ಸಾಲ ಮನ್ನಾ ಮಾಡಿದ್ದಕ್ಕೆ ಜೋಳದ ರೊಟ್ಟಿ ಉಡುಗೊರೆ ನೀಡಿದ ರೈತ..!

ಕುಮಾರಸ್ವಾಮಿಯವರ ಸರ್ಕಾರ ಇದ್ದ ಸಂಧರ್ಭದಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಸಾಲ ಮನ್ನಾ ಜಾರಿಗೆ ಮಾಡಿದ್ದರು. ಇದರಿದಾಂಗಿ ಸಾವಿರಾರು ರೈತರು ಇದರ ಲಾಭವನ್ನು ಪಡೆದುಕೊಂಡಿದ್ದರು. ಈ ಯೋಜನೆಯಿಂದ ಸಹಾಯ ಪಡೆದ ಅನೇಕರು ಈಗಲೂ ಸಹ ಕುಮಾರಸ್ವಾಮಿಯವರನ್ನು ನೆನಪಿಸಿಕೊಳ್ಳುತ್ತಾರೆ. ಅದೇ ರೀತಿ ಈ ಯೋಜನೆಯಿಂದ ಸಹಾಯ ಪಡೆದ ವ್ಯಕ್ತಿಯೊಬ್ಬರು ಕುಮಾರಸ್ವಾಮಿ ಅವರಿಗೆ ಪ್ರೀತಿಯಿಂದ ಉಡುಗೊರೆಯೊಂದನ್ನು ಕಳುಹಿಸಿದ್ದಾರೆ.

ಹುಬ್ಬಳ್ಳಿಯ, ಕಿರೇಸೂರು ಗ್ರಾಮದ ಗೋವಿಂದಪ್ಪ ಎಂಬ ರೈತ ಕುಮಾರಸ್ವಾಮಿಯವರಿಗೆ ಉಡುಗೊರೆಯನ್ನು ಕಳುಹಿಸಿದ್ದಾರೆ. ಈ ರೈತ ತಮ್ಮ ಹೊಲದಲ್ಲಿ ಬೆಳೆದ ಜೋಳದಿಂದ ಮಾಡಿದಂತಹ ರೊಟ್ಟಿ ಮತ್ತು ಶೇಂಗಾ ಚಟ್ನಿ ಪುಡಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಇನ್ನು ಸಾಲ ಮಾಡಿಕೊಂಡು ಆತ್ಮಹತ್ಯೆ ನಿರ್ಧರಿಸಿದ್ದ ಗೋವಿಂದಪ್ಪ, ಕುಮಾರಸ್ವಾಮಿಯವರು ಮಾಡಿದ ಸಾಲ ಮನ್ನಾದಿಂದಾಗಿ ಅವರು ಮತ್ತೆ ಜೀವನವನ್ನು ರೂಪಿಸಿಕೊಳ್ಳಲು ಸಹಾಯವಾಯಿತಂತೆ, ಇದರಿಂದಾಗಿ ಕುಮಾರಸ್ವಾಮಿಯವರಿಗೆ ಕೃತಜ್ಞತೆ ಹೇಳುವ ಸಲುವಾಗಿ ಅವರು ತಮ್ಮ ಹೊಲದಲ್ಲಿ ಬೆಳೆದ ಜೋಳದಿಂದ ಮಾಡಿದ ರೊಟ್ಟಿಯನ್ನು ಕುಮಾರಸ್ವಾಮಿಯವರಿಗೆ ಹುಟ್ಟುಹಬ್ಬದಂದು ಉಡುಗೊರೆಯಾಗಿ ಕಳುಹಿಸಿಕೊಟ್ಟಿದ್ದಾರೆ.

ಇನ್ನು ಕುಮಾರಸ್ವಾಮಿಯವರಿಗೆ ಈ ಉಡುಗೊರೆಯ ಡಬ್ಬಿ ಬಂದಾಗ ಮೊದಲು ಗಾಬರಿಯಾಗಿದ್ದು, ನಂತರ ಭದ್ರತಾ ಸಿಬ್ಬಂಧಿಗಳು ಅದನ್ನು ಪರಿಶೀಲಿಸಿ ತೆಗೆದಾಗ ಅದರಲ್ಲಿ ಜೋಳದ ರೊಟ್ಟಿ , ಚಟ್ನಿ ಪುಡಿ ಜೊತೆಗೆ ಒಂದು ಪತ್ರ ಸಿಕ್ಕಿದ್ದು. ಆ ಪತ್ರ ಓದಿದ ಕುಮಾರಸ್ವಾಮಿಯವರು ಭಾವುಕರಾಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top