ಸೂರ್ಯ ಕುಮಾರ್ ಯಾದವ್ ಗೆ ಅನ್ಯಾಯ ಆಗ್ತಿದ್ಯಾ..?

ಸೂರ್ಯ ಕುಮಾರ್ ಯಾದವ್ ನಿನ್ನೆ ಆರ್ ಸಿ ಬಿ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡೋ ಮೂಲಕ ಮುಂಬೈ ಅಧಿಕೃತ ವಾಗಿ ಪ್ಲೇ ಆಫ್ ಎಂಟ್ರಿಗೆ ಸಹಕಾರ ನೀಡಿದ ಆಟಗಾರ..ಆರ್ ಸಿ ಬಿ ಪಾಲಾಗುತ್ತಿದೆ ಅನ್ನೋವಾಗಲೇ ಮುಂಬೈ‌ ತಂಡದ ಪರವಾಗಿ 79ರನ್ ಗಳನ್ನು ಸಿಡಿಸಿ ಗೆಲುವಿನ ದಡ ಸೇರಿಸಿದ್ರು,ಆದ್ರೆ ಇದೀಗ ಸೂರ್ಯಕುಮಾರ್ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಮತ್ತು ಕ್ರಿಜೆಟ್ ತಜ್ಞರು ಬಾರೀ ಚರ್ಚೆಯನ್ನು ನಡೆಸುತ್ತಿದ್ದಾರೆ.
ಹೌದು ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸಕ್ಕೆ ಮೂರು ಫಾರ್ಮೆಟ್ ತಂಡವನ್ನು ಪ್ರಕಟಮಾಡಿದ್ದು,ಐಪಿಎಲ್ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಈ ಬಾರಿ ಮಣೆಯನ್ನು ಹಾಕಿದೆ,ಆದ್ರೆ ಮುಂಬೈ ಪರ ಬ್ಯಾಟ್ ಬೀಸೋ ಸೂರ್ಯ ಕುಮಾರ್ ಯಾದವ್ ಆಯ್ಕೆ ಆಗಾದೇ ಇರೋ ಬಗ್ಗೆ ಇದೀಗ ಬಾರಿ ಚರ್ಚೆ ನಡೆಯುತ್ತಿದೆ. ಸೂರ್ಯಕುಮಾರ್ ಯಾದವದ ಐಪಿಎಲ್ ಮಾತ್ರವಲ್ಲ ಫಸ್ಟ್ ಕ್ಲಾಸ್ ಕ್ರಿಕಟ್ ನಲ್ಲೂ ತಾನು ಏನು ಎಂಬುದನ್ನು ಸಾಭೀತು ಮಾಡುತ್ತಲೇ ಬರುತ್ತಿದ್ದಾರೆ. ಇನ್ನು ಪ್ರತಿ ಐಪಿಎಲ್ ನಡೆದಾಗಲು ಸೂರ್ಯ ಕುಮಾರ್ ಟೀಂ ಇಂಡಿಯಾಗೆ ಸೆಲೆಕ್ಟ್ ಆದ್ರೂ ಎಂತು ಮಾತುಗಳು ಕೇಳಿ ಬರುವಾಗಲೆಲ್ಲಾ ಆತ ಆಯ್ಕೆಯಾಗದೇ ಕ್ರಿಕೆಟ್ ಜಗತ್ತಿನಲ್ಲಿ ಲಕ್ ಇಲ್ಲದ ಟ್ಯಾಲೆಂಟ್‌ ಆಟಗಾರ ಈ ಸೂರ್ಯ ಕುಮಾರ್ ಅನ್ನೋ‌ ಮಾತುಗಳು ಕೇಳಿ ಬರ್ತಾನೆ ಇದೆ. ಇನ್ನು ಮುಂಬೈ ಪರ ಆಡುತ್ತಿರೋ ಸೂರ್ಯ ಕುಮಾರ್ ಮೂರು ಐಪಿಎಲ್ ನಲ್ಲೂ ಉತ್ತಮ ಪ್ರದರ್ಶನ ನೀಡ್ತಾ ಇದ್ರು ಟೀಂ ಇಂಡಿಯಾದಲ್ಲಿ ಆಯ್ಕೆ ಆಗದೇ ಇರೋದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.