ಶಿವಮೊಗ್ಗ ಜೈಲು ಸೇರಲಿದ್ದಾರೆ ತಮಿಳಿನ ಸೂಪರ್‌ ಸ್ಟಾರ್‌ ನಟ ವಿಜಯ್‌..!

ತಮಿಳಿನ ಸೂಪರ್‌ ಸ್ಟಾರ್‌ ವಿಜಯ್‌ ಸದ್ಯ ʻಬಿಗಿಲ್‌ʼ ಚಿತ್ರದ ಸಕ್ಸಸ್‌ ಖುಷಿಯಲ್ಲಿದ್ದು, ವಿಜಯ್‌ ಅವರ ಮುಂದಿನ ಸಿನಿಮಾದ ಬಗ್ಗೆ ಈಗಾಗಲೇ ಅಭಿಮಾನಿಗಳಲ್ಲಿ ಕ್ಯೂರ್ಯಾಸಿಟಿ ಹುಟ್ಟಿದೆ. ವಿಜಯ್‌ ಅವರ ಮುಂದಿನ ಸಿನಿಮಾ ʻದಳಪತಿ 64ʼ ಸಿನಿಮಾದ ಶೂಟಿಂಗ್‌ ಈಗಾಲೇ ಭರದಿಂದ ಸಾಗುತ್ತಿದ್ದು, ಮೊದಲ ಹಂತದ ಶೂಟಿಂಗ್‌ ದೆಹಲಿಯಲ್ಲಿ ಮುಗಿಸಿ , ವಿಜಯ್‌ ಅಂಡ್‌ ಟೀಂ ಈಗ ಶಿವಮೊಗ್ಗದ ಕಡೆ ಹೊರಟ್ಟಿದ್ದಾರೆ. ಹೌದು ಶಿವಮೊಗ್ಗದ ಜೈಲಿನ ಸುತ್ತಮುತ್ತ ʻದಳಪತಿ 64ʼ ಚಿತ್ರದ ಶೂಟಿಂಗ್‌ ನಡೆಯಲಿದ್ದು ಇದಕ್ಕಾಗಿ ಜಿಲ್ಲಾಡಳಿತದ ಅನುಮತಿಯನ್ನು ಪಡೆದುಕೊಂಡಿದೆ.

ಇನ್ನು ಡಿಸೆಂಬರ್‌ 1 ರಿಂದ ಜನವರಿ 18ರ ವರೆಗೆ ದಳಪತಿ ಶೂಟಿಂಗ್‌ಗೆ ಅನುಮತಿ ನೀಡಿದ್ದು, ವಿಜಯ್‌ ಜೊತೆ ವಿಜಯ್‌ ಸೇತುಪತಿಕೂಡ ಈ ಶೂಟಿಂಗ್‌ನಲ್ಲಿ ಕಾಣಸಿಕೊಳ್ಳಲಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top