಗೆ ತಮ್ಮ ಸದಾಶಿವನಗರದ ನಿವಾಸದಿಂದ ಸೈಕಲ್‌ನಲ್ಲಿ ಮೇಖ್ರಿ ಸರ್ಕ್‌ಲ್‌,ವಸಂತ್‌ ನಗರ,ಚಾಲುಕ್ಯ ಸರ್ಕಲ್‌,ವಿಧಾನ ಸೌಧ,ಚಿನ್ನ ಸ್ವಾಮಿ ಸ್ಟೇಡಿಯಂ ಹೀಗೆ ಪ್ರಮುಖ ರಸ್ತೆಯಲ್ಲಿ ಸೈಕಲ್‌ ಸವಾರಿ ಮಾಡುವ ಮೂಲಕ ಬೆಂಗಳೂರು ರೌಂಡ್ಸ್‌ ಮಾಡಿದ್ದಾರೆ. ಸದ್ಯ ಶೂಟಿಂಗ್‌ನಿಂದ ಬ್ರೇಕ್‌ ಪಡೆದಿರೋ ಅಪ್ಪ, ಮನೆಯಲ್ಲಿ ಕಾಲಕಳೆಯುತ್ತಿದ್ದಾರೆ. ಹೀಗಿರುವಾಗ ಈ ರೀತಿ ವ್ಯಾಯಾಮ ಮಾಡುವ ಮೂಲಕ ಅಭಿಮಾನಿಗಳಿಗೆ ಖುಷಿ ನೀಡುತ್ತಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲೂ ಸಖತ್‌ ಆಕ್ಟಿವ್‌ ಆಗಿರೋ ಪುನೀತ್‌ ರಾಜ್‌ಕುಮಾರ್‌ ತಾವು ಮಾಡುವ ವರ್ಕೌಟ್‌ಗಳನ್ನು ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಅಪ್ಲೋಡ್‌ ಮಾಡುತ್ತಿರುತ್ತಾರೆ. ಇದೀಗ ತಾವು ಬೆಂಗಳೂರಿನ ಪ್ರಮುಖ ರಸ್ತೆಯಲ್ಲಿ ಸೈಕಲ್‌ ಸವಾರಿ ಮಾಡಿರುವ ವಿಡಿಯೋವನ್ನು ತಮ್ಮ ಪಿಆರ್‌ಕೆ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್ಲೋಡ್‌ ಮಾಡಿದ್ದು, ಅಭಿಮಾನಿಗಳು ಫುಲ್‌ ಖುಷಿಯಾಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top