ಸಲಗ ಚಿತ್ರಕ್ಕೆ ಸಿಕ್ತು ಪುನೀತ್ ಪವರ್..!

ದುನಿಯಾ ವಿಜಿ ಚೊಚ್ಚಲ ನಿರ್ದೇಶನದ ಚಿತ್ರ ಸಲಗಕ್ಕೆ ಈಗ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸಾಥ್ ನೀಡಿದ್ದಾರೆ. ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ಚಿತ್ರವಾಗಿರೋ ಸಲಗ ಈಗಾಗಲೇ ಮೇಕಿಂಗ್ ಟ್ರೈಲರ್ ಮತ್ತು ಸೂರಿ ಅಣ್ಣಾ, ಸಂಜನ ಐ ಲವ್ ಯು ಹಾಡಿನ ಮೂಲಕ ಭರವಸೆ ಮೂಡಿಸಿದೆ. ಇದೀಗ ಸಲಗ ಚಿತ್ರತಂಡ ರೊಮ್ಯಾಂಟಿಕ್ ಹಾಡನ್ನು ರಿಲೀಸ್ ಮಾಡಲು ತಯಾರಿ ಮಾಡಿಕೊಳ್ತಾ ಇದೆ. ಮಳೆ ಹಾಡು ಇದಾಗಿದ್ದು, ಸೆಪ್ಟೆಂಬರ್ 5ರಂದು ಬೆಳಗ್ಗೆ 11ಕ್ಕೆ A2 ಮ್ಯೂಸಿಕ್‍ನಲ್ಲಿ ರಿಲೀಸ್ ಆಗ್ತಾ ಇದ್ದು, ಈ ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಮಳೆಯೇ ಮಳೆಯೇ ಲಿರಿಕಲ್ ಹಾಡನ್ನು ಬಿಡುಗಡೆ ಮಾಡೋ ಮೂಲಕ ಸಲಗ ಚಿತ್ರತಂಡಕ್ಕೆ ಮತ್ತಷ್ಟು ಪವರ್ ನೀಡಲಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top