ಕೊರೋನಾ ಹಾವಳಿಯಿಂದಾಗಿ ರಾಜ್ಯದ ಎಲ್ಲಾ ದೇವಸ್ಥಾನಗಳಿಗೂ ಪ್ರವೇಶವನ್ನು ಭಕ್ತರಿಗೆ ನಿಷೇಧಗೊಳಿಸಲಾಗಿತ್ತು, ಅಲ್ಲದೇ ಕೆಲವು ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು, ಇದೀಗ ಸೆಪ್ಟೆಂಬರ್ 1ರಿಂದ ದೇವಸ್ಥಾನದಲ್ಲಿ ಎಲ್ಲಾ ಸೇವೆಗಳನ್ನು ಆರಂಭಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಸದ್ಯ ಹಂತ ಹಂತವಾಗಿ ನಿರ್ಭಂದಗಳನ್ನು ಸಡಿಲಗೊಳಿಸುತ್ತಿದ್ದು,ಇದೀಗ ಸೀಮಿತ ಸೇವೆಗಳ ಜೊತೆಯಲ್ಲಿ ಹೆಚ್ಚುವರಿ ಸೇವೆಗಳನ್ನು ಆರಂಭಿಸಲು ಚಿಂತನೆ ನಡೆಸಲಾಗುತ್ತಿದೆ. ಕುಂಕುಮಾರ್ಚನೆ,ತುಲಾಭಾರ,ಅಭಿಷೇಕ, ಮುಡಿ ಸೇವೆ ಇನ್ನು ಅನೇಕ ಸೇವೆಗಳನ್ನು ಆರಂಭಿಸಲು ಚಿಂತನೆ ಮಾಡಲಾಗಿದೆ. ಈ ವಿಚಾರವಾಗಿ ಮುಜರಾಯಿ ಇಲಾಖೆ ಸರ್ಕಾರದ ಮುಂದೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಸರ್ಕಾರ ಒಪ್ಪಿದ್ರೆ ಮುಂದಿನ ತಿಂಗಳಿನಿಂದ ದೇವಸ್ಥಾನಗಳಲ್ಲಿ ಎಲ್ಲಾ ಸೇವೆಗೆ ಅವಕಾಶ ನೀಡಲಾಗುವುದು.

ಸದ್ಯ ಎಲ್ಲಾ ಕ್ಷೇತ್ರಗಳಲ್ಲೂ ಅನ್ಲಾಕ್ ಪ್ರಕ್ರಿಯೆ ನಡೆಯುತ್ತಿದ್ದು, ದೇವಸ್ಥಾನದ ಸೇವೆಗಳನ್ನು ಆರಂಭಿಸಲು ಚಿಂತನೆ ಮಾಡಲಾಗುತ್ತಿದೆ.