ಸಲ್ಲು ಹೇಳಿದ ಆ ಒಂದು ಹೇಳಿಕೆಗೆ ಅಭಿಮಾನಿಗಳೇ ಶಾಕ್..!

ಬಾಲಿವುಡ್‌ನ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಸಲ್ಮಾನ್ ಖಾನ್ ಹೇಳಿರೋ ಆ ಒಂದು ಹೇಳಿಕೆಗೆ ಈಗ ಸಲ್ಲು ಲೇಡಿ ಫ್ಯಾನ್ಸ್ ಫುಲ್ ಶಾಕ್ ಆಗಿದ್ದಾರೆ. ಸಲ್ಲು ಏನ್ ಮಾಡಿದ್ರು ಸುದ್ದಿಯಾಗೋ ಈ ಟೈಂನಲ್ಲಿ ಸಲ್ಲು ಜೀವನದಲ್ಲಿ ಮದುವೆ ಭಾಗ್ಯವೆ ಬರಲಿಲ್ಲ, ಆದ್ರೆ ಸಲ್ಲು ಮದುವೆ ವಿಚಾರವಾಗಿ ಈಗ ಬಾಯಿ ಬಿಟ್ಟಿದ್ದಾರೆ.

ಹೌದು ಸಲ್ಮಾನ್ ಖಾನ್ ಗೆ ಯಾವ ಹುಡುಗಿಯೂ ಮದುವೆಯಾಗ್ತೀಯಾ ಅಂತ ಕೇಳೇ ಇಲ್ವಂತೆ, ಇತ್ತೀಚೆಗೆ ಕಾರ್ಯಕ್ರಮದಲ್ಲಿ ಮಾತನಾಡುವಾಗ ಭಾರತ್ ಸಿನಿಮಾದಲ್ಲಿ ಕತ್ರಿನಾ ಕೈಫ್ ಸಲ್ಲುಗೆ ನೀವೂ ಒಳ್ಳೆಯವರ ರೀತಿ ಕಾಣುತ್ತೀರಾ ಮದುವೆಯಾವಾಗ ಆಗೋಣ ಅಂತ ಕೇಳೋ ಸೀನ್ ಬಗ್ಗೆ ಕೇಳಿದಾಗ ನನಗೆ ಆ ವಿಚಾರದಲ್ಲಿ ನನಗೆ ಬೇಸರವಿದೆ ನನಗೆ ಮದುವೆಯಾಗ್ತೀಯಾ ಅಂತ ಯಾರು ಕೇಳಲೇ ಇಲ್ಲ ಅಂತ ಹೇಳಿದ ಸಲ್ಲು ನನಗೆ ಕ್ಯಾಂಡಲ್ ಲೈಟ್ ಡಿನ್ನರ್ ಇಷ್ಟವಾಗೋದಿಲ್ಲ, ನಾನು ಏನು ತಿನ್ನುತ್ತೀನಿ ಅಂತ ಗೊತ್ತಾಗೋಲ್ಲ ಅಂತ ಹೇಳಿದ ಸಲ್ಲು ನನಗೆ ಮದುವೆಗೆ ಯಾರು ಅಪ್ರೋಚ್ ಮಾಡಿಲ್ಲ ಅನ್ನೋದೆ ಬೇಸರದ ವಿಷಯ ಅಂತ ಸಲ್ಲು ಹೇಳಿದ್ದಾರೆ. ಈ ವಿಷಯ ಕೇಳಿದ ಸಲ್ಲು ಫಿಮೇಲ್ ಫ್ಯಾನ್ಸ್ ಅಯ್ಯೋ ನಾನ್ ಸಲ್ಲು ಮದುವೆಯಾಗ್ತೀನಿ ಅಂತ ತುದಿಗಾಲಿನಲ್ಲಿ ನಿಂತಿದ್ದಾರಂತೆ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top