ಶೋ ಡಬ್ಬಲ್ ಮಾಡಿಕೊಂಡ ನಾನು ಮತ್ತು ಗುಂಡ

ಗುಂಡನಿಗಾಗಿ‌ ಥಿಯೇಟರ್ ನವ್ರೇ ಮುಂದೆ ಬಂದ್ರು.. ಹೌದು ಶುಕ್ರವಾರದಿಂದ ಕೆ.ಜಿ ರೋಡಿನ ಅನುಪಮ ಥಿಯೇಟರ್ನಲ್ಲಿ ನಾನು ಮತ್ತು ಗುಂಡ. ಜೊತೆಗೆ ರಾಜ್ಯಾಂದ್ಯಂತ ಥಿಯೇಟರ್ ಹೆಚ್ಚಿಸಿಕೊಂಡಿದ್ದಾನೆ ಗುಂಡ. ಮಲ್ಟಿಫೆಕ್ಸ್’ನಲ್ಲೂ ಶೋ ಡಬ್ಬಲ್ ಆಗಿದೆ.

ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ವ್ಯಕ್ತವಾಗಿರೋ ಅಭೂತಪೂರ್ವ ಪ್ರತಿಕ್ರಿಯೆ ಕಂಡು ಚಿತ್ರಮಂದಿರ ಮಾಲಿಕರು ಹಾಗೂ ಚಿತ್ರ ಪ್ರದರ್ಶಕರು ಖುದ್ದಾಗಿ ಮುಂದೆ ಬಂದು ನಾನು ಮತ್ತು ಗುಂಡ ಚಿತ್ರ ಪ್ರದರ್ಶಿಸಲು ಮುಂದಾಗಿದ್ದಾರೆ. ಹೆಚ್ಚಿನ ಪ್ರಚಾರದ ಹಂಗಿಲ್ಲದೇ ಮೌತ್ ಟಾಕ್ ಮೂಲಕವೆ ಮನೆ ಮಾತಾಗುತ್ತಿರುವ ನಾನು ಮತ್ತು ಗುಂಡನನ್ನು ಕನ್ನಡಿಗರು ಬಾಚಿ ತಬ್ಬಿಕೊಳ್ಳುತ್ತಿದ್ದಾರೆ. ಒಳ್ಳೆಯ ‌ಸಿನಿಮಾಗಳನ್ನ‌ ಕನ್ನಡಿಗರು‌ ಎಂದೂ ಕೈ ಬಿಡೋದಿಲ್ಲ… ಎಂಬುದಕ್ಕೆ ಬೆಸ್ಟ್ ಎಕ್ಸಾಂಪಲ್ ನಾನು‌ ಮತ್ತು ಗುಂಡ ಆಗಿದೆ. ನಾನು ಮತ್ತು ಗುಂಡ ಚಿತ್ರವನ್ನ ರಾಜ್ಯದಾದ್ಯಂತ ರಿಲೀಸ್ ಮಾಡಿರೋ‌ ಮೈಸೂರು ಟಾಕೀಸ್ ನ ಜಾಕ್ ಮಂಜು‌ ಈ ವಿಚಾರವನ್ನ ಸ್ಪಷ್ಟ ಪಡಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top