ಸಮೋಸಾ ಕದ್ದ ಕೈದಿ, ಆತ ಇಟ್ಟುಕೊಂಡ ಜಾಗ ನೋಡಿ ಪೊಲೀಸರು ಶಾಕ್

ಕೊರೋನಾ ಎಫೆಕ್ಟ್‍ನಿಂದಾಗಿ ಎಲ್ಲಾ ಕಡೆ ಸಾಕಷ್ಟು ತೊಂಡರೆಗಳು ಉಂಟಾಗಿದ್ದು, ಅನೇಕರು ಕೆಲಸವನ್ನು ಕಳೆದುಕೊಂಡಿದ್ದಾರೆ, ಇನ್ನು ಕೆಲವ್ರ ಆಹಾರದ ಸಮಸ್ಯೆಯಿಂದ ಕೊರಗುತ್ತಿದ್ದಾರೆ. ಇದು ಪ್ರತಿ ದೇಶದಲ್ಲೂ ಸಮಸ್ಯೆ ಉಂಟಾಗಿದ್ದು. ಬ್ರಿಟನ್‍ನಲ್ಲೂ ಈ ಸಮಸ್ಯೆ ಹೊರತಾಗಿಲ್ಲ. ಅಲ್ಲಿನ ಜೈಲೊಂದರಲ್ಲಿ ಆಹಾರ ಸಮಸ್ಯೆ ಉಂಟಾಗಿದ್ದು, ಕೈದಿಗಳು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಆ ಜೈಲಿನಲ್ಲಿದ್ದ ಕೈದಿಯೊಬ್ಬ ಸಮೋಸ ಕದ್ದು ಜೈಲಾಧಿಕಾರಿಯ ಬಳಿ ಸಿಕ್ಕಿಹಾಕಿಕೊಂಡಿದ್ದು,ವಿಚಾರಣೆ ವೇಳೆ ಆತ ಸಮೋಸ ಇಟ್ಟುಕೊಂಡಿದ್ದ ಜಾಗ ನೋಡಿ ಅಧಿಕಾರಿಗಳು ಶಾಕ್ ಆಗಿದ್ದಾರೆ. ಹೌದು ಕೈದಿ ತಾನು ಕದ್ದ ಸಮೋಸವನ್ನು ಅಧಿಕಾರಿಗಳು ನೋಡಬಾರದು ಎಂದು ಮೊದಲು ಬಟ್ಟೆಯೊಳಗೆ ಹಾಕಿಕೊಂಡಿದ್ದಾನೆ.ಸಿಕ್ಕಿ ಹಾಕಿಕೊಂಡರೆ ಅನ್ನೋ ಭಯಕ್ಕೆ ಆತ ಅದನ್ನು ಚೆಡ್ಡಿಯೊಳಗೆ ಹಾಕಿದ್ದಾನೆ. ಆದರೆ ಅಲ್ಲೂ ನೋಡಿ ಸಿಕ್ಕಿ ಹಾಕಿಕೊಂಡರೆ ಏನೂ ಮಾಡೋದು ಎಂದು ಆತ ಸಮೋಸವನ್ನು ತನ್ನ ಗುದದ್ವಾರದ ಒಳಗೆ ಒಂದಿಷ್ಟು ಸಮೋಸವನ್ನು ಹಾಕಿಕೊಂಡಿದ್ದಾನೆ, ಆದ್ರೆ ಆತನ ಗ್ರಹಚಾರಕ್ಕೆ ಈ ವಿಷಯದಲ್ಲಿ ಪೊಲೀಸ್ ಅಧಿಕಾರಿಗಳ ಬಳಿ ಸಿಕ್ಕಿ ಹಾಕಿಕೊಂಡಿದ್ದಾನೆ. ನಂತರ ವಿಚಾರಣೆ ನಡೆಸಿದ ಪೊಲೀಸರಿ ಆತ ಇಟ್ಟುಕೊಂಡ ಜಾಗ ಕೇಳಿ ಶಾಕ್ ಆಗಿದ್ದು, ಆನಂತರ ಅಧಿಕಾರಿಗಳು ಕರುಣೆ ತೋರಿಸಿದ್ದಾರೆ. ಹಸಿವಿನಿಂದ ಈ ಕೆಲಸ ಮಾಡಿದ್ದು, ನಾನಷ್ಟೇ ಅಲ್ಲಾ ಅನೇಕ ಕೈದಿಗಳು ಸಮಸ್ಯೆ ಎದುರಿಸುತ್ತಿದ್ದಾರೆ, ಜೈಲಿನಲ್ಲಿ ಆಹಾರದ ಸಮಸ್ಯೆ ಉಂಟಾಗಿದೆ ಹೀಗಾಗಿ ಈ ರೀತಿ ಮಾಡಿದೆ ಎಂದು ಹೇಳಿಕೊಂಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳು ಆತನನ್ನು ಬಿಟ್ಟಿದ್ದಾರೆ, ಅಷ್ಟೇ ಅಲ್ಲದೇ ಜೈಲಿನಲ್ಲಿ ಸರಿಯಾದ ರೀತಿ ಆಹಾರ ಪೂರೈಕೆ ಮಾಡಬೇಕು ಅಂತ ಆದೇಶಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top