ಸೆಲ್ಫಿ ಹುಚ್ಚಿಗೆ ಬಲಿಯಾದ ಒಂದೇ ಕಟುಂಬದ ನಾಲ್ವರು..!

ಆಧುನಿಕತೆ ಬೆಳೆದಂತೆ ಅದು ಮನುಷ್ಯನ ಜೀವನದ ಮೇಲೆ ದೊಡ್ಡ ಪರಿಣಾಮ ಬೀರಿದ ರೀತಿ ಕಾಣ್ತಾ ಇದೆ. ಇನ್ನು ಟೆಕ್ನಾಲಜಿ ಮುಂದುವರೆದಂತೆ ಅದಕ್ಕೆ ದಾಸನಾಗಿ ಹೋಗುತ್ತಿದ್ದಾನೆ. ಇತ್ತಿಚೆಗೆ ಸಾಮಾನ್ಯ ವ್ಯಕ್ತಿಯು ಕೂಡ ಮೊಬೈಲ್‌ ದಾಸಕ್ಕೆ ಸಿಕ್ಕಿ ಸೆಲ್ಫಿ ಕ್ರೇಜ್‌ ಹೆಚ್ಚಿಸಿಕೊಂಡಿದ್ದಾನೆ. ಈ ಸೆಲ್ಫಿ ಕ್ರೇಜ್‌ ಅದೆಷ್ಟೋ ಜೀವವನ್ನೇ ತೆಗೆದುಬಿಟ್ಟಿದೆ, ಇನ್ನು ಸೆಲ್ಫಿಗಾಗಿ ಅಪಾಯದ ಸ್ಥಳಗಳಿಗೆ ತೆರಳಿ ಅಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು ಈಗ ಒಂದು ಟ್ರೆಂಡ್‌ ಶುರುವಾಗಿದೆ, ಆ ಟ್ರೆಂಡ್‌ನಿಂದ ಆದ ಅನಾಹುತಗಳೇ ಹೆಚ್ಚು, ಇತ್ತಿಚೆಗೆ ಅಂತಹದ್ದೇ ಒಂದು ಘಟನೆ ಕರ್ನಾಟಕ ತಮಿಳುನಾಡು ಗಡಿಭಾಗದಲ್ಲಿ ನಡೆದಿದೆ. ಇನ್ನು ಈ ಘಟನೆ ನಡೆದಿರುವುದು ಪಂಬರ್‌ ಆಣೆಕಟ್ಟೆಯಲ್ಲಿ, ಹೌದು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ನಿವಾಸಿಗಳಾದ ಸಂತೋಷ್‌,ಸ್ನೇಹಾ, ಕನೋಧಾ, ಮತ್ತು ನೀವಿತಾ ಒಂದೇ ಕುಟುಂಬದ ನಾಲ್ವರು ಮೃತ ಪಟ್ಟ ದುರ್ದೈವಿಗಳು, ದಸರಾ ರಜೆ ಇದ್ದ ಹಿನ್ನೆಲೆ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸಮಾಡುತ್ತಿದ್ದ ನೀವಿತಾ ಊರಿಗೆ ತೆರಳಿದ್ದಳು ಈ ವೇಳೆ ಮನೆಯವರೆಲ್ಲ ಒಂದು ದಿನದ ಪ್ರವಾಸಕ್ಕಾಗಿ ಪಂಬರ್‌ ಆಣೆಕಟ್ಟೆಗೆ ತೆರೆಳಿದ್ದಾರೆ, ಈ ವೇಳೆ ನೀವಿತಾ ಸೇರಿದಂತೆ ನಾಲ್ವರು ಆಣೆಕಟ್ಟೆಯ ಹಿನ್ನೀರಿನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದಾರೆ, ಈ ವೇಳೆ ಆಯಾ ತಪ್ಪಿ ಬಿದ್ದ ನಾಲ್ವರು ಮೃತಪಟ್ಟಿದ್ದಾರೆ. ಇನ್ನು ಪಾಂಬರ್‌ ಆಣೆಕಟ್ಟು ಪ್ರದೇಶದಲ್ಲಿ ಕಳೆದ 15 ದಿನಗಳಿಂದ ಮಳೆ ಸುರಿಯುತ್ತಿದ್ದು, ನೀರಿನ ಪ್ರಮಾಣ ಕೂಡ ಹೆಚ್ಚಾಗಿತ್ತು, ಈ ಘಟನೆ ನಡೆದ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಅಗ್ನಿಶಾಮಕ ಸಿಬ್ಬಂದಿಗಳ ಸಹಾಯದಿಂದ ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ. ಇನ್ನು ಸ್ಥಳದಲ್ಲಿ ಮೃತ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top