ಸರ್ಬಿಯಾ ಮಾಡೆಲ್ ಜೊತೆ ಮದುವೆಯಾಗಲಿದ್ದಾರೆ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ..!

ಟೀಂ ಇಂಡಿಯಾದ ಅಲ್‍ರೌಂಡರ್, ಸ್ಟೈಲಿಷ್ ಆಟಗಾರ ಹಾರ್ದಿಕ್ ಪಾಂಡ್ಯ..ಬ್ಯಾಟ್ ಹಿಡಿದು ಫೀಲ್ಡ್ ಗೆ ಇಳಿದ್ರೆ ಸಿಕ್ಸು,ಫೋರ್ ಗ್ಯಾರಂಟಿ, ಸದ್ಯ ಹಾರ್ದಿಕ್ ಪಾಂಡ್ಯ ಮದ್ವೆ ಆಗ್ತಾರೆ ಅನ್ನೋ ಸುದ್ದಿಯೊಂದು ಈಗ ಹೊರಬಿದ್ದಿದೆ, ಈಗಾಗಲೇ ಹಲವು ಬಾಲಿವುಡ್ ನಟಿಯರ ಜೊತೆ ಡೇಟಿಂಗ್ ನಡೆಸಿರೋ ಹಾರ್ದಿಕ್, ಸದ್ಯ ಸರ್ಬಿಯಾದ ಮಾಡೆಲ್ ನತಾಶಾ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ.

ಹಲವು ತಿಂಗಳಿಂದ ಡೇಟಿಂಗ್ ನಡೆಸುತ್ತಿರೋ ಈ ಇಬ್ಬರು ಜೋಡಿ ಸದ್ಯದರಲ್ಲೇ ಮದುವೆಯಾಗಲಿದ್ದಾರೆ ಅನ್ನೋ ಮಾತುಗಳು ಸಹ ಕೇಳಿ ಬರ್ತಾ ಇದೆ. ಈಗಾಗಲೇ ಹಾರ್ದಿಕ್ ನತಾಶಾಳನ್ನು ಮನೆಯವರಿಗೆ ಪರಿಚಯ ಮಾಡಿಸಿಕೊಟ್ಟಿದ್ದು, ಮನೆಯವರಿಂದಲೂ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿದೆ, ಇನ್ನು ನತಾಶಾ ಬಾಲಿವುಡ್ ಸಿನಿಮಾಗಳಲ್ಲಿ ನಟಿಸ್ತಾ ಇದ್ದು.. ಈ ಕಾರಣಕ್ಕಾಗಿ ಮುಂಬೈನಲ್ಲೇ ನಲೆಸಿದ್ದಾರೆ.

ಇನ್ನು ಬಿಗ್‍ಬಾಸ್ ಸೀಸನ್ 8ರಲ್ಲಿ ಭಾಗವಹಿಸಿದ್ದ ನತಾಶಾಳನ್ನು ಬೆಂಬಲಿಸಿ ಅಂತ ಹಾರ್ದಿಕ್ ತನ್ನ ಸ್ನೇಹಿತರ ಬಳಿ ಕೇಳಿದ್ದರಂತೆ.. ನತಾಶಾ ಸದ್ಯ ಡ್ಯಾನ್ಸಿಂಗ್ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದು.. ಈ ಹಿಂದೆ ಶಾರುಖ್ ಅಭಿನಯದ ಜೀರೋ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.. ಈ ಇಬ್ಬರು ಜೋಡಿ ಸದ್ಯದರಲ್ಲೇ ಮದುವೆಯಾಗಲಿದ್ದು.. ಆ ಮೂಲಕ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top