ಶ್ರೀಲಂಕಾದಲ್ಲಿ ವಿರಾಟ್‌ ಕೊಹ್ಲಿ ಫೇಸ್‌ ಮಾಸ್ಕ್‌ ಟ್ರೆಂಡ್‌

ವಿರಾಟ್‌ ಕೊಹ್ಲಿ.. ಟೀಂ ಇಂಡಿಯಾದ ಕ್ಯಾಪ್ಟನ್‌..ಕ್ರಿಕೆಟ್‌ ಜಗತ್ತಿನ ರನ್‌ ಮಷಿನ್‌..ತಾವು ಆಡಿದ ಪ್ರತಿಯೊಂದು ಮ್ಯಾಚ್‌ನಲ್ಲೂ ಒಂದಿಲ್ಲೊಂದು ರೆಕಾರ್ಡ್‌ ಕ್ರಿಯೇಟ್‌ ಮಾಡೋ ಕೊಹ್ಲಿಯನ್ನು ಅಭಿಮಾನಿಗಳು ಪ್ರೀತಿಯಿಂದ ಕರೆಯೋದು ಕಿಂಗ್‌ ಕೊಹ್ಲಿಯೆಂದು, ಇನ್ನು ವಿರಾಟ್‌ ತಮ್ಮ ಕ್ರಿಕೆಟ್‌ನಲ್ಲಿ ರನ್‌ಗಳ ಸುರಿಮಳೆ ಸುರಿಸುತ್ತಿದ್ರೆ, ಇತ್ತ ಅಭಿಮಾನಿಗಳಿಗೆ ಒಂದು ರೀತಿಯ ಖುಷಿ ಕೊಡುತ್ತೆ..

ವಿಶ್ವದಾದ್ಯಂತ ವಿರಾಟ್‌ಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಇನ್ನು ಕೊಹ್ಲಿ ಅಂದ್ರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ, ಇನ್ನು ವಿರಾಟ್‌ಗೂ ಸಹ ತಮ್ಮ ಅಭಿಮಾನಿಗಳು ಅಂದ್ರೆ ಅದೇನೋ ಗೌರವ..ಇನ್ನು ವಿರಾಟ್‌ ಮ್ಯಾಚ್‌ ಆಗ್ಲಿ..ಅಥವಾ ಪ್ರಾಕ್ಟ್ರಿಸ್‌ಗೆ ಹೋಗ್ತಾ ಇರ್ಲಿ .ತಮ್ಮ ಅಭಿಮಾನಿಗಳು ಕರೆದು ಆಟೋಗ್ರಾಫ್‌ ಅಥವಾ ಸೆಲ್ಫಿ ಕೇಳಿದ್ರೆ ಒಂದು ಕ್ಷಣವೂ ಯೋಚಿಸದೆ ಅವರ ಬಳಿ ಬಂದು ಅವರ ಆಸೆಯನ್ನು ಪೂರೈಸುತ್ತಾರೆ.

ಇನ್ನು ಇತ್ತಿಚೆಗೆ ಅಭಿಮಾನಿಯೊಬ್ಬ ತನ್ನ ಮೈಮೇಲೆ ವಿರಾಟ್‌ ಕೊಹ್ಲಿಯ ಟ್ಯಾಟು ಹಾಕಿಸಿಕೊಂಡಿದ್ದನ್ನು ನೋಡಿ ಆತನನ್ನು ತಬ್ಬಿಕೊಂಡು ಧನ್ಯವಾದಗಳನ್ನು ಹೇಳಿದ್ರು, ಅಭಿಮಾನಿಗಳು ವಿರಾಟ್‌ಗಾಗಿ ಹಾತರೊಯುತ್ತಿದ್ದರೆ, ಇತ್ತ ವಿರಾಟ್‌ ಕೂಡ ತಮ್ಮ ಅಭಿಮಾನಿಗಳ ಆಸೆಯನ್ನು ಪೂರೈಸಲು ಪ್ರಯತ್ನಿಸುತ್ತಿರುತ್ತಾರೆ. ಅಷ್ಟೇ ಅಲ್ಲದೇ ವಿರಾಟ್‌ ಅಂದ್ರೆ ಒಂದು ರೀತಿಯಲ್ಲಿ ಕ್ರೀಡಾ ಜಗತ್ತಿನ ಕ್ರೇಜ್‌ಕಾ ಬಾಪ್‌ ಅಂತಾನೇ ಹೇಳ ಬಹುದು.

