ಸಂಬಂಧಿಕರ ಜೊತೆ ಅತ್ಯಾಚಾರವೆಸಗಿ ಮಹಿಳೆಯ ಖಾಸಗಿ ಜಾಗಕ್ಕೆ ಸುಟ್ಟ ಪತಿರಾಯ..!

ಮಾಜಿ ಪತಿ ತನ್ನ ಸಂಬಂಧಿಕರೊಂದಿಗೆ ಸೇರಿ ಪತ್ನಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿದ ಅಮಾನಿವೀಯ ಕೃತ್ಯ ಮಧ್ಯಪ್ರದೇಶದ ರತ್ಲಂ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಯ ಎರಡನೇ ಪತಿ ಜೊತೆ ಮೊದಲನೆ ಪತಿ (ಮಾಜಿ ಪತಿ) ಜಗಳವಾಡಿಕೊಂಡಿದ್ದು, ಇದೇ ದ್ವೇಷದಲ್ಲಿ ಮಹಿಳೆಯನ್ನು ಅಪಹರಿಸಿ ಮಾಜಿ ಪತಿ ತನ್ನ ಸಂಬಂಧಿಕರ ಜೊತೆ ಸೇರಿ ಅತ್ಯಾಚಾರವೆಸಗಿದ್ದಾನೆ. ಅಷ್ಟೇ ಅಲ್ಲದೇ ಮಹಿಳೆಯ ಖಾಸಗಿ ಭಾಗಕ್ಕೆ ಮಾಜಿ ಪತಿ ಸಿಗರೇಟಿನಿಂದ ಸುಟ್ಟಿದ್ದಾನೆ. ಸಂಬಂಧಿಕರ ಜೊತೆ ಸೇರಿ ಸಾಮೂಹಿಕವಾಗಿ ಅತ್ಯಾಚಾರವೆಸಗಿದ ಮೇಲೆ ಆ ಮಹಿಳೆಯನ್ನು 5ವರ್ಷದ ಮಗುವಿನೊಂದಿಗೆ ರಸ್ತೆಯಲ್ಲೇ ಎಸೆದು ಹೋಗಿದ್ದಾರೆ. ಮಹಿಳೆಗೆ ಕೀಟನಾಶಕ ಕುಡಿಸಿದ್ದು ಮಹಿಳೆಯ ಸ್ಥಿತಿ ಚಿಂತಾಚನಕವಾಗಿದ್ದು, ರಸ್ತೆಯಲ್ಲಿ ಓಡಾಡುತ್ತಿದ್ದ ಸಾರ್ವಜನಿಕರು ಆಕೆಯನ್ನು ಕಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷಯ ತಿಳಿದ ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮಾಜಿ ಪತಿ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top