ವೈರಸ್ ಬರುವುದರಿಂದ ಯಾರು ಮನೆ ಬಳಿ ಬರಬೇಡಿ ಎಂದ ನಟ ಯಶ್..!

ರಾಕಿಂಗ್ ಸ್ಟಾರ್ ಯಶ್ ತಮ್ಮ ಅಭಿಮಾನಿಗಳಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ. ಹೌದು ನಟ ಯಶ್ ತಮ್ಮ ಅಭಿಮಾನಿಗಳ ಬಳಿ ಮಾರ್ಚ್ 7ರಂದು ಯಾರು ನಮ್ಮ ಮನೆ ಬಳಿ ಬರಬೇಡಿ ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ. ಕಾರಣ ಮಾರ್ಚ್ 7 ರಾಧಿಕಾಪಂಡಿತ್ ಹುಟ್ಟುಹಬ್ಬವಿದ್ದು ಪ್ರತಿ ವರ್ಷ ಅಭಿಮಾನಿಗಳು ತಮ್ಮ ಫೇವರೇಟ್ ನಟಿಗೆ ವಿಶ್ ಮಾಡಲು ಮನೆಗೆ ಬಂದು ಶುಭಾಶಯ ಕೋರಿ ಹುಟ್ಟುಹಬ್ಬ ಆಚರಿಸುತ್ತಿದ್ದರು, ಆದ್ರೆ ಈ ಬಾರಿ ಯಾರು ಹುಟ್ಟುಹಬ್ಬದ ದಿನ ಮನೆಯ ಬಳಿ ಬರಬೇಡಿ ಎಂದು ಅಭಿಮಾನಿಗಳಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ.`ಓಬೆರಾಯನ ಕತೆ’ ಚಿತ್ರದ ಪೋಸ್ಟರ್ ರಿಲೀಸ್ ಮಾಡಿ ಮಾತನಾಡಿದ ಯಶ್ ಈ ಬಾರಿ ರಾಧಿಕಾ ಹುಟ್ಟುಹಬ್ಬ ಸರಳವಾಗಿ ಆಚರಿಸುತ್ತಿದ್ದು, ನಮ್ಮ ಮನೆಯಲ್ಲಿ ಈಗ ಮಕ್ಕಳಿರುವುದರಿಂದ ಹಾಗೂ ಎಲ್ಲ ಕಡೆ ವೈರಸ್ ಹರಡುತ್ತಿರುವ ಕಾರಣ ತುಂಬಾ ಜನ ಸೇರುವುದು ಬೇಡ, ಈಬಾರಿ ಯಾವುದೇ ಆಚರಣೆ ಇಲ್ಲ, ಸಂಜೆ ನಾನು ಹಾಗೂ ರಾಧಿಕಾ ಒಟ್ಟಿಗೆ ಎಲ್ಲಿಯಾದರೂ ಹೋಗಿ ಕಾಲ ಕಳೆಯುತ್ತೇವೆ ಅಷ್ಟೇ ಎಂದು ಯಶ್ ಹೇಳಿದ್ದಾರೆ.

ಇನ್ನು ಕೊರೊನಾ ಬಗ್ಗೆ ಮಾತನಾಡಿದ ಯಶ್ ಎಲ್ಲರೂ ಹುಷಾರಾಗಿರಿ, ಸ್ವಚ್ಛತೆಯನ್ನು ಕಾಪಾಡಿ,ಎಲ್ಲರಿಗೂ ಶೇಕ್ ಹ್ಯಾಂಡ್ ಕೊಡುವ ಬದಲು ನಮ್ಮ ದೇಶದ ಸಂಸ್ಕಾರ ನಮಸ್ಕಾರವನ್ನು ಸಲ್ಲಿಸಿ ಎಂದು , ನಿಮಗೆ ಸ್ವಲ್ಪ ಹುಷಾರಿಲ್ಲ ಎಂದಾಗ ಆಸ್ಪತ್ರೆಗೆ ಹೋಗಿ ತೋರಿಸಿಕೊಳ್ಳಿ, ತಮ್ಮ ಅಭಿಮಾನಿಗಳಿಗೆ ಸಲಹೆಯನ್ನು ನೀಡಿದರು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top