ವಿಶ್ವಸಂಸ್ಥೆಯ ಖಜಾನೆಯೇ ಈಗ ಖಾಲಿ ಖಾಲಿ..!

ಆರ್ಥಿಕ ಹಿಂಜರಿತದಿಂದ ಇಡೀ ವಿಶ್ವವೇ ತತ್ತರಿಸಿ ಹೋಗಿದೆ, ಇದೇ ವೇಳೆ ಈಗ ವಿಶ್ವಸಂಸ್ಥೆಗೂ ಸಹ ಆರ್ಥಿಕ ಸಂಕಷ್ಟ ಎದುರಾಗಿದೆ. ಈ ರೀತಿಯ ಹೇಳಿಕೆಯೊಂದನ್ನು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ನೀಡಿದ್ದಾರೆ.
ವಿಶ್ವಸಂಸ್ಥೆಯ ಸದಸ್ಯ ರಾಷ್ರ್ಟಗಳು ವಿಶ್ವಸಂಸ್ಥೆಗೆ ಸಲ್ಲಿಸಬೇಕಾದ ನಿಯಮಿತ ಬಜೆಟ್ ಮೊತ್ತವನ್ನು ಸರಿಯಾಗಿ ಪಾವತಿಸದ ಕಾರಣ ಹಣಕಾಸಿನ ತೊಂದರೆ ಎದುರಾಗಿದೆ ಎಂದು ಹೇಳಿದ್ದಾರೆ. ವಿಶ್ವಸಂಸ್ಥೆಯ ಕಳೆದ ತಿಂಗಳು ನಡೆದ ವಾರ್ಷಿಕ ಮಹಾಧಿವೇಶನಕ್ಕೂ ಮುನ್ನ ಆರಂಭಿಕ ಹಂತದ ತುರ್ತು ಖರ್ಚುಗಳಲ್ಲಿ ಕಡಿತಗೊಳಿಸಿದ್ರಿಂದ ಮಹಾಧಿವೇಶನ ನಡೆಸಲು ಸಾಧ್ಯವಾಯಿತು ಎಂದಿದ್ದಾರೆ.
ಅಕ್ಟೋಬರ್ ಕೊನೆಯ ವೇಳೆಗೆ ಆರ್ಥಿಕ ಸಂಕಷ್ಟ ಎದುರಾಗಿ,ವೇತನ ಮತ್ತು ಭತ್ಯೆಗಳನ್ನು ಖಚಿತಪಡಿಸಿಕೊಳ್ಳಲು ಕೆಲವು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ, ಇಂತಹ ಪರಿಸ್ಥಿತಿಯಲ್ಲಿ ಅಗತ್ಯವೆಂದು ಹೇಳಿದ್ದಾರೆ.

ಸದಸ್ಯ ರಾಷ್ಟ್ರಗಳು 2019ರಲ್ಲಿ ಶೇ70ರಷ್ಟು ಹಣವನ್ನು ಮಾತ್ರ ಬಜೆಟ್‍ಗೆ ಸಂಬಂಧಿಸಿದ ಮೊತ್ತವನ್ನು ಪಾವತಿಸಿದೆ. ಒಟ್ಟು ಅಕ್ಟೋಬರ್ ಅಂತ್ಯದ ವೇಳೆಗೆ 1,600 ಕೋಟಿ ಮೊತ್ತದ ಕೊರತೆಯಾಗಬಹದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top