ಸೂಪರ್ ಓವರ್‍ಗೆ ಸೂಪರ್ ಓವರ್ ಆದ ಪಂಜಾಬ್ ಮುಂಬೈ ಮ್ಯಾಚ್

ಹೈವೋಲ್ಟಾಜ್ ಮ್ಯಾಚ್ ಪಂಜಾಬ್ ಮತ್ತು ಮುಂಬೈ ತಂಡದ ನಡುವಿನ ಹಣಾಹಣಿ ಸೂಪರ್ ಓವರ್‍ಗೆ ಸೂಪರ್ ಓವರ್ ಆದ ಘಟನೆ ನಡೆದಿದೆ. ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡ 177 ರನ್‍ಗಳ ಗುರಿಯನ್ನು ನೀಡಿತ್ತು, ಪಂಜಾಬ್ ತಂಡ ಕೆಎಲ್ ರಾಹುಲ್ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಉತ್ತಮ ಪ್ರದರ್ಶನ ನೀಡಿದ್ರು, ಮ್ಯಾಚ್ ಸೂಪರ್ ಓವರ್ ಹಂತ ತಲುಪಿತು ಮುಂಬೈ ನೀಡಿದ 177 ರನ್‍ಗಳನ್ನು ಗುರಿಹತ್ತುವಲ್ಲಿ ಸಮಬಲ ಸಾಧಿಸಿತು, ಇನ್ನು ಪಂದ್ಯ ಟೈ ಆದ ಕಾರಣ ಸೂಪರ್ ಓವರ್ ಆಯಿತು, ಇನ್ನು ಸೂಪರ್ ಓವರ್‍ನಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡ 6 ಬಾಲ್‍ಗಳಲ್ಲಿ 5 ರನ್ ಗಳಿಸುವ ಮೂಲಕ 6 ರನ್‍ಗಳ ಟಾರ್ಗೆಟ್ ನೀಡಿತು. ಈ ಮೊತ್ತವನ್ನು ಬೆನ್ನು ಹತ್ತಿದ ಮುಂಬೈ ತಂಡ 5 ರನ್ ಗಳಿಸಿಕೊಳ್ಳುವ ಮೂಲಕ ಮತ್ತೆ ಪಂದ್ಯ ಟೈ ಆಗಿದ್ದು ಈ ಮೂಲಕ ಐಪಿಎಲ್‍ನಲ್ಲಿ ಮೊದಲ ಬಾರಿಗೆ ಸೂಪರ್ ಓವರ್ ಮ್ಯಾಚ್‍ನಲ್ಲಿ ಸೂಪರ್ ಓವರ್ ಪಂದ್ಯಕ್ಕೆ ಸಾಕ್ಷಿಯಾಯ್ತು, ಇನ್ನು ಎರಡನೇ ಸೂಪರ್ ಓವರ್‍ನಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡ 11 ರನ್‍ಗಳಿಸುವ ಮೂಲಕ ಪಂಜಾಬ್‍ಗೆ 12ರನ್‍ಗಳ ಟಾರ್ಗೆಟ್ ನೀಡಿತ್ತು. 12ರನ್‍ಗಳ ಬೆನ್ನತಿದ ಪಂಜಾಬ್ ತಂಡ ಗೇಲ್ ಮತ್ತು ಮಯಾಂಕ್ ಅಗರ್‍ವಾಲ್ ಉತ್ತಮ ಬ್ಯಾಟಿಮಗ್ ನೆರವಿನಿಂದ ಪಂಜಾಬ್ ತಂಡ 12 ರನ್‍ಗಳ ಗುರಿಯನ್ನು ಮುಟ್ಟುವ ಮೂಲಕ ಸೂಪರ್ ಓವರ್‍ನ ಸೂಪರ್ ಓವರ್‍ನಲ್ಲಿ ಗೆಲುವನ್ನು ಸಾಧಿಸೋ ಮೂಲಕ ಭರ್ಜರಿ ಜಯವನ್ನು ಸಾಧಿಸಿದ್ರು, ಇನ್ನು ಇದು ಇಂದಿನ ಎರಡನೇ ಸೂಪರ್ ಓವರ್ ಪಂದ್ಯವಾದ್ರೆ ಮುಂಬೈ ಮತ್ತು ಪಂಜಾಬ್ ತಂಡಕ್ಕೆ ಈ ಐಪಿಎಲ್ ಸೀಸನ್‍ನ ಎರಡನೇ ಸೂಪರ್ ಓವರ್ ಮ್ಯಾಚ್ ಕೂಡ ಆಗಿದೆ.

ಇನ್ನು ಇಂದು ನಡೆದ ಎರಡು ಪಂದ್ಯಗಳು ಸಹ ಸೂಪರ್ ಓವರ್‍ಗಳಿಗೆ ಸಾಕ್ಷಿಯಾಗಿದ್ದು,ಮೊದಲ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಬಾದ್ ಮತ್ತು ಕೆಕೆಆರ್ ನಡುವಿನ ಪಂದ್ಯದಲ್ಲಿ ಕೆಕೆಆರ್ ತಂಡ ಸೂಪರ್ ಓವರ್‍ನಲ್ಲಿ ಗೆಲುವು ದಾಖಲಿಸಿತ್ತು, ಇದೀಗ ಎರಡನೇ ಪಂದ್ಯವೂ ಸೂಪರ್ ಓವರ್‍ಗೆ ಸಾಕ್ಷಿ ಆಗುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಒಂದೇ ದಿನ ಎರಡು ಪಂದ್ಯಗಳು ಸೂಪರ್ ಓವರ್‍ನಲ್ಲಿ ಮುಕ್ತಾಯವಾದ್ರೆ, ಒಂದೇ ಪಂದ್ಯದಲ್ಲಿ ಎರಡು ಸೂಪರ್ ಓವರ್ ಆಗುವ ಮೂಲಕ ಮತ್ತೊಂದು ದಾಖಲೆ ಬರೆಯಿತು.

ಇವತ್ತಿನ ಮೂರು ಸೂಪರ್ ಓವರ್ ಪಂದ್ಯಗಳು ಹೇಗಿತ್ತು, ನೀವ್ ಎಂಜಾಯ್ ಮಾಡಿದ್ರ. ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top