ವಿಶ್ವದ ದೊಡ್ಡ ಸ್ಟೇಡಿಯಂನಲ್ಲಿ ನಡೆಯಲಿದೆ ಡೇ ಅಂಡ್ ನೈಟ್ ಟೆಸ್ಟ್

ವಿಕೆಟ್ ಕೀಪರ್,ಬ್ಯಾಟ್ಸಮನ್ ಪಾರ್ಥಿವ್ ಪಟೇಲ್ ಎಲ್ಲಾ ಮಾದರಿಯ ಕ್ರಿಕೆಟ್‍ನಿಂದ ನಿವೃತ್ತಿ ಹೊಂದಿದ ಮೇಲೆ ಇದೀಗ ಹೊಸ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಹವದು ಐಪಿಎಲ್‍ನಲ್ಲಿ ಆರ್‍ಸಿಬಿ ತಂಡದಲ್ಲಿ ಇದ್ದ ಪಾರ್ಥಿವ್ ಪಟೇಲ್ ಇದೀಗ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಹೌದು ಮುಂಬೈ ತಂಡದಲ್ಲಿ ಹೊಸ ಜವಾಬ್ದಾರಿಯನ್ನು ವಹಿಸಿಕೊಂಡಿರೋ ಪಾರ್ಥಿವ್ ಪ್ರತಿಭಾ ಅನ್ವೇಶಕನಾಗಿ ತಂಡದಲ್ಲಿ ಕಾರ್ಯಕ ನಿರ್ವಹಿಸಲಿದ್ದಾರೆ. ಈ ವಿಚಾರವಾಗಿ ಮುಂಬೈ ಇಂಡಿಯನ್ಸ್ ಅಧಿಕೃತ ಪಡಿಸಿದ್ದು ಪಾರ್ಥಿವ್ ಎರಡು ದಶಕಗಳಲ್ಲಿ ಕ್ರಿಕೆಟ್‍ನಲ್ಲಿ ಸಾಕಷ್ಟು ಅನುಭವವನ್ನು ಪಡೆದುಕೊಂಡಿದ್ದಾರೆ. ಪಾರ್ಥಿವ್ ನಮ್ಮನ್ನ ಸೇರಿಕೊಲ್ಳುತ್ತಿರುವುದಕ್ಕೆ ತುಂಬಾ ಸಂತಸವಾಗುತ್ತಿದೆ. ಪಾರ್ಥಿವ್ ಮುಂಬೈ ಇಂಡಿಯನ್ಸ್ ಪರ ಆಡುವ ವೇಳೆ ಕ್ರಿಕೆಟ್ ಪ್ರತಿಭೆಗಳನ್ನು ಆಯ್ಕೆ ಮಾಡಲು ಅವಕಾಶ ದೊರೆತಿತ್ತು. ಅವರಲ್ಲಿರು ಟ್ಯಾಲೆಂಟ್‍ನಿಂದಾಗಿ ನಾವು ಮತ್ತುಷ್ಟು ಕ್ರಿಕೆಟ್ ಪ್ರತಿಭೆಗಳನ್ನು ಅನ್ವೇಶಿಸಲು ಸಾಧ್ಯವಾಗಲಿದೆ ಎಂಬ ಭರವಸೆಯಿಂದ ನಮ್ಮ ಕುಟುಂಬಕ್ಕೆ ಪಾರ್ಥಿವ್ ಅವರಿಗೆ ಸ್ವಾಗರತ ಅಂತ ಮುಂಬೈ ಇಂಡಿಯನ್ಸ್ ತಂಡದ ಮಾಲೀಕ ಆಕಾಶ್ ಅಂಬಾನಿ ಪಾರ್ಥಿವ್ ಅವರ ಎಂಟ್ರಿಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ಪಾರ್ಥಿವ್ ಎಲ್ಲಾ ಮಾದರಿಯ ಕ್ರಿಕೆಟ್‍ಗೂ ನಿವೃತ್ತಿಯನ್ನು ಘೋಷಿಸಿದ್ದು 2018ರಿಂದ ಆರ್‍ಸಿಬಿ ಪರವಾಗಿ ಐಪಿಎಲ್‍ನಲ್ಲಿ ಆಡುತ್ತಿದ್ದರು, ಕಳೆದ ಐಪಿಎಲ್‍ನಲ್ಲಿ ಅವರಿಗೆ ಒಂದು ಪಂದ್ಯದಲ್ಲೂ ಆಡಲು ಅವಕಾಶ ಸಿಕ್ಕಿರಲಿಲ್ಲ, ಇನ್ನು 2016 ಮತ್ತು 2017ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಪಾರ್ಥಿವ್ ಇದೀಗ ಮುಂಬೈ ಇಂಡಿಯನ್ಸ್ ತಂಡದಲ್ಲಿ ಪ್ರತಿಭಾ ಅನ್ವೇಶಕನಾಗಿ ಕಾರ್ಯನಿರ್ವಹಿಸಲಿದ್ದಾರೆ.

