ಸಿದ್ಧಾರ್ಥ್ ಅದೆಷ್ಟೋ ಮಂದಿಗೆ ಉದ್ಯೋಗ ನೀಡಿ ಬದುಕಿಗೆ ದಾರಿಯಾದ ವ್ಯಕ್ತಿ.!

siddharth lifestory in kannada

ಸಿದ್ಧಾರ್ಥ್…ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ಅಳಿಯ…ಮಗ…! ಸಿದ್ಧಾರ್ಥ್ ಅಂದ್ರೆ ಅಷ್ಟೇ ಅಲ್ಲ…ಅದೆಷ್ಟೋ ಮಂದಿಗೆ ಉದ್ಯೋಗ ನೀಡಿ ಬದುಕಿಗೆ ದಾರಿಯಾದ ವ್ಯಕ್ತಿ….
ಕಾಫಿನಾಡು,‌ ಕಾಫಿಯ ತವರು ಚಿಕ್ಕಮಗಳೂರಿನವರು..ತನ್ನೂರಿನ ಕಾಫಿ ಘಮವನ್ನು ಇಡೀ ವಿಶ್ವಕ್ಕೆ ಪಸರಿಸಿ…ಯಶಸ್ವಿ ಉದ್ಯಮಿಯಾದವರು…ಹೊಸ ಕಲ್ಪನೆಯಲ್ಲಿ‌ ಯಶಸ್ಸು ಕಂಡವರು..! ಹೆಚ್ಚು ಕಮ್ಮಿ ಎರಡು ದಶಕಗಳ ಕಾಲ ಉದ್ಯಮ ಜಗತ್ತನ್ನಾಳಿದವರು ….
ಇವರ ಕುಟುಂಬದ ಆಧಾರವೂ ಕಾಫಿ ತೋಟವೇ ಆಗಿತ್ತು. 140 ವರ್ಷಗಳಿಂದ ಕಾಫಿ ತೋಟ ಮಾಡಿಕೊಂಡು ಬಂದಿದ್ದ ಕುಟುಂಬದಲ್ಲಿ ಹುಟ್ಟಿದ ಸಿದ್ದಾರ್ಥ್ ಕಾಫಿಯ ಮೂಲಕವೇ ಶ್ರೀಮಂತ ಉದ್ಯಮಿಯಾಗಿ ಬೆಳೆದವರು.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತರ ಪದವಿ ಪಡೆದ ಸಿದ್ಧಾರ್ಥ್ ಅವರು 1983-84ರ ವೇಳೆಯಲ್ಲಿ ಮುಂಬೈನ ಜೆಎಂ ಫೈನಾನ್ಸಿಯಲ್​ ಲಿಮಿಟೆಡ್​ ಗೆ ಕೆಲಸಕ್ಕೆ ಸೇರಿದ್ರು. ಅಲ್ಲಿ ಸಿದ್ದಾರ್ಥ್ ಮಹೇಂದ್ರ ಕಂಪನಿ ಅಡಿಯಲ್ಲಿ ಭಾರತೀಯ ಷೇರು ಮಾರುಕಟ್ಟೆಯ ನಿರ್ವಹಣಾ ಮತ್ತು ಸುರಕ್ಷಾ ವಹಿವಾಟಿನ ನಿರ್ವಹಣಾ ತರಬೇತುದಾರರಾಗಿ ಸೇವೆ ಸಲ್ಲಿಸಿದರು.

ಸಿದ್ಧಾರ್ಥ್ ಮುಂಬೈ ಸೇರುವಾಗ ಅವರಿಗೆ ಕೇವಲ 24 ವರ್ಷ…!

ಸಿದ್ಧಾರ್ಥ್ ಅದೆಷ್ಟೋ ಮಂದಿಗೆ ಉದ್ಯೋಗ ನೀಡಿ ಬದುಕಿಗೆ ದಾರಿಯಾದ ವ್ಯಕ್ತಿ

ತನ್ನ 24ನೇ ವರ್ಷಕ್ಕೆ ಮುಂಬೈ ಸೇರಿದ ಅವರು ಅಲ್ಲಿದ್ದುದು‌ ಎರಡೇ ವರ್ಷ…ಆ ಬಳಿಕ ಬೆಂಗಳೂರ ಕಡೆಗೆ ಪಯಣ…ಮುಂಬೈ ಬಿಟ್ಟು ಬೆಂಗಳೂರು ಬಂದ ಮಗನಿಗೆ ತಂದೆಯೇ ಬೆನ್ನೆಲುಬಾಗಿ ನಿಂತರು.. ಆಗಿನ ಕಾಲದಲ್ಲೇ 30 ಸಾವಿರ ರೂ ನೀಡಿ ಹೊಸ ಉದ್ಯಮಕ್ಕೆ ಸಾಥ್ ನೀಡಿದರು.
ತಂದೆ ಕೊಟ್ಟ ಹಣದಲ್ಲಿ ಷೇರು ವಹಿವಾಟಿನ ಬಗ್ಗೆ ತಿಳಿದಿದ್ದ ಸಿದ್ಧಾರ್ಥ್​​ ಸೆವನ್​​ ಸೆಕ್ಯೂರಿಟಿ ಎನ್ನುವ  ಕಂಪನಿ ಹುಟ್ಟು ಹಾಕುವ ಜೊತೆಗೆ, ಅಪ್ಪ ಕೊಟ್ಟ 30,000 ಹಣದಿಂದ ಷೇರು ಮಾರುಕಟ್ಟೆ ಕಾರ್ಡ್​ ನ್ನೂ ಪಡೆದರು. 2000ರಲ್ಲಿ ಈ ಕಂಪನಿಗೆ ವೇ2ವೆಲ್ತ್​ ಎಂದು ಮರುನಾಮಕರಣ ಮಾಡಿದರು.

