ಸೂರ್ಯಕುಮಾರ್‌ ಯಾದವ್‌ ಅನ್ನು ಎಬಿ ಡಿವಿಲಿಯರ್ಸ್‌ಗೆ ಹೋಲಿಸಿದ ಟೀಂ ಇಂಡಿಯಾ ಆಟಗಾರ

ಐಪಿಎಲ್‌ 2020 ಮುಕ್ತಾಯವಾಗಿ ಮುಂಬೈ ಇಂಡಿಯನ್ಸ್‌ 5 ನೇ ಬಾರಿ ಚಾಂಪಿಯನ್‌ ಆಗೋ ಮೂಲಕ ದಾಖಲೆಯನ್ನು ಬರೆದಿದೆ, ಇನ್ನು ಐಪಿಎಲ್‌ ಮುಗಿಯುತ್ತಿದ್ದಂತೆ ಐಪಿಎಲ್‌ನಲ್ಲಿ ಆಡಿದ ಆಟಗಾರರ ಆಟವನ್ನು ಕೆಲವು ಕ್ರಿಕೆಟ್‌ ತಜ್ಞರು ತಮ್ಮದೇ ಸ್ಟೈಲ್‌ನಲ್ಲಿ ವಿಶ್ಲೇಷಿಸುತ್ತಿದ್ದಾರೆ. ಇದೀಗ ಟೀಂ ಇಂಡಿಯಾದ ಸ್ಪಿನ್ನರ್‌ ಟರ್ಮಿನೇಟರ್‌ ಹರ್ಭಜನ್‌ ಸಿಂಗ್‌ ಹೇಳಿಕೆಗೆ ಇದೀಗ ಪರ ವಿರೋಧಗಳು ವ್ಯಕ್ತವಾಗುತ್ತಿದೆ.

ಹಾಗಾದ್ರೆ ಹರ್ಭಜನ್‌ ಸಿಂಗ್‌ ಹೇಳಿರೋದಾದ್ರು ಏನು ಅನ್ನೋದನ್ನ ನಾವು ನೋಡೋದಾದ್ರೆ.. ಮುಂಬೈ ತಂಡದ ಬ್ಯಾಟ್ಸಮನ್‌ ಆದ ಸೂರ್ಯಕುಮಾರ್‌ ಯಾದವ್‌ ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದು, ಮುಂಬೈ ಈ ಬಾರಿಯ ಐಪಿಎಲ್‌ನಲ್ಲಿ ಚಾಂಪಿಯನ್‌ ಆಗಲು ಪ್ರಮುಖ ಪಾತ್ರವನ್ನು ವಹಿಸಿದ್ರು, ಇನ್ನು ಸೂರ್ಯಕುಮಾರ್‌ ಯಾದವ್‌ ಅವರ ಬ್ಯಾಟಿಂಗ್‌ ಅನ್ನು ಅನೇಕ ಕ್ರಿಕೆಟ್‌ ದಿಗ್ಗಜರು ಮೆಚ್ಚಿಕೊಂಡಿದ್ರು.

ಇನ್ನು ಸೂರ್ಯಕುಮಾರ್‌ ಯಾದವ್‌ ಅವರು ಈ ಬಾರಿಯ ಆಸ್ಟ್ರೇಲಿಯಾ ಪ್ರವಾಸದ ಟೂರ್ನಿಯಲ್ಲಿ ತಂಡಕ್ಕೆ ಆಯ್ಕೆಯಾಗದೆ ಇರೋ ಬಗ್ಗೆ ಕೂಡ ಒಂದಿಷ್ಟು ಪರ ವಿರೋಧಕ್ಕೆ ಸಾಕ್ಷಿಯಾಗಿತ್ತು, ಇದೀಗ ಮತ್ತೆ ಸೂರ್ಯಕುಮಾರ್‌ ಯಾದವ್‌ ಅವರ ವಿಚಾರದಲ್ಲಿ ಹರ್ಭಜನ್‌ ಸಿಂಗ್‌ ಕೊಟ್ಟಿರೋ ಹೇಳಿಕೆ ಕೂಡ ಒಂದಿಷ್ಟು ಪರ ವಿರೋಧಕ್ಕೆ ಕಾರಣವಾಗಿದೆ. ಹೌದು ಹರ್ಭಜನ್‌ ಪ್ರಕಾರ ಸೂರ್ಯಕುಮಾರ್‌ ಯಾದವ್‌ ಭಾರತದ ಎಬಿಡಿ ವಿಲಿಯರ್ಸ್‌ ಅಂತ ಬಣ್ಣಿಸಿದ್ದಾರೆ.

