
ಕೆಲವೊಮ್ಮೆ ಮನುಷ್ಯರಿಗಿಂತ ಪ್ರಾಣಿಗಳು ಭಾವನಾತ್ಮಕವಾಗಿ ಬಿಡ್ತಾವೆ. ಅದರಲ್ಲೂ ನಿಯತ್ತಿಗೆ ಇನ್ನೊಂದು ಹೆಸರು ಅಂದ್ರೆ ಅದು ನಾಯಿ. ನಾಯಿ ಮತ್ತು ಮನುಷ್ಯನ ನಡುವೆ ಅದೇನೋ ಒಂದು ಭಾವನಾತ್ಮ ಸಂಬಂಧ ಉಂಟಾಗಿ ಬಿಡುತ್ತದೆ.
ಇನ್ನು ನಾಯಿ ತನ್ನ ಮನೆಯ ಒಡೆಯ ಅಥವಾ ಒಡೆತಿಯನ್ನು ಹಚ್ಚಿಕೊಂಡರೆ ಅವರು ಒಂದು ಕ್ಷಣ ಇಲ್ಲವೆಂದರೂ ಆ ಸಮಯದಲ್ಲಿ ಆ ಸಾಕು ನಾಯಿ ತಡಬಡಿಸಿ ಹೋಗಿ ಬಿಡುತ್ತದೆ.
ಅದೇ ರೀತಿಯ ಒಂದು ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಹಿಳೆಯೊಬ್ಬರು ತುಳು ಭಾಷೆಯಲ್ಲಿ ನಾಯಿಗೆ ಬೈಯುತ್ತಿರೋ ವಿಡಿಯೋ ಇದಾಗಿದ್ದು ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲಿ ಸಖತ್ ವೈರಲ್ ಆಗಿದ್ದ. ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಉಡುಪಿ ಮತ್ತು ಮಂಗಳೂರು ಭಾಗದಲ್ಲಿ ಸತತ ಮಳೆಯಾಗುತ್ತಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಈ ವೇಳೆ ನಾಯಿ ಮಳೆಯಲ್ಲಿ ಹೊರ ಹೋಗಿದ್ದಕ್ಕೆ ಮನೆಯ ಒಡತಿ ಬೈಯುತ್ತಿರೋ ವಿಡಿಯೋ ಇದಾಗಿದ್ದು, ವಿಡಿಯೋದಲ್ಲಿ ಒಡತಿ ಕೋಪ ಮಾಡಿಕೊಂಡಿದ್ದಕ್ಕೆ ನಾಯಿ ಆಕೆಯ ಕೈ ಹಿಡಿದು ಕ್ಷಮೆ ಕೇಳುತ್ತಿರುವ ರೀತಿ ಮಾಡುತ್ತಿರುವುದು ಎಲ್ಲರ ಮನಸ್ಸಿಗೆ ಇಷ್ಟವಾಗಿದೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದ್ದು ಎಲ್ಲರ ನಾಯಿ ಮತ್ತು ಮನುಷ್ಯನ ಪ್ರೀತಿ ಎಂತಹದ್ದು ಅನ್ನೋದನ್ನ ತೋರಿಸಿದೆ.