ಭಾರತ ಮತ್ತು ಇಂಗ್ಲೇಂಡ್ ನಡುವಿನ ಸರಣಿಯ ಸುಧೀರ್ಘ ವೇಳಾ ಪಟ್ಟಿ ಬಿಡುಗಡೆಯಾಗಿದೆ ಫೆಬ್ರವರಿಯಲ್ಲಿ ತಿಂಗಳಿನಲ್ಲಿ ಇಂಗ್ಲೆಂಡ್ ಭಾರತ ಪ್ರವಾಸ ಕೈಗೊಳ್ಳುತ್ತಿದ್ದು, 4 ಟೆಸ್ಟ್, 5 ಟಿ 20 ಮತ್ತು ಮೂರು ಏಕದಿನ ಪಂದ್ಯವನ್ನು ಆಡಲಿದೆ. ಫೆಬ್ರವರಿ 5 ರಿಂದ ಮೊದಲ ಟೆಸ್ಟ್ ಪಂದ್ಯ ನಡೆಯಲಿದ್ದು ನಾಲ್ಕನೇ ಟೆಸ್ಟ್ ಪಂದ್ಯ ಮಾರ್ಚ್ ನಾಲ್ಕಕ್ಕೆ ನಡೆಯಲಿದೆ. ಇನ್ನು ಭಾರತ ಮತ್ತ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೂಲಕ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಅಹಮದಾಬಾದ್‍ನ ಮೊಟೇರಾ ಕ್ರೀಡಾಂಗಣ ಲೋಕಾರ್ಪಣೆಯಾಗಲಿದೆ, ಈ ಸ್ಟೇಡಿಯಂನಲ್ಲಿ ಎರಡು ಟೆಸ್ಟ್ ಪಂದ್ಯಗಳು ನಡೆಯಲಿದ್ದು, ಇಂಗ್ಲೆಂಡ್ ವಿರುದ್ಧ ಐದು ಟಿ 20 ಪಂದ್ಯಗಳ ಸರಣಿ ಸಹ ಈ ಒಂದೇ ಸ್ಟೇಡಿಯಂನಲ್ಲಿ ನಡೀತಾ ಇರೋದು ವಿಶೇಷ, ಮೊದಲ ಟಿ 20 ಪಂದ್ಯ ಮಾರ್ಚ್ 12ರಂದು ನಡೆಯಲಿದ್ದು, ಕೊನೆಯ ಟಿ 20 ಪಂದ್ಯ ಮಾರ್ಚ್ 20ರಂದು ನಡೆಯಲಿದೆ. ಇನ್ನು ಟೆಸ್ಟ್ ಮತ್ತು ಟಿ 20 ಜೊತೆಯಲ್ಲಿ ಮೂರು ಏಕದಿನ ಪಂದ್ಯ ಕೂಡ ಇಂಗ್ಲೆಂಡ್ ವಿರುದ್ಧ ನಡೆಯಲಿದ್ದು, ಮೊದಲ ಏಕದಿನ ಪಂದ್ಯ ಮಾರ್ಚ್ 23ರಂದು ನಡೆಯಲಿದೆ. ಮೂರನೇ ಏಕದಿನ ಪಂದ್ಯ ಮಾರ್ಚ್ 28ರಂದು ನಡೆಯಲಿದೆ, ಈ ಮೂರು ಏಕದಿನ ಪಂದ್ಯಗಳು ಪುಣೆಯಲ್ಲಿ ನಡೆಯಲಿದೆ. ಇನ್ನು ಮೊಟೆರಾದಲ್ಲಿ ನಡೆಯಲಿರೋ ಮೂರು ಮತ್ತು ನಾಲ್ಕನೇ ಟೆಸ್ಟ್ ಪಂದ್ಯವನ್ನು ಡೇ ಅಂಡ್ ನೈಟ್ ಟೆಸ್ಟ್ ಆಡಿಸಲು ಬಿಸಿಸಿಐ ಮನಸ್ಸು ಮಾಡಿದೆ ಅನ್ನೋ ಮಾಹಿತಿ ಇದ್ದು ಈ ಬಗ್ಗೆ ಅಧಿಕೃತ ಮಾಹಿತಿ ಇನ್ನು ಹೊರಬಿದ್ದಿಲ್ಲ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top