ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ಕಿಂಗ್‌ ವಿರಾಟ್‌ ಕೊಹ್ಲಿ

ಆಸ್ಟ್ರೇಲಿಯಾ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ 23ರನ್‌ಗಳಿಸುತ್ತಿದ್ದಂತೆ ಸಚಿನ್‌ ತೆಂಡೂಲ್ಕರ್‌ ಹೆಸರಿನಲ್ಲಿದ್ದ ಒಂದು ದಾಖಲೆಯನ್ನು ಮುರಿದಿದ್ದಾರೆ. ಹೌದು ಅತಿ ವೇಗವಾಗಿ 12000 ರನ್‌ಗಳನ್ನು ಗಳಿಸಿರೋ ದಾಖಲೆಯಲ್ಲಿ ಸಚಿನ್‌ ಮೊದಲ ಸ್ಥಾನದಲ್ಲಿ ಇದ್ದರು, ಆ ದಾಖಲೆಯನ್ನು ವಿರಾಟ್‌ ಕೊಹ್ಲಿ 23ರನ್‌ ಗಳಿಸುತ್ತಿದ್ದಂತೆ ದಾಖಲೆ ಮುರಿದಿದ್ದಾರೆ ಸಚಿನ್‌ ತೆಂಡೂಲ್ಕರ್‌ 300 ಇನ್ನಿಂಗ್ಸ್‌ನಲ್ಲಿ 12 ಸಾವಿರ ಏಕದಿನ ರನ್‌ಗಳಿಸಿ ವೇಗವಾಗಿ 12 ಸಾವಿರ ರನ್‌ ಗಳಿಸಿದ ದಾಖಲೆಯನ್ನು ಬರೆದಿದ್ದರು, ಆದ್ರೆ ಇಂದು ವಿರಾಟ್‌ ಕೊಹ್ಲಿ ಆ ದಾಖಲೆಯನ್ನು ಕೇವಲ 250 ಪಂದ್ಯಗಳಲ್ಲಿ 242 ಇನ್ನಿಂಗ್ಸ್‌ಗಳಲ್ಲಿ 12 ಸಾವಿರ ರನ್‌ ಗಳಿಸುವ ಮೂಲಕ ಸಚಿನ್‌ ಹೆಸರಿನಲ್ಲಿ ಇದ್ದ ವೇಗದ 12 ಸಾವಿರ ರನ್‌ ದಾಖಲೆಯನ್ನು ಮುರಿಯು ಮೂಲಕ ಹೊಸ ದಾಖಲೆಯನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ ರಿಕಿಪಾಂಟಿಂಗ್‌ 314 ಇನ್ನಿಂಗ್ಸ್‌, ಕುಮಾರ ಸಂಗಕ್ಕಾರ 336 ಇನ್ನಿಂಗ್ಸ್‌, ಜಯಸೂರ್ಯ 379 ಇನ್ನಿಂಗ್ಸ್‌ ಮತ್ತು ಜಯವರ್ಧನೆ 399 ಇನ್ನಿಂಗ್ಸ್‌ನಲ್ಲಿ 12 ಸಾವಿರ ರನ್‌ ಹೊಡೆದು ದಾಖಲೆ ಬರೆದಿದ್ದರು. ಇದೀಗ ವಿರಾಟ್‌ ಕೊಹ್ಲಿ ಇವರೆಲ್ಲರಿಗಿಂತ ಕಮ್ಮಿ ಇನ್ನಿಂಗ್ಸ್‌ನಲ್ಲಿ ಅಂದರೆ ಕೇವಲ 242 ಇನ್ನಿಂಗ್ಸ್‌ನಲ್ಲಿ 12 ಸಾವಿರ ರನ್‌ ಗಳಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ನಾನೇ ಬೆಸ್ಟ್‌ ಬ್ಯಾಟ್ಸ್‌ಮನ್‌ ಅನ್ನೋದನ್ನ ಮತ್ತೊಮ್ಮೆ ಪ್ರೂವ್‌ ಮಾಡಿದ್ದಾರೆ.

ಇನ್ನು ಹಿಂದನ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ವಿಶ್ವ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 22000 ರನ್‌ ಗಳಿಸಿದ ಆಟಗಾರ ಅನ್ನೋ ದಾಖಲೆಯನ್ನು ಬರೆದಿದ್ದಾರೆ.

ಒಟ್ಟಿನಲ್ಲಿ ನಾಯಕತ್ವ ವಿಚಾರದಲ್ಲಿ ವಿರಾಟ್‌ ಕೊಹ್ಲಿ ಬಗ್ಗೆ ಪರ ವಿರೋಧಗಳು ಕೇಳಿ ಬರ್ತಾ ಇದ್ರು, ತಮ್ಮ ಬ್ಯಾಟಿಂಗ್‌ ವಿಚಾರದಲ್ಲಿ ಯಾರೊಬ್ಬರು ಮಾತನಾಡವು ಹಾಗಿಲ್ಲ ಅನ್ನೋದನ್ನ ಪದೇ ಪದೇ ಸಾಭೀತು ಮಾಡುತ್ತಲೇ ಇದ್ದಾರೆ.

ಇತ್ತಿಚೆಗೆ ವಿರಾಟ್‌ ಕೊಹ್ಲಿ ವಿಚಾರದಲ್ಲಿ ಗೌತಮ್‌ ಗಂಭೀರ್‌ ವಿರಾಟ್‌ ಕೊಹ್ಲಿಗಿಂತ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಟಗಾರ ಸ್ಮಿತ್‌ ದೂರವಿಲ್ಲ ಅಂತ ಶ್ಲಾಘಿಸಿದ್ರು,ಇತ್ತ ಗಂಭೀರ್‌ ಹೇಳಿಕೆಗೆ ಕನ್ನಡಿಗ ದೊಡ್ಡ ಗಣೇಶ್‌ ತಿರುಗೇಟು ಕೂಡ ನೀಡಿದ್ರು, ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ ಈಗೆಲ್ಲಿದ್ದಾರೋ ಅಲ್ಲಿಗೆ ತಲುಪೋಕೆ ಸ್ಮಿತ್‌ ಅವರು ಮುಂದಿನ 5 ವರ್ಷಗಳ ಕಾಲ ಈ ಕಳೆದ ಎರಡು ಪಂದ್ಯಗಳಲಿ ಆಡಿದಂತೆ ಆಡಬೇಕಾಗುತ್ತದೆ. ಏಕದಿನ ಪಂದ್ಯದಲ್ಲಿ ಕೊಹ್ಲಿ ಯಾವತ್ತಿದ್ರೂ ಬೆಸ್ಟ್‌ ಬ್ಯಾಟ್ಸಮನ್‌ ಎಂದು ಗಂಭೀರ್‌ಗೆ ದೊಡ್ಡ ಗಣೇಶ್‌ ತಿರುಗೇಟು ನೀಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top