ಸವರ್ಣದೀರ್ಘಸಂಧಿ ಬಗ್ಗೆ ಯೋಗರಾಜ್ ಭಟ್ಟರು ಹೀಗಂದಿದ್ಯಾಕೆ.?!

ಟ್ರೈಲರ್ ಮೂಲಕ ಸಖತ್ ಸೌಂಡ್ ಮಾಡ್ತಾ ಇರೋ ‘ ಸವರ್ಣ ದೀರ್ಘ ಸಂಧಿ’ ಸಿನಿಮಾಗೆ ಈಗ ಆನೆ ಬಲ ಬಂದಂತಾಗಿದೆ, ಮನೋಮೂರ್ತಿ ಮೆಲೋಡಿ ಮ್ಯೂಸಿಕ್ ಮೂಲಕ ಸಿನಿರಸಿಕರನ್ನು ತನ್ನ ಸಿನಿಮಾ ಕಡೆ ನೋಡುವ ಹಾಗೆ ಮಾಡುತ್ತಿರುವ ಈ ಚಿತ್ರದ ಆಡಿಯೋವನ್ನು ಸ್ಯಾಂಡಲ್‍ವುಡ್‍ನ ವಿಕಟ ಕವಿ ಯೋಗರಾಜ್ ಭಟ್ ಬಿಡುಗಡೆ ಮಾಡಿದ್ರು, ಚಿತ್ರಕ್ಕೆ ಬಂಡವಾಳ ಹೂಡಿ ಮ್ಯೂಸಿಕ್ ನೀಡಿರೋ ಮನೋಮೂರ್ತಿ ಮತ್ತು ಯೋಗರಾಜ್ ಭಟ್ ಇಬ್ಬರ ನಡುವೆ ಅವಿನಾಭಾವ ನಂಟಿದ್ದು, ಮನೋಮೂರ್ತಿಯವರ ಕರೆಗೆ ‘ಸವರ್ಣ ದೀರ್ಘ ಸಂಧಿ’ ಸಿನಿಮಾದ ಆಡಿಯೋ ಲಾಂಚ್ ಮಾಡಿದ ಭಟ್ರು, ಅವರ ಸ್ಟೈಲ್ ನಲ್ಲೇ ಇದು ಹೊಸ ಬ್ರ್ಯಾಂಡ್ ಟೀಂ, ಇದು ಹೊಸ ತಳಿಯ ಸಿನಿಮಾ, ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಭಾಷ್ಯ ಬರೆಯೋ ಸಾಧ್ಯತೆ ಇದೆ, ಈ ಸಿನಿಮಾ ಗೆಲ್ಲಬೇಕು..ನಿಲ್ಲಬೇಕು, ಆ ಅರ್ಹತೆ ಈ ಸಿನಿಮಾಗೆ ಮತ್ತು ಚಿತ್ರತಂಡಕ್ಕೆ ಇದೆ ಅಂತ ಹೇಳಿದ ಭಟ್ರು, ವೀರೇಂದ್ರ ಶೆಟ್ಟಿ ನಿರ್ದೇಶನ ಮತ್ತು ನಟನೆಗೆ ಗುಡ್ ಲಕ್ ಹೇಳಿದ್ರು ,ಇನ್ನು ಸವರ್ಣ ದೀರ್ಘ ಸಂಧಿ ಇದೇ ತಿಂಗಳು‌ ರಾಜ್ಯಾದ್ಯಂತ ರಿಲೀಸ್ ಆಗಲಿದ್ದು.ಈ ಚಿತ್ರಕ್ಕೆ ಯೋಗರಾಜ್ ಭಟ್ ಮಾತು ಇನ್ನಷ್ಟು ಆನೆ ಬಲ ಬಂದಂತಾಗಿದೆ..

ಸವರ್ಣ ದೀರ್ಘ ಸಂಧಿ ಸಿನಿಮಾವನ್ನ ವೀರೇಂದ್ರ ಶೆಟ್ಟಿ ಡೈರೆಕ್ಟ್ ಮಾಡಿದ್ದು, ಚಿತ್ರದಲ್ಲಿ ವೀರೇಂದ್ರ ಶೆಟ್ಟಿ, ಕೃಷ್ಣ, ಪದ್ಮಜರಾವ್ ಸೇರಿ ಪ್ರತಿಭಾವಂತ ತಾರಾಬಳಗವಿದೆ. ಮನೂಮೂರ್ತಿ ಸಂಗೀತದ ಜೊತೆಗೆ ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ. ವೀರು ಟಾಕೀಸ್, ಲೈಲಾಕ್ ಎಂಟ್ರಟೈನ್ಮೆಂಟ್ಸ್ ಬ್ಯಾನರ್ ನಲ್ಲಿ ಲುಷಿಂಗ್ಟನ್ ಥಾಮಸ್, ಪಿವಿಆರ್ ಹೇಮಂತ್, ವೀರೇಂದ್ರ ಶೆಟ್ಟಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top