
ಲಾಕ್ಡೌನ್ ಹಿನ್ನೆಲೆ ಬಾರ್ ಮತ್ತು ಕ್ಲಬ್ಗಳು ಓಪನ್ಗೆ ಅನುಮತಿ ಇರಲಿಲ್ಲ, ಇನ್ನು ಅನ್ಲಾಕ್ ಪ್ರಕ್ರಿಯೆ ಶುರುವಾದಾಗ ಬಾರ್ಗಳಲ್ಲಿ ಮದ್ಯ ಮಾರಾಟ ಮಾಡಲು ಅನುಮತಿ ನೀಡಿತ್ತು, ಆದ್ರೆ ಬಾರ್ ಮತ್ತು ಕ್ಲಬ್ಗಳಲ್ಲಿ ಮದ್ಯ ಕುಡಿಯಲು ಮದ್ಯಪ್ರಿಯರಿಗೆ ಅನುಮತಿ ಇರಲಿಲ್ಲ, ಆದ್ರೆ ಸೆಪ್ಟೆಂಬರ್ 1ರಿಂದ ಬಾರ್ ಮತ್ತು ಕ್ಲಬ್ಗಳನ್ನು ಓಪನ್ ಮಾಡಲು ಮತ್ತು ಬಾರ್ನಲ್ಲಿ ಕುಡಿಯಲು ಅನುಮತಿ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ವಿಚಾರವಾಗಿ ಅಧಿಕೃತ ಮಾಹಿತಿ ರಾಜ್ಯ ಸರ್ಕಾರ ನಾಳೆ ತಿಳಿಸುವ ಸಾಧ್ಯತೆ ಇದೆ.