ಶ್ರೀ ರಾಘವೇಂದ್ರ ಸ್ವಾಮಿ ಸನ್ನಿಧಿ ಮಂತ್ರಾಲಯದಲ್ಲಿ ನಡೀತು ವಿಸ್ಮಯ ಘಟನೆ.

ಶ್ರೀ ಗುರು ರಾಯರು, ಅದೆಷ್ಟೋ ಭಕ್ತ ವೃಂಧಕ್ಕೆ ಮಾರ್ಗದರ್ಶಕರಾಗಿ, ಅಸಹಾಯಕರಿಗೆ ಶಕ್ತಿ ತುಂಬುವ ಅವತಾರ ಪುರುಷರಾಗಿ, ತಮ್ಮನ್ನು ಆರಾಧಿಸೋ ಕೋಟಿ ಕೋಟಿ ಭಕ್ತರ ನೆರಳಾಗಿ ನಿಂತಿರುವವರು, ಇಂತಹ ಶ್ರೀ ಗುರು ರಾಯರ ಸನ್ನಿಧಿ ಮಂತ್ರಾಲಯದಲ್ಲಿ ವಿಸ್ಮಯ ಒಂದು ನಡೆದಿದೆ. ಹೌದು ಇಂದು ಗುರುವಾರವಾಗಿದ್ದು, ರಾಯರ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗೆ ಇರುತ್ತದೆ,ಇಂತಹ ವೇಳೆ ರಾಯರ ಸನ್ನಿಧಿಯ ಬಳಿಯೇ ಒಂದು ವಿಸ್ಮಯ ಘಟನೆ ನಡೆದಿದೆ. ಹೌದು ಮಂತ್ರಾಯಲದ ರಾಯರ ಆವರಣದಲ್ಲಿ ನಾಯಿಯೊಂದು ಹಸುವಿನ ಕರುವಿಗೆ ಹಾಲುಣಿಸುತ್ತಿರೋ ಘಟನೆ ನಡೆದಿದ್ದು ಈ ವಿಸ್ಮಯಕ್ಕೆ ಮಂತ್ರಾಲಯ ಸಾಕ್ಷಿಯಾಗಿದೆ. ಈ ವಿಸ್ಮಯ ಬುಧವಾರ ರಾತ್ರಿ ರಾಯರ ಸನ್ನಿಧಿಯ ಆವರಣದಲ್ಲಿ ನಡೆದಿದ್ದು, ರಾಯರ ದರ್ಶನಕ್ಕೆ ಹೋಗಿದ್ದ ರಮೇಶ್‌ ಮತ್ತು ಶೃತಿ ದಂಪತಿಗಳು ಕಣ್ಣಾರೇ ಕಂಡಿದ್ದು, ಇದು ನಮ್ಮ ಸೌಭಾಗ್ಯ ರಾಯರೇ ದರುಶನ ನೀಡಿದ ರೀತಿ ಆಯ್ತು, ರಾಯರ ನಂಬಿ ಇಲ್ಲಿಯ ವರೆಗೂ ಬಂದಿದ್ದೇವೆ,ರಾಯರ ಸನ್ನಿಧಿಯಲ್ಲಿ ಈ ರೀತಿಯ ವಿಸ್ಮಯ ಕಂಡು ನಾವು ಧನ್ಯರಾದೆವೂ ಅಂತ ದಂಪತಿಗಳು ಹೇಳಿದ್ದಾರೆ.ಇನ್ನು ನಾವು ಮೊದಲು ಫೋಟೋವನ್ನು ತೆಗೆದುಕೊಂಡೆವೂ ನಂತರ ವಿಡಿಯೋ ಮಾಡೋ ಪ್ರಯತ್ನ ಮಾಡಿದೆವೂ ಅದು ಸಾಧ್ಯವಾಗಲಿಲ್ಲ, ರಾಯರ ಸನ್ನಿಧಿಯಲ್ಲಿ ಈ ರೀತಿಯ ವಿಸ್ಮಯವನ್ನು ವಿಡಿಯೋ ರೂಪದಲ್ಲಿ ಸೆರೆಹಿಡಿಯಲು ಆಗಲಿಲ್ಲ ಅನ್ನೋ ಬೇಸರವಿದ್ದರೆ, ನೇರವಾಗಿ ಎಂದು ನೋಡಲು ಸಾಧ್ಯವಿರದ ನಾಯಿ ಹಸುವಿನ ಕರುವಿಗೆ ಹಾಲುಣಿಸುವ ದೃಶ್ಯ ನೋಡಿ ಸಂತೋಷವಾಯ್ತು ಎಂದು ವಿಸ್ಮಯ ನೋಡಿ ಹರ್ಷ ವ್ಯಕ್ತ ಪಡಿಸಿದ್ದಾರೆ. ರಮೇಶ್‌ ಮತ್ತು ಶೃತಿ ದಂಪತಿಗಳು.

ಕೋಲಾರದಿಂದ ರಾಯರ ದರುಶನಕ್ಕೆ ಬಂದೆವೂ, ರಾಯರ ದರ್ಶನ ಪಡೆಯುವ ಮುನ್ನವೇ ನಾಯಿಯೊಂದು ಕರುವಿಗೆ ಹಾಲುಣಿಸುತ್ತಿರೋದು ನೋಡಿ ನಾನು ಒಮ್ಮೆ ಯಾವುದೇ ಬೇರೆ ಲೋಕದಲ್ಲಿ ಇದ್ದೇನೇ ಅನ್ನೋ ಭಾವನೆ ಉಂಟಾಯಿತು ಇದೆಲ್ಲಾ ರಾಯರ ಲೀಲೆ, ರಾಯರ ಅಪಾರ ವಿಸ್ಮಯಗಳ ಬಗ್ಗೆ ನಾವು ಕೇಳಿದ್ದೇವು ಆದ್ರೆ ಅದು ಸಾಕ್ಷತ್‌ ದರ್ಶನದ ರೂಪದಲ್ಲಿ ಪಡೆದು ಧನ್ಯರಾದೆವೂ ಅಂತ ಹೇಳಿದ್ರು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top