ವೋಟ್‌ ಫಾರ್‌ ಬಿಜೆಪಿ ಅಂದ ನಟಿ ಹರ್ಷಿಕಾ ಪೂಣಚ್ಚ..!

ಉಪ ಚುನಾವಣಾ ಪ್ರಚಾರದಲ್ಲಿ ಈಗ ತಾರಾ ಮೆರುಗು ಜೋರಾಗೋ ಲಕ್ಷಣಗಳು ಕೇಳಿ ಬರ್ತಾ ಇದೆ. ಇಂದು ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಒಂದು ಕಡೆ ಬಿಜೆಪಿ ನಾಯಕ ಮುರಳೀಧರ್‌ ರಾವ್‌ ಚಿಕ್ಜಬಳ್ಳಾಪುರದಲ್ಲಿ ಪರವಾಗಿ ಪ್ರಚಾರ ನಡೆಸ್ತಾ ಇದ್ರೆ, ಇತ್ತ ಬಿಜೆಪಿ ಅಭ್ಯರ್ಥಿ ಸುಧಾಕರ್‌ ಪರವಾಗಿ ಸ್ಯಾಂಡಲ್‌ವುಡ್‌ ನಟಿ ಹರ್ಷಿಕಾ ಪೂಣಚ್ಚ ಕೂಡ ಪ್ರಚಾರದಲ್ಲಿ ತೊಡಗಿದ್ದಾರೆ. ವೋಟ್‌ ಫಾರ್‌ ಬಿಜೆಪಿ ಅನ್ನೋ ಘೋಷಣೆ ಮೂಲಕ ಹರ್ಷಿಕಾ ಪೂಣಚ್ಚ ಸುಧಾಕರ್‌ ಪರವಾಗಿ ಮತಯಾಚನೆ ಮಾಡ್ತಾ ಇದ್ರೆ, ಚಿಕ್ಕಬಳ್ಳಾಪುರದಲ್ಲಿ ಇನ್ನೋಂದು ವಾರ್ಡ್‌ನಲ್ಲಿ ಬಿಗ್‌ಬಾಸ್‌ ಖ್ಯಾತಿಯ ಭುವನ್‌ ಕೂಡ ಬಿಜೆಪಿ ಅಭ್ಯರ್ಥಿ ಸುಧಾಕರ್‌ ಪರವಾಗಿ ಮತಯಾಚನೆ ಮಾಡಿದ್ದಾರೆ. ಇನ್ನು ಇತ್ತ ಮಹಾಲಕ್ಷ್ಮೀ ಲೇಔಟ್‌ನಲ್ಲಿ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಪರವಾಗಿ ನಟಿ ತಾರಾ ಕೂಡ ಮತಯಾಚನೆ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top