ವೇಗಿ ನಟರಾಜನ್‌ಗೆ ಅದೃಷ್ಟವಾಯ್ತು ಇಂಜುರಿ ಸಮಸ್ಯೆ..

ಅದೃಷ್ಟ ಯಾರಿಗೆ ಯಾವ ರೀತಿ ಒಲಿಯುತ್ತೆ ಅಂತ ಹೇಳೋಕೆ ಆಗೋಲ್ಲ, ಒಬ್ಬೊಬ್ಬರಿಗೆ ಒಂದೊಂದು ರೀತಿ ಒಲಿಯುತ್ತದೆ, ಇದೀಗ ಟೀಂ ಇಂಡಿಯಾದ ವೇಗದ ಬೌಲರ್‌ ಟಿ ನಟರಾಜನ್‌ಗೆ ಮಾತ್ರ ಆ ಅದೃಷ್ಟ ಇಂಜುರಿ ಸಮಸ್ಯೆಯಿಂದ ಒಲಿಯುತ್ತಿದೆ, ಹೌದು ನಟರಾಜನ್‌ ಐಪಿಎಲ್‌ 2020 ಮುಗಿಯುವ ವರೆಗೂ ಆತ ಯಾರು ಅನ್ನೋದು ಯಾರಿಗೂ ತಿಳಿದಿರಲಿಲ್ಲ, ಆದ್ರೆ ಐಪಿಎಲ್‌ ಕೊನೆಯ ಹಂತದಲ್ಲಿ ನಟರಾಜನ್‌ ಅನ್ನೋ ಯಾರ್ಕರ್‌ ಸ್ಪೆಷಲಿಸ್ಟ್‌ ಬೆಳಕಿಗೆ ಬಂದ್ರು, ಅದು ಕೂಡ ಹೈದರಾಬಾದ್‌ ತಂಡದಲ್ಲಿ ಇಂಚುರಿ ಸಮಸ್ಯೆಯಿಂದ, ಹೌದು 2020ರ ಐಪಿಎಲ್‌ನಲ್ಲಿ ಬೆಂಚ್‌ ಕಾಯುತ್ತಿದ್ದ ನಟರಾಜನ್‌ಗೆ ಅದೃಷ್ಟ ಒಲಿದಿದ್ದು, ವೇಗಿ ಭುವನೇಶ್ವರ್‌ ಕುಮಾರ್‌ ಅವರ ಇಂಜುರಿಯಿಂದಾಗಿ, ಆ ನಂತರ ನಟರಾಜನ್‌ಗೆ ಅದೃಷ್ಟದ ಬಾಗಿಲು ತೆರೆಯಿತು, ಆ ಮೂಲಕ ಐಪಿಎಲ್‌ನಲ್ಲಿ ಸಿಕ್ಕ ಅವಕಾಶವನ್ನು ಬಳಿಸಿಕೊಂಡ ನಟರಾಜನ್‌ ಕೆಲವೇ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಐಪಿಎಲ್‌ನಲ್ಲಿ ಯಾರ್ಕರ್‌ ಸ್ಪೆಷಲಿಸ್ಟ್‌ ಅಂತ ಅನಿಸಿಕೊಂಡ್ರು, ಅಷ್ಟೇ ಅಲ್ಲದೇ ಬಿಸಿಸಿಐ ಗಮನ ಸೆಳೆಯುವಲ್ಲಿ ಯಶಸ್ವಿಯಾದ್ರು, ಆ ಮೂಲಕ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿ ನೆಟ್‌ ಬೌಲರ್‌ ಆಗಿ ಆಯ್ಕೆಯಾಗುವ ಮೂಲಕ ಆಸ್ಟ್ರೇಲಿಯಾ ಪ್ರವಾಸ ಹೊರಟ ನಟರಾಜನ್‌ಗೆ ಅಲ್ಲಿಯು ಇಂಜುರಿ ಮೂಲಕ ಅದೃಷ್ಟದ ಬಾಗಿಲು ತೆರೆಯಿತು, ಹೌದು ವರುಣ್‌ ಚಕ್ರವರ್ತಿ ಇಂಜುವರಿಯಿಂದಾಗಿ ನಟರಾಜನ್‌ಗೆ ಟೀಂ ಇಂಡಿಯಾದಲ್ಲಿ ಸದಸ್ಯನಾಗಿ ಬಡ್ತಿ ಸಿಕ್ಕಿತು, ಮೊದಲೆರಡು ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್‌ಗಳು ದುಬಾರಿಯಾದ್ದರಿಂದ ಮೂರನೇ ಏಕದಿನ ಪಂದ್ಯಕ್ಕೆ ನಟರಾಜನ್‌ಗೆ ತಂಡದಲ್ಲಿ ಅವಕಾಶ ಸಿಕ್ಕಿತು ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ನಟ್ಟು , ನಂತರ ಟಿ 20 ಟೂರ್ನಿಯಲ್ಲೂ ತಂಡದಲ್ಲಿ ಸ್ಥಾನ ಗಳಿಸುವ ಮೂಲಕ ಉತ್ತಮ ಪ್ರದರ್ಶನ ತೋರಿ 3 ಪಂದ್ಯಗಳಿಂದ 6 ವಿಕೆಟ್‌ ಪಡೆದು ಟಿ 20 ಸರಣಿ ಗೆಲುವಿಗೆ ಪ್ರಮುಖ ಪಾತ್ರ ವಹಿಸುವ ಜೊತೆಯಲ್ಲಿ ಟೀಂ ಇಂಡಿಯಾದಲ್ಲಿ ಬ್ಯಾಕಪ್‌ ಪ್ಲೇಯರ್‌ ಆಗಿ ಉಳಿಯುವಂತೆ ಆಯಿತು.

