ಸೆಪ್ಟೆಂಬರ್‌ 19ರಿಂದ ಮದಗಜ ಶೂಟಿಂಗ್‌ ಶುರು..

ಚಿತ್ರರಂಗದ ಚಟುವಟಿಕೆಗಳು ಹಂತ ಹಂತವಾಗಿ ಶುರುವಾಗುತ್ತಿದ್ದು, ಲಾಕ್‌ಡೌನ್‌ ನಂತರ ಚೇರಿಕೆಯನ್ನು ಕಾಣುತ್ತಿದೆ. ಈಗಾಗಲೇ ಅನೇಕ ಚಿತ್ರತಂಡ ಶೂಟಿಂಗ್‌ ಶುರುಮಾಡಿಕೊಂಡಿದ್ದು, ಇದೀಗ ರೋರಿಂಗ್‌ ಸ್ಟಾರ್‌ ಶ್ರೀ ಮುರುಳಿ ಅಭಿನಯದ ಮದಗಜ ಸಿನಿಮಾದ ಎರಡನೇ ಹಂತ ಶೂಟಿಂಗ್‌ಗೆ ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಲಾಕ್‌ಡೌನ್‌ಗೂ ಮುಂಚೆ ಮೊದಲ ಹಂತದ ಶೂಟಿಂಗ್‌ ಮುಗಿಸಿದ್ದ ಚಿತ್ರತಂಡ ಲಾಕ್‌ಡೌನ್‌ ನಂತರ ಎರಡನೇ ಹಂತದ ಶೂಟಿಂಗ್‌ಗೆ ತಯಾರಿ ಮಾಡಿಕೊಳ್ತಾ ಇದೆ. ಇದೇ ಸೆಪ್ಟೆಂಬರ್‌ 19ರಿಂದ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಲು ತಯಾರಾಗಿದೆ. ಆಯೋಗ್ಯ ಮಹೇಶ್‌ ಕುಮಾರ್‌ ನಿರ್ದೇಶನದ ಈ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್‌ ಗೌಡ ಬಂಡವಾಳ ಹಾಕಿದ್ದು, ಶ್ರೀಮುರುಳಿಗೆ ಜೋಡಿಯಾಗಿ ಆಶಿಕಾ ರಂಗನಾಥ್‌ ಕಾಣಿಸಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top