ಸ್ಟಾರ್‌ ಸ್ಪೋಟ್ಸ್‌ನಲ್ಲಿ ಮಾತನಾಡುವ ವೇಳೆ ಹರ್ಭಜನ್‌ ಸೂರ್ಯಕುಮಾರ್‌ ಯಾದವ್‌ ಅವರ ಬ್ಯಾಟಿಂಗ್‌ ಬಗ್ಗೆ ಮಾತನಾಡಿದ್ದು, ಆತ ಭಾರತದ ಎಬಿಡಿ ವಿಲಿಯರ್ಸ್‌ ಎಂದು ಹಾಡಿಹೊಗಳಿದ್ದಾರೆ.

ಸೂರ್ಯಕುಮಾರ್‌ ಗೇಮ್‌ ಚೇಂಜರ್‌ ಆಟಗಾರ, ಅವರು ಮೊದಲ ಬಾಲಿನಿಂದಲೇ ಅಬ್ಬರಿಸುತ್ತಾರೆ. ಅವರು ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ, ಅವರು ಟೀಂ ಇಂಡಿಯಾದಲ್ಲಿ ಎಬಿಡಿ ವಿಲಿಯರ್ಸ್‌ ಇದ್ದ ಹಾಗೆ ಅಂತ ಹರ್ಭಜನ್‌ ಸಿಂಗ್‌ ಹಾಡಿಹೊಗಳಿದ್ದು, ಆತ ಟೀಂ ಇಂಡಿಯಾಗೆ ಆಯ್ಕೆಯಾಗಬೇಕಾಗಿತ್ತು, ಐಪಿಎಲ್‌ನಲ್ಲಿ ಉತ್ತಮ ಆಟವಾಡಿ ಗಮನ ಸೆಳೆದಿದ್ರು, ಅವರು ಪಕ್ಕಾ ಟೀಂ ಇಂಡಿಯಾಗೆ ಆಡುತ್ತಾರೆ. ಒಂದು ರೀತಿಯಲ್ಲಿ ಟೀಂ ಇಂಡಿಯಾದ ಎಬಿಡಿ ವಿಲಿಯರ್ಸ್‌ ಸೂರ್ಯಕುಮಾರ್‌ ಯಾದವ್‌ ಅಂತ ಭಜ್ಜಿ ಹೇಳಿದ್ದಾರೆ.

ಸದ್ಯ ಸೂರ್ಯಕುಮಾರ್‌ ಯಾದವ್‌ ಅವರನ್ನು ಎಬಿಡಿ ವಿಲಿಯರ್ಸ್‌ಗೆ ಹೋಲಿಕೆ ಮಾಡಿರೋ ಬಗ್ಗೆ ಕೆಲವ್ರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು, ಇನ್ನು ಕೆಲವ್ರು ಎಬಿಡಿ ಎಲ್ಲಿ ಸೂರ್ಯಕುಮಾರ್‌ ಎಲ್ಲಿ ಅಂತ ಟೀಕೆಯನ್ನು ಮಾಡಿದ್ದಾರೆ. ಹಾಗಾದ್ರೆ ನಿಮ್ಮ ಪ್ರಕಾರ ಹರ್ಭಜನ್‌ ಅವರ ಈ ಹೋಲಿಕೆಗೆ ನಿಮ್ಮ ಸಹಮತ ಇದ್ಯಾ, ನೀವ್‌ ಏನ್‌ ಹೇಳ್ತೀರಾ ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top