ಸಲಗದ ಬೆನ್ನಿಗೆ ನಿಂತ ಹ್ಯಾಟ್ರಿಕ್ ಹೀರೋ ಶಿವಣ್ಣ..!!!

shivanna salaga

ಮೇಕಿಂಗ್ ವಿಡಿಯೋದಿಂದ ಸೆನ್ಸೇಷನ್ ಕ್ರಿಯೇಟ್ ಮಾಡ್ತಿರೋ ಸಲಗ ಟೀಮ್ ಮತ್ತೊಂದು ಮಸ್ತ್ ನ್ಯೂಸ್ ಕೊಟ್ಟಿದೆ. ಜನವರಿ 5ನೇ ತಾರೀಖು ಸಲಗ ಚಿತ್ರದ ಮೊದಲ ಆಡಿಯೋ ಸಾಂಗ್ ಅಂದ್ರೆ ಲಿರಿಕಲ್ ವಿಡಿಯೋನ ರಿಲೀಸ್ ಮಾಡ್ತಿದೆ. ವಿಶೇಷ ಅಂದ್ರೆ, ಸಲಗ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಹಾಡನ್ನ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ರಿಲೀಸ್ ಮಾಡ್ತಿದ್ದಾರೆ.

ಎ2 ಯೂಟ್ಯೂಬ್ ಚಾನೆಲ್ ನಲ್ಲಿ ಮೊದಲ ಹಾಡನ್ನ ಶಿವಣ್ಣ ಲೋಕಾರ್ಪಣೆ ಮಾಡಲಿದ್ದಾರೆ. ಅವ್ರದ್ದೇ ಟಗರು ಟೀಮ್ ಮಾಡ್ತಿರೋ ಸಲಗ ಚಿತ್ರಕ್ಕೆ ಶಿವಣ್ಣ ಮುಕ್ತ ಕಂಠದಿಂದ ಶುಭಹಾರೈಸಿದ್ದು, ಸಲಗದ ಬೆನ್ನಿಗೆ ನಿಂತಿದ್ದಾರೆ. ಇದು ಸಲಗ ತಂಡಕ್ಕೆ ಮತ್ತಷ್ಟು ಬಲ ತಂದಿದ್ದು, ಸಲಗದ ರೇಂಜ್ ಉದ್ಯಮದಲ್ಲಿ ದಿನೇ ದಿನೇ ದೊಡ್ಡದಾಗ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top