ವೀರೂ ಡ್ರೀಮ್ ಟೀಂ ಆರ್‍ಸಿಬಿ ಟೀಂ ಆದ್ರೆ ಹೇಗಿರುತ್ತೆ..?

ಐಪಿಎಲ್ 2020 ಫೀವರ್ ಈಗಾಗಲೇ ಮುಗಿದ್ದಿದ್ದು, ಮುಂಬೈ 5ನೇ ಬಾರಿ ಚಾಂಪಿಯನ್ ಆಗೋ ಮೂಲಕ ದಾಖಲೆ ಬರೆದಿದೆ.ಇನ್ನು ಅನೇಕ ಕ್ರಿಕೆಟ್ ದಿಗ್ಗಜರು ತಮ್ಮದೇ ಸ್ಟೈಲ್‍ನಲ್ಲಿ ಐಪಿಎಲ್2020ಯನ್ನು ವಿಶ್ಲೇಷಣೆ ಮಾಡುತ್ತಿದ್ದು, ತಮನ್ಮ ನೆಚ್ಚಿನ ತಂಡ ಮತ್ತು ಆಟಗಾರರ ಬಗ್ಗೆ ಮಾತನಾಡುತ್ತಿದ್ದಾರೆ. ಇದೀಗ ಟೀಂ ಇಂಡಿಯಾದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ತಮ್ಮ ಬೆಸ್ಟ್ ಐಪಿಎಲ್ ಪ್ಲೆಯಿಂಗ್ ಇಲೆವೆನ್ ಅನ್ನು ಪ್ರಕಟಿಸಿದ್ದಾರೆ.

ಈ ಪ್ಲೇಯಿಂಗ್ ಇಲೆವೆನ್‍ನಲ್ಲಿ ಆರ್‍ಸಿಬಿಯ 4 ಆಟಗಾರರಿಗೆ ಅವಕಾಶವನ್ನು ನೀಡಿದ್ದು, ಕನ್ನಡಿಗರೇ ಓಪನಿಂಗ್ ಬ್ಯಾಟ್ಸಮನ್‍ಗಳು ಆದ್ರೆ ಬೆಸ್ಟ್ ಅಂತ ಹೇಳಿದ್ದಾರೆ. ಹೌದು ವೀರೂ ತಮ್ಮ ನೆಚ್ಚಿನ ಪ್ಲೇಯಿಂಗ್ ಇಲೆವೆನ್ ಆಯ್ಕೆಮಾಡಿದ್ದು, ತಂಡದ ಓಪನರ್ ಆಗಿ ದೇವದತ್ ಪಡಿಕಲ್ ಮತ್ತು ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡಿದ್ದಾರೆ. ಪಡಿಕಲ್ ಪಾದಾರ್ಪಣೆ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ತಾನೊಬ್ಬ ಉತ್ತಮ ಆಟಗಾರರ ಅಂತ ಸಾಭೀತು ಮಾಡಿದ್ದಾರೆ. ಕೆಎಲ್ ರಾಹುಲ್ ಈ ಸೀಸನ್‍ನಲ್ಲಿ ಅತೀ ಹೆಚ್ಚು ರನ್ ಗಳಿಸಿರೋ ಆಟಗಾರರ ನಾಗಿದ್ದಾರೆ ಅಂತ ಹೇಳಿದ್ದಾರೆ.

ಇನ್ನು ಮೂರನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್‍ಗೆ ವೀರು ಜಾನ್ಸ್ ನೀಡಿದ್ದಾರೆ. ಇನ್ನು ತಂಡದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿಗೆ ಸ್ಥಾನ ನೀಡಿದ್ದು ಜೊತೆ ವಿರಾಟ್ ಕೊಹ್ಲಿಯನ್ನು ತಂಡದ ನಾಯಕನನ್ನಾಗಿ ಮಾಡಿದ್ದಾರೆ. ಐದನೇ ಕ್ರಮಾಂಕದಲ್ಲಿ ಡೇವಿಡ್ ವಾರ್ನರ್ ಆಯ್ಕೆ ಮಾಡಿದ್ದು, ಆರನೇ ಕ್ರಮಾಂಕದಲ್ಲಿ ಎಬಿಡಿಗೆ ಸ್ಥಾನ ನೀಡಿದ್ದಾರೆ. ಇನ್ನು ಡೆತ್ ಓವರ್ ಸ್ಪೆಷಲಿಸ್ಟ್ ಪಾಂಡ್ಯ ಮತ್ತು ಪೊಲಾರ್ಡ್ ಇದ್ದರು ಡೆತ್ ಓವರ್‍ನಲ್ಲಿ ಎಬಿಡಿ ಹೆಚ್ಚು ರನ್ ಗಳಿಸುತ್ತಾರೆ ಎಂದು ವೀರೂ ಎಬಿಡಿಗೆ ಸ್ಥಾನ ನೀಡಿದ್ದಾರೆ.

