ಸುಕ್ಕಾ ಸೂರಿಯನ್ನು ನದಿ..ಧ್ಯಾನ..ಅಂತ ಹೋಲಿಸಿದ ಡಾಲಿ..!

ಸುಕ್ಕಾ ಸೂರಿ,ಡಾಲಿ ಧನಂಜಯ್ ಕಾಂಬೀನೇಷನ್ ನಲ್ಲಿ ಬರ್ತಾ ಇರೋ ಸಿನಿಮಾ ‘ ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾ,ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದ್ದು,ಇದೇ ಫೆಬ್ರವರಿ 21ರಂದು ಸಿನಿಮಾ ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಲಿದೆ.. ಟ್ರೈಲರ್ ಮೂಲಕ ಸಖತ್ ಸೌಂಡ್ ಮಾಡ್ತಾ ಇರೋ PMT ಡಾಲಿ ಧನಂಜಯ್ ಗೆ ಮತ್ತೊಂದು ಮೈಲಿಗಲ್ಲು ತಂದುಕೊಡೋದ್ರಲ್ಲಿ ಯಾವುದೇ ಅನುಮಾನವಿಲ್ಲ.. ಹೀಗಿರುವಾಗಲೇ ಡಾಲಿ ಸುಕ್ಕಾ ಸೂರಿಯನ್ನು ತಮ್ಮದೇ ಸ್ಟೈಲ್ ನಲ್ಲಿ ವ್ಯಾಖ್ಯಾನ ಮಾಡಿ ಬಣ್ಣಿಸಿದ್ದಾರೆ.

ನಿರ್ದೇಶಕ ಸೂರಿ ಇವರು ನದಿಯಂತೆ. ನಿರಂತರ ಹರಿವು, ಹುಡುಕಾಟ, ಧ್ಯಾನಸ್ಥ ಸ್ಥಿತಿ. ಅನುಭವಗಳ ಆಗರ.
ಈ ಬಾರಿ ಶಿವರಾತ್ರಿಗೆ ಮತ್ತೊಂದಿಷ್ಟು ಬದುಕಿನ ಪ್ರಶ್ನೆಗಳಿಗೆ ಉತ್ತರದ ಹುಡುಕಾಟದೊಂದಿಗೆ ಬರುತ್ತಿದೆ ‘ಪಾಪ್ಕಾರ್ನ್ ಮಂಕಿ ಟೈಗರ್’ ಎಂದು ಧನಂಜಯ್ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top