ಇನ್ನು ಈ ಬಾರಿಯ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡ್ತಾ ಇರೋ ಸೂರ್ಯ ಕುಮಾರ್ 350ಕ್ಕೂ ಹೆಚ್ಚು ರನ್ ಸಿಡಿಸಿ ಎಲ್ಲರ ಗಮನ ಸೆಳೆದಿದ್ರು,ಇನ್ನು 2018ರಲ್ಲಿ 513 ಮತ್ತು 2019ರಲ್ಲಿ 424 ರನ್ ಸಿಡಿಸಿ ತಾನೊಬ್ಬ ಟೀಂ ಇಂಡಿಯಾಗೆ ಆಡಬಲ್ಲ ಉತ್ತಮ ಆಟಗಾರ ಅನ್ನೋದನ್ನ ಸಾಭೀತು ಪಡಿಸಿದ್ರು ಆದ್ರೂ ಆಯ್ಕೆಗಾರರು ಈತನ ಟ್ಯಾಲೆಂಟ್ ಅನ್ನು ಗುರುತಿಸದೇ ಇರೋದು ಮಾತ್ರ ಸರಿಯಲ್ಲ ಅನ್ನೋ‌‌ ಮಾತುಗಳು ಸಹ ಇದೀಗ ಕೇಳಿ ಬರ್ತಾ ಇದೆ.ಈಗಾಗಲೇ ವಿಚಾರವಾಗಿ ಟೀಕೆಗಳು ಕೇಳಿ ಬರ್ತಾ ಇದ್ದು, ನಿನ್ನೆ ನಡೆದ ಆರ್ ಸಿ ಬಿ ವಿರುದ್ಧದ ಪಂದ್ಯದಲ್ಲಿ 79ರನ್ ಗಳಿಸಿ ತಂಡದ ಗೆಲುವಿಗೆ ಕಾರಣವಾಗಿದ್ದು ನಂತರ ಮಾತನಾಡಿದ ಮುಂಬೈ‌ ತಂಡದ ನಾಯಕ ಪೊಲಾರ್ಡ್ ಸೂರ್ಯ ಕುಮಾರ್ ಟೀಂ ಇಂಡಿಯಾಗೆ ಸೆಲೆಕ್ಟ್ ಆಗಿಲ್ಲ ಅನ್ನೋ ಬೇಸರದಲ್ಲೇ ಆಡಿದ್ದಾನೆ. ಅವನಿಗೆ ಅದು ತುಂಬಾನೇ ಕಾಡಿತ್ತು,ಸೂರ್ಯ ಕುಮಾರ್ ಆಯ್ಕೆ ಆಗುವ ಸನ್ನಿಹದಲ್ಲಿ ಇದ್ದಾನೆ ಎಂದು ಹೇಳಿದ್ದಾರೆ.ಇನ್ನು ಐಪಿಎಲ್ ನಲ್ಲಿ‌ ಮುಂಬೈ ಮ್ಯಾಚ್ ನಡೆಯುವಾಗಲೆಲ್ಲಾ, ವಿನಯ್ ಕುಮಾರ್ ಕಾಮೆಂಟರಿಯಲ್ಲಿ ಸೂರ್ಯ ಕುಮಾರ್ ಒಬ್ಬ ಉತ್ತಮ ಆಟಗಾರ ಆದ್ರೆ ಅವರು ಯಾಕೆ ಟೀಂ ಇಂಡಿಯಾಗೆ ಸೆಲೆಕ್ಟ್ ಆಗುತ್ತಿಲ್ಲ,ಆತ ಒಬ್ಬ ಅನ್ ಲಕ್ಕಿ‌ ಪ್ಲೇಯರ್ ಅಂತನೂ ಹೇಳುತ್ತಿರುತ್ತಾರೆ. ಒಟ್ಟಿನಲ್ಲಿ ತಾನೊಬ್ಬ ಉತ್ತಮ ಆಟಗಾರ ಎನ್ನುವುದನ್ನು ಸೂರ್ಯಕುಮಾರ್ ಪ್ರತಿ ಬಾರಿಯು‌ ಸಾಭೀತು ಪಡಿಸುತ್ತಿದ್ದರು,ಟೀಂ ಇಂಡಿಯಾಗೆ ಆಯ್ಕೆ ಆಗದೆ ಇರುವುದು‌ ಮಾತ್ರ ಕ್ರಿಕೆಟ್ ಪ್ರಿಯರಲ್ಲಿ ಮಾತ್ರ ಬೇಸರ ತರಿಸಿದೆ. ಈ ವಿವಾರವಾಗಿ‌ ನೀವ್ ಏನ್ ಹೇಳ್ತೀರಾ,ಸೂರ್ಯ ಕುಮಾರ್ ಆಯ್ಕೆ ಮಾಡದೇ ಬಿಸಿಸಿಐ ಅನ್ಯಾಯ ಮಾಡುತ್ತಿದೆಯಾ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top