ಇನ್ನು ಬೌಲಿಂಗ್ ವಿಭಾಗದಲ್ಲಿ ರಬಡಾ, ಬುಮ್ರಾ ಮತ್ತು ಮೊಹಮ್ಮದ್ ಶಮಿಗೆ ಸ್ಥಾನ ನೀಡಿದ್ದು, ಸ್ಪಿನ್ನರ್‍ಗಳಾದ ಚಹಲ್ ಮತ್ತು ರಶೀದ್ ಖಾನ್‍ಗೆ 11ರ ಬಳಗದಲ್ಲಿ ಸ್ಥಾನವನ್ನು ನೀಡಿದ್ದಾರೆ. ಇನ್ನು 12 ಮತ್ತು 13ನೇ ಆಟಗಾರರಾಗಿ ಇಶಾನ್ ಕಿಶಾನ್ ಮತ್ತು ಜೋಫ್ರಾ ಆರ್ಚರ್ ಅವರನ್ನು ಆಯ್ಕೆ ಮಾಡಿದ್ದಾರೆ. ಇನ್ನು ವೀರು ಡ್ರೀಮ್ ಇಲೆವೆನ್‍ನಲ್ಲಿ ಕೋಲ್ಕತ್ತಾ ಮತ್ತು ಚೆನ್ನೈ ತಂಡದ ಯಾವ ಆಟಗಾರರಿಗೂ ಸ್ಥಾನ ಸಿಗದೇ ಇರೋದು ಆಶ್ಚರ್ಯವಾಗಿದ್ರೆ, ಈ ಬಾರಿಯ ಚಾಂಪಿಯನ್ ತಂಡದ ನಾಯಕ ರೋಹಿತ್ ಶರ್ಮಾಗೂ ಸ್ಥಾನ ಸಿಗದೇ ಇರೋದು ಕೂಡ ಕುತೂಹಲಕ್ಕೆ ಕಾರಣವಾಗಿದೆ.

ಇನ್ನು ಇತ್ತ ವಿರೇಂದ್ರ ಸೆಹ್ವಾಗ್ ತಮ್ಮ ಡ್ರೀಮ್ ತಂಡದಲ್ಲಿ ವಿರಾಟ್ ಕೊಹ್ಲಿಗೆ ನಾಯತ್ವದ ಸ್ಥಾನವನ್ನು ನೀಡಿದ್ರೆ, ಇತ್ತ ಐಪಿಎಲ್‍ನಲ್ಲಿ 5ಬಾರಿ ಕಪ್ ಗೆದ್ದ ರೋಹಿತ್ ಶರ್ಮಾಗೆ ಟೀಂ ಇಂಡಿಯಾದ ನಾಯಕ ಸ್ಥಾನ ನೀಡಿದಿದ್ರೆ ಭಾರತ ತಂಡಕ್ಕೆ ನಷ್ಟವಾಗಲಿದೆ, ರೋಹಿತ್‍ಗೆ ನಾಯಕ ಸ್ಥಾನ ನೀಡದಿದ್ರೆ ಏನೂ ತೊಂದರೆ ಇಲ್ಲಾ, ಆದ್ರೆ ಆತ ನಾಯಕನಾಗಲಿಲ್ಲ ಅಂದ್ರೆ ಅದು ಭಾರತಕ್ಕೆ ನಷ್ಟ ಅಂತ ಗೌತಮ್ ಗಂಭೀರ್ ಹೇಳಿದ್ದು, ಇತ್ತ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಕೂಡ ರೋಹಿತ್ ಶರ್ಮಾ ಅವರನ್ನು ಟೀಂ ಇಂಡಿಯಾದ ಟಿ20 ತಂಡದ ನಾಯಕನಾಗಿ ಮಾಡಬೇಕು ಅಂತ ಹೇಳಿದ್ದಾರೆ.

ನಿಮ್ಮ ಪ್ರಕಾರ ವೀರೇಂದ್ರ ಸೆಹ್ವಾಗ್ ಅವರ ಈ ಡ್ರೀಮ್ 11 ತಂಡ ಹೇಗಿದೆ. ಮುಂದಿನ ಐಪಿಎಲ್‍ನಲ್ಲಿ ಈ 11 ಆಟಗಾರರನ್ನು ಯಾವ ಒಂದೇ ತಂಡದಲ್ಲಿ ನೀವು ನೋಡಲು ಬಯಸುತ್ತೀರಾ , ರೋಹಿತ್ ಶರ್ಮಾ ಅವರನ್ನು ಟೀಂ ಇಂಡಿಯಾ ತಂಡದ ನಾಯಕನನ್ನಾಗಿ ಮಾಡಬೇಕ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top