ಇದೀಗ ವಿರಾಟ್‌ ಮತ್ತೆ ಅದನ್ನು ಸಾಭೀತು ಪಡಿಸಿದ್ದಾರೆ. ಸದ್ಯ ವಿಶ್ವದಲ್ಲಿ ಕೊರೋನಾ ಹಾವಳಿ ಜಾಸ್ತಿಯಾಗಿದ್ದು, ಪ್ರತಿಯೊಬ್ಬರು ಮಾಸ್ಕ್‌ ಧರಿಸಿಯೇ ಓಡಾಡಬೇಕು ಅನ್ನೋ ಕಟ್ಟು ನಿಟ್ಟಿನ ನಿಯಮಗಳನ್ನು ಹಾಕಲಾಗಿದೆ. ಇನ್ನು ವಿವಿಧ ರೀತಿಯ ಮಾಸ್ಕ್‌ ಕೂಡ ಇದೀಗ ಮಾರುಕಟ್ಟೆಯಲ್ಲಿ ಬರತೊಡಗಿದೆ.ಅದರಲ್ಲೂ ತಮ್ಮ ನೆಚ್ಚಿನ ಸ್ಟಾರ್‌ ಮಾಸ್ಕ್‌ಗಳನ್ನು ಹಾಕಿ ತಿರುಗಾಡಲು ಇಷ್ಟ ಪಡುತ್ತಾರೆ. ಅದೇ ರೀತಿ ಇದೀಗ ವಿರಾಟ್‌ ಕೊಹ್ಲಿ ಮಾಸ್ಕ್‌ ಕೂಡ ಸದ್ಯ ಸಖತ್‌ ಟ್ರೆಂಡ್‌ ಕೂಡ ಆಗಿದೆ.

ಆದ್ರೆ ವಿರಾಟ್‌ ಮಾಸ್ಕ್‌ ಟ್ರೆಂಡ್‌ ಆಗಿರೋ ಮಾತ್ರ ನಮ್ಮ ದೇಶದಲ್ಲಿ ಅಲ್ಲ ಬದಲಿಗೆ ಶ್ರೀಲಂಕಾದಲ್ಲಿ, ಹೌದು ಶ್ರೀಲಂಕಾದ ಒಬ್ಬ ಆಟೋ ಡ್ರೈವರ್‌ ವಿರಾಟ್‌ ಕೊಹ್ಲಿ ಫೋಟೋ ಇರೋ ಮಾಸ್ಕ್‌ ಧರಿಸಿ ತನ್ನ ಆಟೋವನ್ನು ಓಡಿಸುತ್ತಿದ್ದು, ಸದ್ಯ ಈ ಮಾಸ್ಕ್‌ ಇದೀಗ ಸಖತ್‌ ಟ್ರೆಂಡ್‌ ಆಗಿದೆ. ವಿರಾಟ್‌ ಮಾಸ್ಕ್‌ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದ್ದು,ಇದನ್ನು ನೋಡಿದ ವಿರಾಟ್‌ ಅಭಿಮಾನಿಗಳು ಮತ್ತು ಆರ್‌ಸಿಬಿ ಅಭಿಮಾನಿಗಳು ಇದು ಕಿಂಗ್‌ ಕೊಹ್ಲಿ ಕ್ರೇಜ್‌ ಲೆವೆಲ್‌..ಇದು ಇದು ಆ್ಯಕ್ಚುಲಿ ಚೆನ್ನಾಗಿರೋದು ಅಂತ ಕಾಮೆಂಟ್‌ ಮಾಡುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top