ಇದೀಗ ಟೆಸ್ಟ್‌ ಸರಣಿಯಲ್ಲೂ ನಟರಾಜನ್‌ಗೆ ಪಾದಾರ್ಪಣೆ ಮಾಡಲು ಇದೇ ಇಂಜುರಿ ಸಮಸ್ಯೆ ಕಾರಣವಾಗಲಿದ್ಯ ಆ ಮೂಲಕ ಟೆಸ್ಟ್‌ ತಂಡದಲ್ಲೂ ಅದೃಷ್ಟ ಖುಲಾಯಿಸಲಿದ್ಯ ಅನ್ನೋ ಮಾತುಗಳು ಕೇಳಿ ಬರ್ತಾ ಇದೆ. ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಗೆದ್ದು ಬೀಗಿದ್ದು, ಮೂರನೇ ದಿನದಾಟದ ವೇಳೆ ಟೀಂ ಇಂಡಿಯಾದ ವೇಗಿ ಉಮೇಶ್‌ ಯಾದವ್‌ ಬೌಲಿಂಗ್‌ ಮಾಡುವ ವೇಳೆ ಗಾಯದ ಸಮಸ್ಯೆಗೆ ಒಳಗಾಗುವ ಮೂಲಕ ಪಂದ್ಯದ ಅರ್ಧದಿಂದಲೇ ಹೊರ ನಡೆದ್ರು, ಸದ್ಯ ಉಮೇಶ್‌ ಯಾದವ್‌ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಮೂರನೇ ಟೆಸ್ಟ್‌ ಆಡುವುದು ಅನುಮಾನವಾಗಿದ್ದು ಹೀಗಾಗಿ ಟೀಂ ಇಂಡಿಯಾದ ಬ್ಯಾಕಪ್‌ ಪ್ಲೇಯರ್‌ ಆಗಿ ಆಸ್ಟ್ರೇಲಿಯಾದಲ್ಲೇ ಇರೋ ನಟರಾಜನ್‌ಗೆ ತಂಡದಲ್ಲಿ ಸ್ಥಾನ ನೀಡುವ ಬಗ್ಗೆ ಚರ್ಚೆಗಳು ನಡೀತಾ ಇದೆ, ಈಗಾಗಲೇ ಟೀಂ ಇಂಡಿಯಾದಲ್ಲಿ ಬೌಲರ್‌ಗಳಿಗೆ ಗಾಯದ ಸಮಸ್ಯೆ ಕಾಡುತಿದೆ, ಮೊದಲ ಟೆಸ್ಟ್‌ ಪಂದ್ಯದ ನಂತರ ಮೊಹಮ್ಮದ್‌ ಶಮ್ಮಿ ಕೂಡ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರ ಬಿದ್ದಿದ್ದಾರೆ, ಇದೀಗ ಉಮೇಶ್‌ ಯಾದವ್‌ ಕೂಡ ಇಂಜುರಿಯಾಗಿದ್ದು ಅವರು ಮೂರನೇ ಟೆಸ್ಟ್‌ ಪಂದ್ಯಕ್ಕೆ ಅನ್‌ಫಿಟ್‌ ಆಗಿದ್ದೇ ಆದ್ರೆ ಮೂರನೇ ಟೆಸ್ಟ್‌ ಪಂದ್ಯಕ್ಕೆ ಯಾರ್ಕರ್‌ ಸ್ಪೆಷಲಿಸ್ಟ್‌ ನಟರಾಜನ್‌ ಕಣಕ್ಕಿಳಿಯೋದು ಕನ್‌ಫರ್ಮ್‌ ಆಗಲಿದೆ ಅಂತ ಹೇಳಲಾಗುತ್ತಿದೆ.

ಒಟ್ಟಿನಲ್ಲಿ ಅದೃಷ್ಟ ಯಾರಿಗೆ ಯಾವ ರೀತಿ ಒಲಿಯುತ್ತೋ ಬಿಡುತ್ತೋ ನಟರಾಜನ್‌ಗೆ ಮಾತ್ರ ಇಂಜುರಿ ಸಮಸ್ಯೆ ಅದೃಷ್ಟದ ಬಾಗಿಲಾಗಿರೋದಂತು ನಿಜ,

ನಿಮ್ಮ ಪ್ರಕಾರ ನಟರಾಜನ್‌ ಉಮೇಶ್‌ ಯಾದವ್‌ ಬದಲಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಬಹುದ ನಿಮ್ಮ ಅನಿಸಿಕೆ ಏನೂ ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top