ವಿಶಾಖಪಟ್ಟಣ ದುರಂತ ಯುವಿ,ಕೊಹ್ಲಿ ಸಂತಾಪ!

ವಿಶಾಖಪಟ್ಟಣದಲ್ಲಿ ಅನಿಲ ಸೋರಿಕೆಯಿಂದಾಗಿ ದೊಡ್ಡ ಅವಘಢ ನಡೆದಿದ್ದು ಕ್ಷಣ ಕ್ಣಣಕ್ಕೂ ಸಾವಿನ ಸಂಖ್ಯೆ ಹೆಚ್ಚಾಗುತ್ತಲೆ ಇದೆ, ವಿಶಾಖಪಟ್ಟಣದ ಈ ದುರಂತ ಮೂವತ್ತು ವರ್ಷದ ಭೂಪಾಲ್ ಅನಿಲ ದುರಂತವನ್ನು ನೆನಪಿಸುತ್ತಿದ್ದು, ಈಗಾಗಲೇ ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ, ಈ ದುರಂತದಿಂದ 30 ಮಂದಿ ಸ್ಥಿತಿ ಗಂಭೀರವಾಗಿದ್ದು,3000 ಮಂದಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ವೇಳೆ ಆಂಧ್ರ ಸರ್ಕಾರ ಸೂಕ್ತ ಪರಿಹಾರ ಕ್ರಮಗಳನ್ನು ಸಹ ತೆಗೆದುಕೊಂಡಿದ್ದು, ಈ ಘಟನೆ ಕುರಿತು ದೇಶದ ಹಲವು ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.ಈ ವೇಳೆ ಯುವಿ ,ವಿರಾಟ್,ಸಾನಿಯಾ ಮಿರ್ಜಾ ಕೂಡ ಟ್ವೀಟ್ ಮಾಡುವ‌ ಮೂಲಕ ಸಂತಾಪ ವ್ಯಕ್ತ ಪಡಿಸಿದ್ದಾರೆ.

‘ವಿಶಾಖಪಟ್ಟಣ ದುರಂತದಲ್ಲಿ ತಮ್ಮ ಆತ್ಮೀಯರನ್ನು ಕಳೆದುಕೊಂಡವರ ಕುಟುಂಬಕ್ಕೆ ಸಂತಾಪ ಮತ್ತು ಈ ಘಟನೆಯಿಂದ ಸಮಸ್ಯೆ ಎದುರಿಸಿ ಆಸ್ಪತ್ರೆಗೆ ದಾಖಲಾಗಿರುವವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ವಿಶಾಖಪಟ್ಟಣ ಗ್ಯಾಸ್ ಲೀಕ್ ನಿಜವಾಗಿಯೂ ದುರದೃಷ್ಟಕರ, ಹಲವು ಜೀವಿಗಳಿಗೆ ಸಮಸ್ಯೆಯಾಗಿದೆ,ಜೀವ ಕಳೆದುಕೊಂಡ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ,ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಯುವಿ‌ ಟ್ವೀಟ್ ಮಾಡಿದ್ದಾರೆ.

ಇನ್ನು ಈ ಅನಿಲ ದುರಂತ ದುರದೃಷ್ಟಕರ ಈ ಘಟನೆಯಲ್ಲಿ ಮಡಿದವರು ಮತ್ತು ಚಿಕಿತ್ಸೆ ಪಡೆಯುತ್ತಿರುವ ಕುಟುಂಬಗಳಿಗೆ ಒಳಿತಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಾನಿಯಾ ಮಿರ್ಜಾ ಟ್ವೀಟ್ ಮಾಡಿದ್ದಾರೆ..

ಇದೇ ವೇಳೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿ, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ 1 ಕೋಟಿ ಪರಿಹಾರ ಧನ ಘೋಷಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top