
ಆಸ್ಟ್ರೇಲಿಯಾ ಮತ್ತು ಟೀಂ ಇಂಡಿಯಾದ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಟೀಂ ಇಂಡಿಯಾಗೆ ದೊಡ್ಡ ಮೊತ್ತದದ ಗುರಿಯನ್ನು ನೀಡಿತು, ಇನ್ನು ಆಸ್ಟ್ರೇಲಿಯಾ ತಂಡದಲ್ಲಿ ಸ್ಮಿತ್ ಮತ್ತು ಅರೋನ್ ಫಿಂಚ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ದೊಡ್ಡ ಮೊತ್ತವನ್ನು ಕಲೆಹಾಕಿದ್ದು, ಇದೀಗ ಆಸ್ಟ್ರೇಲಿಯಾದ ನಾಯಕ ಅರೋನ್ ಫಿಂಚ್ ಮೊದಲ ಪಂದ್ಯದಲ್ಲಿ ಶತಕ ಬಾರಿಸೋ ಮೂಲಕ ಟ್ರೋಲ್ಗೆ ಒಳಗಾಗಿದ್ದಾರೆ. ಹೌದು ಆಸ್ಟ್ರೇಲಿಯಾ ದೊಡ್ಡ ಮೊತ್ತಕ್ಕೆ ನೆರವಾದ ನಾಯಕ ಅರೋನ್ ಫಿಂಚ್ ಶತಕ ಗಳಿಸುತ್ತಿದ್ದಂತೆ ಆರ್ಸಿಬಿ ಅಭಿಮಾನಿಗಳು ಅರೋನ್ ಫಿಂಚ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
ಇತ್ತ ಟೀಂ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರ ಕೂಡ ಟ್ವೀಟ್ ಮಾಡಿ ತಮಾಷೆ ಮಾಡಿದ್ದು ಘರ್ಜಿಸೋ ಮತ್ತು ಮಲಗಿರೋ ಸಿಂಹವನ್ನು ಪೋಸ್ಟ್ ಮಾಡೋ ಮೂಲಕ ಫಿಂಚ್ ಆಸ್ಟ್ರೇಲಿಯಾ ತಂಡದಲ್ಲಿ ಘರ್ಜಿಸುತ್ತಾರೆ ಮತ್ತು ಆರ್ಸಿಬಿ ಪರ ಆಡೋವಾಗ ಮಲಗಿರುತ್ತಾರೆ ಅಂತ ಟ್ರೋಲ್ ಮಾಡುತ್ತಿದ್ದಾರೆ. ಈಗಾಗಲೇ ಆರ್ಸಿಬಿ ಅಭಿಮಾನಿಗಳು ಫಿಂಚ್ ಆಟಕ್ಕೆ ಆಕಾಶ್ ಚೋಪ್ರ ತಮಾಷೆ ಮಾಡಿದ್ದಾರೆ.
ಇನ್ನು ಹರ್ಷ ಬೋಗ್ಲೆ ಕೂಡ ಆರೋನ್ ಫಿಂಚ್ ಹೆಸರಿನ ಇಬ್ಬರು ಆಟಗಾರರು ಇದ್ದಾರಾ ಅಂತ ಪ್ರಶ್ನೆ ಮಾಡಿದ್ದಾರೆ.
ಸದ್ಯ ಆರ್ಸಿಬಿ ಅಭಿಮಾನಿಗಳಂತು ಫಿಂಚ್ ಆಸ್ಟ್ರೇಲಿಯಾ ಪರ ಆಟವಾಡಿರೋದನ್ನು ಸಿಟ್ಟಾಗಿದ್ದು, ಗುರು ಅಸ್ಟ್ರೇಲಿಯಾ ಟೀಂನಲ್ಲಿ ಹಿಂಗ್ ಆಡ್ತೀಯಾ, ಆರ್ಸಿಬಿ ಟೀಂ ನಲ್ಲಿ ಆಡೋಕೆ ಏನ್ ಆಗಿತ್ತು ಗುರು ಅಂತ ಆರ್ಸಿಬಿ ಅಭಿಮಾನಿಗಳು ಟ್ವೀಟ್ ಮೇಲೆ ಟ್ವೀಟ್ ಮಾಡುತ್ತಿದ್ದಾರೆ.