1985ರಲ್ಲಿ ಮುಂಬೈನಲ್ಲಿ ಷೇರು ಮಾರುಕಟ್ಟೆ ಹೂಡಿಕೆದಾರ ಮತ್ತು ಮಾಲೀಕರಾಗಿದ್ದ ಸಿದ್ದಾರ್ಥ್​​ ಈ ಸಮಯದಲ್ಲಿ 10 ಸಾವಿರ ಎಕರೆ ಕಾಫಿ ತೋಟವನ್ನು ಖರೀದಿ ಮಾಡಿದರು.
90ರ ದಶಕದಲ್ಲಿ ಕಾಫಿ ಉದ್ಯಮ ಉದಾರವಾದಿತ್ವಕ್ಕೆ ಒಳಗಾಯಿತೊ ಅಲ್ಲಿಂದ ಸಿದ್ಧಾರ್ಥ್ ಅವರ ಉದ್ಯಮ ಕೂಡ ಬೆಳೀತಾ ಹೋಯಿತು. ಸಿದ್ಧಾರ್ಥ್ ಹೆಚ್ಚೆಚ್ಚು ತೋಟ ಖರೀದಿಗೆ ಮುಂದಾದರು.

1993ರ ವೇಳೆಯಲ್ಲಾಗಲೇ ಅಮಾಲ್ಗಮೇಟೆಡ್ ಬೀನ್ ಕಾಫಿ ಟ್ರೇಡಿಂಗ್ ಕಂಪನಿ ಲಿಮಿಟೆಡ್ ಹುಟ್ಟು ಹಾಕಿದ್ದ ಸಿದ್ಧಾರ್ಥ್​ ಕಾಫಿ ರಫ್ತಿನತ್ತ ಗಮನವನ್ನು ಕೇಂದ್ರಿಕರಿಸಿದರು. ತಮ್ಮ ತೋಟದ ಮೂಲಕ ವಾರ್ಷಿಕವಾಗಿ 3,000 ಟನ್​ ಕಾಫಿ ಉತ್ಪಾದಿಸುತ್ತಿದ್ದ ಸಿದ್ಧಾರ್ಥ್  ಕಂಪನಿ ಮೂಲಕ 20,000 ಟನ್​ ರಫ್ತು ಉದ್ಯಮ ನಡೆಸುತ್ತಿದ್ದರು…! ಎರಡು ವರ್ಷದೊಳಗೆ ದೇಶದ ರಫ್ತು ಉದ್ಯಮದಲ್ಲಿ ನಂ 2ನೇ ಸ್ಥಾನವನ್ನು ಪಡೆಯುವಲ್ಲಿಯೂ ಗೆದ್ದರು.

ಅದು 1999 ರ ಸಮಯ..ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿ ಮೊದಲ ಬಾರಿ ಕೆಫೆ ಕಾಫಿ ಡೇ ಶುರು ಮಾಡಿದರು. ಅಲ್ಲಿ ಕಾರ ಜೊತೆ ಒಂದು ಗಂಟೆ ಇಂಟರ್ ನೆಟ್ ಗೆ 100 ರೂ ಬಿಲ್ ಮಾಡ್ತಿದ್ರು. ಆಗಲೇ ಐಟಿ ಉದ್ಯಮ ಉತ್ತುಂಗದಲ್ಲಿತ್ತು. ಐಟಿ‌ ಉದ್ಯೋಗಿಗಳ‌ ಲೈಫ್ ಸ್ಟೈಲ್ ಗೆ ಅದು ತಕ್ಕದಾಗಿತ್ತು..!

ನೋಡು ನೋಡುತ್ತಿದ್ದಂತೆ ಕಾಫಿ ಡೇ ಉದ್ಯಮವನ್ನು ಹಂತ ಹಂತವಾಗಿ ದೇಶಾದ್ಯಂತ ವಿಸ್ತರಿಸಿದರು. ಇಂದು ದೇಶಾದ್ಯಂತ 1700 ಕೆಫೆಗಳಿವೆ…48 ಸಾವಿರ ಕಾಫಿ ತಯಾರಿಸುವ ಮೆಷಿನ್ ಹಾಗೂ‌532 ಕಿಯಸ್ಕೋ , 403 ಕಾಫಿ ಮಾರಾಟ ಮಳಿಗೆಗಳಿವೆ. ವಾರ್ಷಿಕ ವಹಿವಾಟು 4,264 ಕೋಟಿ…!

ಇನ್ನು ಸಿದ್ದಾರ್ಥ್ ಎಂದರೆ ಬರೀ ಕಾಫಿ ಮಾಲೀಕರಲ್ಲ.ಅದರ ಜೊತೆಗೆ ಐಷಾರಾಮಿ ರೆಸಾರ್ಟ್​ ಉದ್ಯಮಿಯೂ ಹೌದು. 7 ಸ್ಟಾರ್​ ರೆಸಾರ್ಟ್​ಗಳಾದ ಸರಾಯಿ ಮತ್ತು ಸಿಕಾಡಾ ಮಾಲೀಕರಾಗಿದ್ದರು ಸಿದ್ದಾರ್ಥ್..
ಇವರೀಗ…ಇದ್ದಕ್ಕಿದ್ದಂತೆ ನಾಪತ್ತೆ ಆಗಿರುವುದು ನಿಜಕ್ಕೂ ಬೇಸರದ ಸಂಗತಿ…ಅವರು ಸೌಖ್ಯವಾಗಿ ಮರಳಲಿ ಅನ್ನೋದೇ ಆಶಯ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top