ಸೂಪರ್‌ ಓವರ್‌ನಲ್ಲಿ ಕೊಹ್ಲಿ ಬ್ಯಾಟಿಂಗ್‌ ಬಂದಿದ್ಯಾಕೆ..ಕೊಹ್ಲಿ ಹೇಳಿದ್ದೇನು..?

ನಿನ್ನೆ ನಡೆದ ಆರ್‌ಸಿಬಿ ಮತ್ತು ಮುಂಬೈ ತಂಡಗಳ ನಡುವಿನ ಪಂದ್ಯದಲ್ಲಿ ಆರ್‌ಸಿಬಿ ಸೂಪರ್‌ ಓವರ್‌ನಲ್ಲಿ ಜಯ ಗಳಿಸಿತು. ಪಂದ್ಯ ಟೈ ಆದ ನಂತರ ಸೂಪರ್‌ ಓವರ್‌ನಲ್ಲಿ ಮುಂಬೈ ನೀಡಿದ 8ರನ್‌ಗಳ ಗುರಿಯನ್ನು ಆರ್‌ಸಿಬಿ ಯಾವ ರೀತಿ ಎದುರಿಸುತ್ತೆ. ಯಾರು ಓಪನಿಂಗ್‌ ಬರ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಮನೆಮಾಡಿತ್ತು, ಇನ್ನು ಆರ್‌ಸಿಬಿ ಪರ ಎಬಿಡಿ ಬರೋದು ಪಕ್ಕಾ ಆದ್ರೆ ಎಬಿಡಿ ಜೊತೆ ಯಾರು ಬರ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು.

ಇನ್ನು ವಿರಾಟ್‌ ಫಾರ್ಮ್‌ನಲ್ಲಿ ಇರದ ಕಾರಣ ವಿರಾಟ್‌ ಬರೋದು ಡೌಟ್‌ ಬಂದರು ಆಡೋಲ್ಲ ಅನ್ನೋ ಮಾತುಗಳು ಸಹ ಕೇಳಿ ಬಂತು. ಆದ್ರೆ ಎಲ್ಲರ ಲೆಕ್ಕಾಚಾರ ಉಲ್ಟಾ ಮಾಡಿದ ವಿರಾಟ್‌ ಎಬಿಡಿ ಜೊತೆ ಸೂಪರ್‌ ಓವರ್‌ನಲ್ಲಿ ಓಪನಿಂಗ್‌ ಬಂದು, ಎಲ್ಲರ ಹುಬ್ಬು ಏರುವಂತೆ ಮಾಡಿದ್ರು, ಇನ್ನು ಕೊನೆಯ ಬಾಲ್‌ನಲ್ಲಿ ಬೌಂಡರಿ ಹೊಡೆಯುವ ಮೂಲಕ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದ್ರು, ಆದ್ರೀಗ ಸೂಪರ್‌ ಓವರ್‌ನಲ್ಲಿ ವಿರಾಟ್‌ ಯಾಕೆ ಓಪನಿಂಗ್‌ ಬಂದ್ರು ಅನ್ನೋ ಸಂಗತಿಯನ್ನ ಸ್ವತಃ ವಿರಾಟ್‌ ಹೇಳಿಕೊಂಡಿದ್ದಾರೆ.

ವಿರಾಟ್‌ ಓಪನಿಂಗ್‌ ಬಂದಾಗ ಫಾರ್ಮ್‌ನಲ್ಲಿ ಇರದ ವ್ಯಕ್ತಿ ಬುಮ್ರಾ ಬೌಲಿಂಗ್‌ನಲ್ಲಿ ರನ್‌ ಹೊಡೆಯಲು ಪರದಾಡುತ್ತಾರೆ ಎಂದು ಅಂದು ಕೊಂಡಿದ್ರು, ಆದ್ರೆ ಪಂದ್ಯದ ನಂತರ ಹೇಳಿಕೆ ನೀಡಿದ್ದು,

ವಿಕೆಟ್‌ಗಳ ನಡುವೆ ವೇಗವಾಗಿ ಓಡಿ ರನ್‌ ಗಳಿಸುವುದನ್ನು ಪರಿಗಣಿಸಿ ಈ ನಿರ್ಧಾರವನ್ನು ನಾನು ತೆಗೆದುಕೊಂಡೆ ಯಾರು ಜೋಡಿಯಾಗಿ ಹೋಗಿ ಪಂದ್ಯವನ್ನು ಗೆಲ್ಲಲು ಯಾರು ಉತ್ತಮ ಎಂದು ಯೋಚಿಸಿದಾಗ ನಾನು ಮತ್ತು ಎಬಿಡಿ ಉತ್ತಮ ಎಂದಯ ಅನಿಸಿತು ಹಾಗಾಗಿ ಇಬ್ಬರು ಬಂದೆವು ಅದರಂತೆ ಜವಾಬ್ದಾರಿ ನಿಭಾಯಿಸಿದೆವು ಎಂದು ಹೇಳಿದ್ದಾರೆ.

ಇನ್ನು ʻಮುಂಬೈ ಇಂಡಿಯನ್ಸ್‌ ಆಟಗಾರರು ಚೆನ್ನಾಗಿ ಆಡಿದ್ದಾರೆ. ಅವರು ತಾಳ್ಮೆಯಿಂದ ಆಡಿದ್ದಾರೆ, ನಾವು ಕೆಲವು ವಿಷಯಗಳನ್ನು ಕಾರ್ಯಗತಗೊಳಿಸಲು ಬಯಸಿದ್ದೆವು, ಅದರಂತೆ ನಾವು ಗೆಲುವನ್ನು ಸಾಧಿಸಿದ್ದೇವೆ ಎಂದು ವಿರಾಟ್‌ ಹೇಳಿದ್ದಾರೆ.

ಇನ್ನು ತಂಡದಲ್ಲಿ ವಾಷಿಂಗ್‌ಟನ್‌ ಸುಂದರ್‌ ಮತ್ತು ನವದೀಪ್‌ ಶೈನಿಯ ಪ್ರದರ್ಶನ ಮೆಚ್ಚಿಕೊಂಡ ವಿರಾಟ್‌ ಗೆಲುವಿನಲ್ಲಿ ತಂಡದ ಎಲ್ಲಾ ಆಟಗಾರರ ಪಾತ್ರ ಮುಖ್ಯವಾಗಿತ್ತು ಎಂದು ಗೆಲುವಿನ ಖುಷಿಯನ್ನು ಹಂಚಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top