
ಪ್ರಪಂಚದಲ್ಲಿ ಯಾರಿಗೆ ಆಗ್ಲಿ ಪ್ರೀತಿ ನೀಡಿದರೆ ಅವರು ಪ್ರೀತಿ ನೀಡ್ತಾರೆ ಅನ್ನೋ ಮಾತುಗಳಿವೆ, ಇನ್ನು ಅದು ಪ್ರಾಣಿಗಳ ವಿಚಾರದಲ್ಲಿ ಸ್ವಲ್ಪ ಜಾಸ್ತಿನೇ ಅಂತಾನೇ ಹೇಳಬಹುದು, ಮನೆಯಲ್ಲಿ ಒಂದು ನಾಯಿ ಸಾಕಿದರೆ ಅದು ಸಾಯುವ ತನಕ ತನ್ನನ್ನು ಸಾಕಿದ ಯಜಮಾನನಿಗೆ ನೀಯತ್ತಿನಿಂದ ಇರುತ್ತದೆ. ಪ್ರಾಣಿಗಳ ಗುಣವೇ ಅಂತದ್ದು, ಪ್ರೀತಿ ನೀಡಿದಷ್ಟು ಅವು ನಮ್ಮನ್ನು ಅಷ್ಟೇ ಪ್ರೀತಿಯಿಂದ ಕಾಣುತ್ತವೆ, ಅದಕ್ಕೆ ಇಲ್ಲೊಂದು ವಿಡಿಯೋ ಈಗ ಸಾಕ್ಷಿಯಾಗಿದೆ, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ವಿಡಿಯೋ ನೋಡಿದ ಪ್ರತಿಯೊಬ್ಬರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಹೌದು ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಮನೆಯ ಮುಂಭಾಗದಲ್ಲಿ ಇರುವ ಮರದ ಮೇಲೆ ಕುಳಿತ ಪಕ್ಷಿಯನ್ನು ಕರೆದು ಅದಕ್ಕೆ ಮಕ್ಕಳ ರೀತಿ ಊಟ ಮಾಡಿಸುವ ವಿಡಿಯೋ ಈಗ ಎಲ್ಲಾ ಕಡೆ ಸಖತ್ ಸುದ್ದಿ ಮಾಡ್ತಾ ಇದೆ. ಪ್ರತಿ ದಿನ ಇದೇ ರೀತಿ ಮಾಡುವ ಈ ಮಹಿಳೆ ವಿಶೇಷ ಗುಣವನ್ನು ನೋಡಿದ ಪ್ರಾಣಿ ಪ್ರಿಯರು ಈಕೆಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಏನೇ ಇದ್ರು ಯಾವುದೇ ವಸ್ತುವಿರಲಿ ಅದಕ್ಕೆ ನಾವು ಪ್ರೀತಿ ತೋರಿದರೆ ಅದು ಸಹ ನಮಗೆ ಪ್ರೀತಿ ತೋರಿಸುತ್ತದೆ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.