ವಿರಾಟ್ ನಾಯಕತ್ವದ ಬಗ್ಗೆ ಮತ್ತೆ ಮಾತನಾಡಿದ ವೀರೂ

ಟೀಂ ಇಂಡಿಯಾದಲ್ಲಿ ಪ್ರತಿ ಮ್ಯಾಚ್ ಆಗುತ್ತಿದ್ದಂತೆ,ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಅಪಸ್ವರ ಏಳುತ್ತಲೇ ಇರುತ್ತದೆ.ಒಂದು ಕಡೆ ವಿರಾಟ್ ಕೊಹ್ಲಿ ಬದಲಿಗೆ ರೋಹಿತ್ ಶರ್ಮಾ ಅವರಿಗೆ ನಾಯಕತ್ವ ನೀಡಬೇಕು ಅನ್ನೋ ಮಾತುಗಳು ಕೇಳಿ ಬರ್ತಾ ಇದ್ರೆ.ಇತ್ತ ಕೊಹ್ಲಿ ನಾಯಕತ್ವವನ್ನು ಸಮರ್ಥಿಸಿಕೊಂಡಿ ಕ್ರಿಕೆಟ್ ದಿಗ್ಗಜರು ಕೊಹ್ಲಿ ಪರ ನಿಲ್ಲುತ್ತಿದ್ದಾರೆ. ಇದೀಗ ವಿರಾಟ್ ಕೊಹ್ಲಿ ನಾಯಕತ್ವದ ವಿಚಾರ ಮಾಜಿ ವೇಗದ ಬೌಲರ್ ಮಾತನಾಡಿದ್ದು,ವಿರಾಟ್ ಕೊಹ್ಲಿ ಅವರನ್ನು ನಾಯಕತ್ವದಿಂದ ಬದಲಾವಣೆ ಮಾಡಿದ್ರೆ ಅದು ಮೂರ್ಖ ನಿರ್ಧಾರ ಅಂತ ಹೇಳಿದ್ದಾರೆ. ಹೌದು ಪಾಕಿಸ್ತಾನದ ಮಾಜಿ ವೇಗದ ಬೌಲರ್ ರಾವಲ್ಪಿಂಡಿ ಎಕ್ಸ್ ಪ್ರೆಸ್ ಶೋಯೆಬ್ ಅಖ್ತರ್ ವಿರಾಟ್ ಕೊಹ್ಲಿ ಪರ ಮಾತನಾಡಿದ್ದು. ಟಿ20 ಮಾದರಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವವನ್ನು ಬದಲಾಯಿಸಿದ್ರೆ ಅದು ಮೂರ್ಖ ನಿರ್ಧಾರ,ವಿರಾಟ್ ಯುವ ಆಟಗಾರರು ತಂಡದಲ್ಲಿ ಸ್ಥಾನ ಭದ್ರ ಪಡಿಸುವ ನಿಟ್ಟಿನಲ್ಲಿ ಹೆಚ್ಚು ಅವಕಾಶಗಳನ್ನು ನೀಡಿತ್ತಾರೆ ಎಂದು ವಿರಾಟ್ ನಾಯಕತ್ವದ ಪರವಾಗಿ ಶೋಯೆಬ್ ಅಖ್ತರ್ ಮಾತನಾಡಿದ್ದಾರೆ.

ವಿರಾಟ್ ಪರ ಅಖ್ತರ್ ಮಾತನಾಡಿದ್ರೆ , ಇತ್ತ ಸೆಹ್ವಾಗ್ ತಂಡದಲ್ಲಿ ಆಟಗಾರರನ್ನು ಹೊರಗಿಡುವ ನಿಯಮ ನಾಯಕನಿಗೂ ಅನ್ವಯಾಗಬೇಕು ಅನ್ನೋ‌ ಮೂಲಕ ವಿರಾಟ್ ಕೊಹ್ಲಿ‌ ನಾಯಕತ್ವದ ವಿಚಾರವಾಗಿ ಮಾತನಾಡಿದ್ದಾರೆ. ವಿರಾಟ್ ನಾಯನಾಗುವ ಮುಂಚೆ ತಂಡ ಇಂಗ್ಲೆಂಡ್ ಟೂರ್ ಹೋದ ವೇಳೆ ವಿರಾಟ್ ವಿಫಲವಾದಾಗ ಧೋನಿ ಬೆಂಬಲದಿಂದ ಸ್ಥಾನ ಪಡೆದು ಈಗ ಶ್ರೇಷ್ಠ ಕ್ರಿಕೆಟರ್ ಆಗಿದ್ದಾರೆ. ಆದ್ರೆ ಕೊಹ್ಲಿಯಿಂದ ಈ ರೀತಿಯ ನಾಯಕತ್ವವನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಅಂತ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ಹಾಗಾದ್ರೆ ನಿಮ್ಮ ಪ್ರಕಾರ ಸೆಹ್ವಾಗ್ ಮತ್ತು ಶೋಯೆಬ್ ಅಖ್ತರ್ ಹೇಳಿಕೆಯಲ್ಲಿ ನೀವೂ ಯಾರ ಹೇಳಿಕೆ ಪರ ನಿಲ್ತೀರಾ ಕಾಮೆಂಟ್ ಮಾಡಿ ತಿಳಿಸಿ…

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top