ವೀರ್ಯವನ್ನು ದಾನ ಮಾಡಿ ಎಂದು ಹೃತಿಕ್‌ ಸಲಹೆ ಕೊಟ್ಟ ಮಹಿಳಾ ಕ್ರಿಕೆಟರ್‌..!

ಬಾಲಿವುಡ್‌ನ ಮೋಸ್ಟ್‌ ಹ್ಯಾಂಡ್‌ಸಮ್‌ ಹೀರೋ ಎಂದೇ ಖ್ಯಾತಿಯಾಗಿರುವ, ಗ್ರೀಕ್‌ ದೊರೆ ರೀತಿ ಕಾಣುವ ಹೃತಿಕ್‌ ರೋಷನ್‌ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಹೃತಿಕ್ ಡ್ಯಾನ್ಸ್‌ ಮತ್ತು ಅವರ ಸ್ಟೈಲಿಷ್‌ ಲುಕ್‌ಗೆ ಬೋಲ್ಡ್‌ ಆದ ಹುಡುಗಿಯರೆ ಇಲ್ಲ, ವಿಶ್ವದ ಮೋಸ್ಟ್‌ ಹ್ಯಾಂಡ್‌ಸಮ್‌ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರೋ ಹೃತಿಕ್‌ಗೆ ಈಗ ಮಹಿಳಾ ಕ್ರಿಕೆಟರ್‌ ಒಬ್ಬರು ಒಂದು ಸಲಹೆಯನ್ನು ಕೊಟ್ಟಿದ್ದಾರೆ, ಆ ಸಲಹೆ ಈ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಕೂಡ ಆಗಿದೆ. ಹೌದು ತಮಿಳುನಾಡನ್ನು ಪ್ರತಿನಿಧಿಸುವ ಮಹಿಳಾ ಕ್ರಿಕೆಟ್‌ ಆಟಗಾರ್ತಿ ಭಾವನ ಬಾಲಕೃಷ್ಣನ್‌ ತಮ್ಮ ಟ್ವೀಟರ್‌ನಲ್ಲಿ ಹೃತಿಕ್‌ ನೀವೂ ನಿಮ್ಮ ಜೀನ್‌ ಮುಂದುವರೆಸ ಬೇಕಾದರೆ ನೀವೂ ನಿಮ್ಮ ವೀರ್ಯಾವನ್ನು ಡೊನೆಟ್‌ ಮಾಡಿ ಅಂತ ಹೇಳಿದ್ದಾರೆ.

ಇತ್ತಿಚೆಗೆ ಹೃತಿಕ್‌,ಟೈಗರ್‌ ಶ್ರಾಫ್‌ ಅಭಿನಯದ ʻವಾರ್‌ʼ ಚಿತ್ರ ರಿಲೀಸ್‌ ಆಗಿದ್ದು ಈ ಚಿತ್ರ ನೋಡಲು ಸ್ನೇಹಿತರೊಡನೆ ತೆರೆಳಿದ್ದ ಭಾವನ ಸಿನಿಮಾ ನೋಡಿ ಫಿದಾ ಆಗಿದ್ದಾರೆ, ಅಲ್ಲೇ ಚಿತ್ರದಲ್ಲಿ ಹೃತಿಕ್‌ ಮತ್ತು ಟೈಗರ್‌ ಶ್ರಾಫ್‌ ನಟೆನೆ ಸೂಪರ್‌ ಎಂದು ತಮ್ಮ ಟ್ವೀಟರ್‌ನಲ್ಲಿ ಬರೆದುಕೊಂಡಿರೋ ಭಾವನ ಹೃತಿಕ್‌ ರೋಷನ್‌ಗೆ ಸಲಹೆಯನ್ನು ಸಹ ನೀಡಿದ್ದಾರೆ. ಹೃತಿಕ್‌ ನಿಮ್ಮ ಜೀನ್‌ ಮುಂದಿನ ಪೀಳಿಗೆಗೂ ಮುಂದುವರೆಯ ಬೇಕು ಹಾಗಾಗಿ ನೀವೂ ನಿಮ್ಮ ವೀರ್ಯವನ್ನು ಡೊನೆಟ್‌ ಮಾಡಿ ಎಂದು ತಮ್ಮ ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಸದ್ಯ ಈ ಟ್ವೀಟ್‌ ಈ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಕೂಡ ಆಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top