ಸಲಗದಲ್ಲಿ ಮೋಡಿ ಮಾಡಲು ಬಂದ ಮಲೇಷಿಯಾದ ಹಾಡುಗಾರ..!

ಸಲಗ‌..ದುನಿಯಾ ವಿಜಿಯ ಮೊದಲ ಡೈರೆಕ್ಷನ್ ನಲ್ಲಿ ಬರ್ತಾ ಇರೋ ಮೋಸ್ಟ್ ಅವೇಟಿಂಗ್ ಸಿನಿಮಾ.. ಈಗಾಗಲೇ ಚಿತ್ರ ಟೀಸರ್ ಮತ್ತು ಸೂರಿ ಅಣ್ಣ ಹಾಡು ಮೂಲಕ ಸೌಂಡ್ ಮಾಡ್ತಾ ಇರೋ ಸಲಗ ಚಿತ್ರ, ಮೇಕಿಂಗ್ ವಿಡಿಯೋ ಮೂಲಕ ಸಿನಿರಸಿಕರನ್ನು ತನ್ನ ಸಿನಿಮಾ ಕಡೆ ಸೆಳೆದುಕೊಂಡಿದೆ..

ಇನ್ನು ಸಿನಿಮಾ ಶುರುವಾದಾಗಲಿಂದ ಒಂದಿಲ್ಲೊಂದು ವಿಷಯಕ್ಕೆ ಸುದ್ದಿಯಾಗಿರೋ ಸಲಗ ಚಿತ್ರ ಈಗ ಮತ್ತೊಂದು ವಿಷಯಕ್ಕೆ ಸೌಂಡ್ ಮಾಡೋಕೆ ರೆಡಿಯಾಗಿದೆ..

ಹೌದು ಸಲಗ ಚಿತ್ರಕ್ಕೆ ಈಗ ಮಲೇಷಿಯಾದ ರ್ಯಾಪರ್ ಟೈಟಲ್ ಸಾಂಗ್ ಹಾಡಲು ಇಂಡಿಯಾಗೆ ಹಾರಿ ಬಂದಿದ್ದಾರೆ… ಚರಣ್ ರಾಜ್ ಸಂಗೀತ ನೀಡ್ತಾ ಇದ್ದು ಈಗ ಟೈಟಲ್ ಸಾಂಗ್ ಹಾಡಲು ಮಲೇಷಿಯಾದ ರ್ಯಾಪರ್ ಯೋಗಿ ಧನಿ ಯವರನ್ನು ಕರೆಸಿದ್ದು, ಯೋಗಿ ಧನಿ ಈ ಹಿಂದೆ ರಜಿನಿಕಾಂತ್ ಸಿನಿಮಾಗೂ ಹಾಡಿ ಮೋಡಿ ಮಾಡಿದ್ರು,…

ಯೋಗಿಯನ್ನು ನೋಡಲು ಓಡಿ ಓಡಿ ಬಂದ ಸಂಜಿತ್ ಹೆಗ್ಡೆ..!

ಇನ್ನು ಸಲಗ ಚಿತ್ರದ ಟೈಟಲ್ ಟ್ರ್ಯಾಕ್ ಹಾಡಲು ಬಂದಿರೋ ಯೋಗಿ ಧನಿಯನ್ನು ನೋಡಲು ಸಂಜಿತ್ ಹೆಗ್ಡೆ ಕೂಡ ಬಂದಿದ್ದು ತನ್ನ ನೆಚ್ಚಿನ ಸಿಂಗರ್ ನೋಡಿ ಸಂಚಿತ್ ಕೂಡ ಖುಷಿಪಟ್ಟಿದ್ದಾರೆ..
ಒಟ್ಟಿನಲ್ಲಿ ಸಲಗ ಚಿತ್ರ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದು ಏಪ್ರಿಲ್ ನಲ್ಲಿ ತೆರೆಮೇಲೆ ತರೋ ಪ್ಲಾನ್ ಮಾಡಿಕೊಂಡಿದೆ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top