ವಿರಾಟ್, ಧೋನಿಗೆ ಅವಾರ್ಡ್ ಆಕ್ರೋಶಗೊಂಡ ಪಾಕಿಸ್ತಾನದ ಶೋಯೆಬ್ ಅಖ್ತರ್

ಐಸಿಸಿ ಇತ್ತಿಚೆಗೆ ದಶಕದ ಕ್ರಿಕೆಟ್ ತಂಡದ ಆಟಗಾರರನ್ನು ಹೆಸರಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸವನ್ನು ನೀಡಿತ್ತು, ಇದೀಗ ದಶಕದ ಆಟಗಾರರನ್ನು ಪಟ್ಟಿಮಾಡಿದ್ದು ಮೂರು ಮಾದರಿಯಲ್ಲೂ ಆಟಗಾರರಿಗೆ ಈ ಅವಾರ್ಡ್ ಅನ್ನು ನೀಡಿದೆ, ಈ ಪ್ರಶಸ್ತಿಯಲ್ಲೂ ಕೂಡ ಟೀಂ ಇಂಡಿಯಾದ ಆಟಗಾರರ ಪಾಲು ಹೆಚ್ಚಾಗಿದೆ. ಹೌದು ಐಸಿಸಿ 2020 ಮುಗಿಯಲು ಇನ್ನು ಕೆಲವು ದಿನಗಳು ಇರುವಾಗಲೇ ಇದೀಗ ದಶಕದ ಮೂರು ಮಾದರಿಯಲ್ಲೂ ಆಟಗಾರನ್ನು ಗುರುತಿಸಿ ಗೌರವನೀಡಿದೆ. ಈ ಪಟ್ಟಿಯಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಹೆಸರು ಇರೋದು ಕ್ರಿಕೆಟ್ ಅಭಿಮಾನಿಗಳಿಗೆ ಸಂತಸ ಉಂಟುಮಾಡಿದೆ.

ಏಕದಿನ ಕ್ರಿಕೆಟ್ ವಿಭಾಗದಲ್ಲಿ ದಶಕದ ಏಕದಿನ ಕ್ರಿಕೆಟಿಗನಾಗಿ ವಿರಾಟ್ ಕೊಹ್ಲಿ ಆಯ್ಕೆಯಾಗಿದ್ದಾರೆ. ಕ್ರಿಕೆಟ್ ಜಗತ್ತಿನಲ್ಲಿ ರನ್ ಮಷಿನ್ ಅಂತಾನೇ ಕರೆಸಿಕೊಳ್ಳುವ ವಿರಾಟ್ ಕೊಹ್ಲಿ ದಶಕವೊಂದರಲ್ಲಿಯೇ ಹತ್ತು ಸಾವಿರ ರನ್ ಕಲೆಹಾಕುವ ಮೂಲಕ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಸದ್ಯ ಏಕದಿನ ಕ್ರಿಕೆಟ್‍ನಲ್ಲಿ ನಂಬರ್ 1 ರ್ಯಾಕಿಂಗ್‍ನಲ್ಲಿ ಇದ್ದಾರೆ. ಇನ್ನು ಐಸಿಸಿ ನೀಡಿರೋ ದಶಕದ ಅವಾರ್ಡ್‍ನಲ್ಲಿ ವಿಶ್ವ ಕ್ರಿಕೆಟ್‍ನ ಶ್ರೇಷ್ಠ ನಾಯಕ ಮಹೇಂದ್ರ ಸಿಂಗ್ ಧೋನಿಗೂ ಕೂಡ ಲಭಿಸಿದ್ದು ಐಸಿಸಿ ದಶಕದ ಕ್ರೀಡಾಸ್ಫೂರ್ತಿ ಪ್ರಶಸ್ತಿಗೆ ಧೋನಿ ಭಾಜನರಾಗಿದ್ದಾರೆ. 2011ರಲ್ಲಿ ಟ್ರೆಂಟ್ ಬ್ರಿಡ್ಜ್ ಟೆಸ್ಟ್ ಪಂದ್ಯದಲ್ಲಿ ಇಯಾನ್ ಬೆಲ್ ಅವರ ವಿವಾದಾತ್ಮಕ ರನೌಟ್‍ಗೆ ಬಲಿಯಾಗಿದ್ದರು, ಆಗ ಮಧ್ಯ ಪ್ರವೇಶಿಸಿದ್ದ ಧೋನಿ ಇಯಾನ್ ಬೆಲ್‍ಗೆ ಮತ್ತೊಂದು ಅವಕಾಶ ನೀಡಿವ ಮೂಲಕ ಕ್ರೀಡಾ ಸ್ಫೊರ್ತಿ ಮೆರೆದಿದ್ರು, ಹೀಗಾಗಿ ಐಸಿಸಿ ಧೋನಿಯವರಿಗೆ ದಶಕದ ಕ್ರೀಡಾಸ್ಪೋರ್ತಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇನ್ನು ಟೆಸ್ಟ್ ವಿಭಾಗದಲ್ಲಿ ಐಸಿಸಿ ದಶಕದ ಟೆಸ್ಟ್ ಆಟಗಾರನನ್ನಾಗಿ ಆಸ್ಟ್ರೇಲಿಯಾದ ಪ್ರಮುಖ ಬ್ಯಾಟ್ಸಮನ್ ಸ್ಟೀವ್ ಸ್ಮಿತ್‍ಗೆ ನೀಡಿ ಗೌರವಿಸಿದ್ರೆ, ಟಿ 20 ವಿಭಾಗದಲ್ಲಿ ಆಫ್ಘಾನಿಸ್ತಾನದ ಪ್ರಮುಖ ಬೌಲರ್ ಟಿ 20ಯ ನಂಬರ್ ಒನ್ ಬೌಲರ್ ಆದ ರಶೀದ್ ಖಾನ್‍ಗೆ ದಶಕದ ಟಿ 20 ಬೌಲರ್ ಆಗಿ ಆಯ್ಕೆ ಮಾಡಿ ಗೌರವಿಸಿದೆ.

