ವೈರಲ್‌ ಆಯ್ತು ರಶ್ಮಿಕಾ ಅವರ ಈ ಫೋಟೋ..!

ಅದೆನೋ ಏನೋ ಕಿಸ್ಸಿಗೂ ರಶ್ಮಿಕಾಗೂ ಅದೇನೋ ನಂಟು.. ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಾಗೋ ರಶ್ಮಿಕಾ ಅತಿ ಹೆಚ್ಚು ಸುದ್ದಿಯಾಗಿದ್ದು ಈ ಕಿಸ್‌ ವಿಚಾರಕ್ಕೆ, ಅದರಲ್ಲೂ ಗೀತಗೋವಿಂದಂ ಚಿತ್ರದಲ್ಲಿ ವಿಜಯ್‌ ದೇವಕೊಂಡ ಜೊತೆ ಲಿಪ್‌ ಲಾಕ್‌ ಮಾಡಿದ್ದ ಸೀನ್‌ ಸಿನಿಮಾ ರಿಲೀಸ್‌ ಆಗುವ ಮೊದಲೇ ಲೀಕ್‌ ಆಗಿ ಅತಿ ಹೆಚ್ಚು ಟ್ರೋಲ್‌ ಕೂಡ ಆಗಿತ್ತು, ಇನ್ನು ಡಿಯರ್‌ ಕಾಮ್ರೆಡ್‌ ಚಿತ್ರದಲ್ಲೂ ವಿಜಯ್‌ ದೇವರಕೊಂಡ ಜೊತೆ ಮತ್ತೆ ಲಿಪ್‌ ಲಾಕ್‌ ಮಾಡಿ ಸಖತ್‌ ಸುದ್ದಿಕೂಡ ಆಗಿದ್ರು ಜೊತೆಗೆ ಪಾತ್ರಕ್ಕೆ ಬೇಕಾದಾಗ ಕಿಸ್‌ ಸೀನ್‌ನಲ್ಲಿ ಕಾಣಸಿಕೊಳ್ಳಬೇಕಾಗುತ್ತದೆ ಎಂದು ಸಹ ಉತ್ತರ ಕೊಟ್ಟು ಟೀಕಾಕಾರರ ಬಾಯಿ ಮುಚ್ಚಿಸಿದ್ರು, ಆದ್ರೆ ಈ ಬಾರಿ ರಶ್ಮಿಕಾ ಅವರ ಈ ಒಂದು ಫೋಟೋ ಈಗ ಸಖತ್‌ ವೈರಲ್‌ ಆಗುವ ಮೂಲಕ ಮತ್ತೆ ಸುದ್ದಿಯಾಗಿದೆ. ಹೌದು ರಶ್ಮಿಕಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಕಣ್ಣು ಮುಚ್ಚಿ ಕಿಸ್‌ ಮಾಡುತ್ತಿರುವ ರೀತಿ ಇರೋ ಫೋಟೋ ಒಂದನ್ನು ಪೋಸ್ಟ್‌ ಮಾಡಿದ್ದು ಅದಕ್ಕೆ ʻಉಮ್ಮಾʼ ಅನ್ನೋ ಕ್ಯಾಷ್ಶನ್‌ ನೀಡಿ ಪೋಸ್ಟ್‌ ಮಾಡಿದ್ದಾರೆ.

ಸದ್ಯ ಈ ಫೋಟೋ ಈಗ ಸಖತ್‌ ವೈರಲ್‌ ಆಗಿದ್ದು ರಶ್ಮಿಕಾ ಅಭಿಮಾನಿಗಳು, ಪಡ್ಡೆ ಹುಡುಗರು ಫೋಟೋ ಸಖತ್‌ ಕಿಕ್‌ ಕೊಡ್ತಾ ಇದೆ ಗುರು ಅಂತ ಹೇಳ್ತಾ ಇದ್ದಾರೆ. ಇನ್ನು ರಶ್ಮಿಕಾ ಟಾಲಿವುಡ್‌ನಲ್ಲಿ ಬ್ಯೂಸಿಯಾಗಿದ್ದು ಮಹೇಶ್‌ ಬಾಬು ಮತ್ತು ಅಲ್ಲು ಅರ್ಜುನ್‌ ಚಿತ್ರದಲ್ಲಿ ನಟಿಸ್ತಾ ಇದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top