ಇನ್ನು ಐಸಿಸಿ ಘೋಷಿಸಿರೋ ದಶಕದ ಪ್ರಶಸ್ತಿಗೆ ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್ ಕಿಡಿಕಾರಿದ್ದಾರೆ. ದಶಕದ ತಂಡವನ್ನು ಪ್ರಕಟಿಸಿದ ವೇಳೆ ತಂಡದಲ್ಲಿ ಯಾವೊಬ್ಬ ಪಾಕಿಸ್ತಾನದ ಆಟಗಾರನ ಹೆಸರು ಇಲ್ಲದೇ ಇದ್ದುದರಿಂದ ಅಖ್ತರ್ ಕಿಡಿಕಾರಿದ್ರು, ಅಲ್ಲದೇ ಇದು ಐಸಿಸಿ ಟೀಂ ಅಲ್ಲ ಇದು ಐಪಿಎಲ್ ಟೀಂ ಎಂದು ಹೇಳಿದ್ರು, ಇದೀಗ ಐಸಿಸಿ ಪ್ರಕಟಿಸಿರೋ ದಶಕದ ಆಟಗಾರರು ಪಟ್ಟಿಯಲ್ಲೂ ಪಾಕಿಸ್ತಾನದ ಆಟಗಾರರ ಹೆಸರು ಇಲ್ಲದೇ ಇರುವುದರಿಂದ ಐಸಿಸಿ ವಿರುದ್ಧ ಕಿಡಿಕಾರಿದ್ದು, ಐಸಿಸಿ ಕೇವಲ ವ್ಯವಹಾರಿಕವಾಗಿ ಮಾತ್ರ ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ ಎಂದು ಟೀಕಿಸಿದ್ದಾರೆ.

ನಿಮ್ಮ ಪ್ರಕಾರ ಈ ನಾಲ್ಕು ವಿಭಾಗದಲ್ಲಿ ಯಾರಿಗೆ ದಶಕದ ಪ್ರಶಸ್ತಿ ನೀಡಬೇಕಿತ್ತು, ಈ ನಾಲ್ವರು ಉತ್ತಮ ಆಯ್ಕೆ ಅಂತ ನಿಮಗೆ ಅನಿಸುತ್ತಿದೆಯಾ ನೀವ್ ಏನ್ ಹೇಳ್ತೀರಾ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top