ವಿರಾಟ್ ಕೊಹ್ಲಿಯನ್ನ RCB ಕ್ಯಾಪ್ಟನ್ ಶಿಪ್‍ನಿಂದ ಕಿತ್ತಾಕಿ

ಐಪಿಎಲ್‍ನಲ್ಲಿ ಚೊಚ್ಚಲ ಕಪ್ ಗೆಲ್ಲುವ ವಿಶ್ವಾಸದಲ್ಲಿದ್ದ ಆರ್‍ಸಿಬಿ ನಿನ್ನೆ ಹೈದರಬಾದ್ ವಿರುದ್ಧದ ಪಂದ್ಯದಲ್ಲಿ ಸೋಲುವ ಮೂಲಕ ಐಪಿಎಲ್ ಟೂರ್ನಿಯಿಂದ ಆರ್‍ಸಿಬಿ ಹೊರ ನಡೆದಿದೆ. ಇದೀಗ ಐಪಿಎಲ್ ಕಪ್ ಗೆಲ್ಲುವಲ್ಲಿ ಯಶಸ್ವಿಯಾಗದ ಆರ್‍ಸಿಬಿ ವಿರುದ್ಧ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದು, ಇತ್ತ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಕೂಡ ಹಲವರು ಅಪಸ್ವರವನ್ನು ಎತ್ತುತ್ತಿದ್ದಾರೆ. ಕೊಹ್ಲಿ ಆರ್‍ಸಿಬಿ ಪರ ಉತ್ತಮವಾದ ಕ್ಯಾಪ್ಟನ್ಸಿ ಮಾಡುವಲ್ಲಿ ವಿಫಲರಾಗಿದ್ದಾರೆ ಅನ್ನೋ ಮಾತುಗಳನ್ನು ಹೇಳಿದ್ದಾರೆ.\

ಈಗಾಗಲೇ ಸೋಶಿಯಲ್ ಮೀಡಿಯಾಗಲ್ಲಿ ಇದರ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದ್ದು, ಇದರ ಬೆನ್ನಲ್ಲೇ ಇದೀಗ ಟೀಂ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಕೂಡ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಮಾತುಗಳನ್ನು ಆಡಿದ್ದಾರೆ. ಕೊಹ್ಲಿಯನ್ನು ಆರ್‍ಸಿಬಿ ನಾಯಕತ್ವದಿಂದ ಕೆಳಗಿಸಲು ಗೌತಮ್ ಗಂಭೀರ್ ಹೇಳಿದ್ದು. ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹೊರ ಬಿದ್ದ ನಂತರ ಕೊಹ್ಲಿಯನ್ನು ಕ್ಯಾಪ್ಟನ್ಸಿಯಿಂದ ಕೆಳಗಿಸಿ ಎಂದು ಗಂಭೀರ್ ಹೇಳಿದ್ದಾರೆ.

?ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಗಂಬೀರ್ 8 ವರ್ಷಗಳು ಬೇಕಾಗುವಷ್ಟ ಆಗಿದೆ. ಆರ್ ಅಶ್ವಿನ್‍ಗೆ ಪಂಜಾಬ್ 2 ವರ್ಷ ಕ್ಯಾಪ್ಟನ್ ಮಾಡಿದ್ರು ನಂತರ ಉತ್ತಮ ಪ್ರದರ್ಶನ ತೋರಲಿಲ್ಲ ಅಂತ ಅವರನ್ನು ಕಿತ್ತು ಹಾಕಿದ್ರು ಎಂದು ಹೇಳಿದ್ದು, ನಾವು ಧೋನಿ,ರೋಹಿತ್,ವಿರಾಟ್ ಬಗ್ಗೆ ಮಾತನಾಡುತ್ತೇವೆ, ಆದ್ರೆ ಧೋನಿ ಮತ್ತು ರೋಹಿತ್ ಬಗ್ಗೆ ಯಶಸ್ವಿಯಾಗಿ ಮಾತನಾಡುತ್ತೇವೆ ಆದರೆ ಕೊಹ್ಲಿ ಬಗ್ಗೆ ನಾವು ಮಾತನಾಡುವಾಗ ಸೋಲುಗಳನ್ನು ನೆನಪಿಸಿಕೊಳ್ಳುತ್ತೇವೆ. 8 ವರ್ಷ ಸಾಕಷ್ಟು ಆಗಿದೆ ಆರ್‍ಸಿಬಿ ಇದೀಗ ವಿರಾಟ್‍ನನ್ನು ಕೆಳಗಿಳಿಸ ಬೇಕು, ನಾನು ರೋಹಿತ್ ಕೂಡ 8 ವರ್ಷಗಳಲ್ಲಿ ಟ್ರೋಫಿ ಗೆಲ್ಲದಿದ್ದರೆ ಅವರನ್ನೂ ನಾಯಕತ್ವದಿಂದ ಕೆಳಗಿಳಿಸಲು ಹೇಳಬೇಕಾಗುತ್ತಿದ್ದು, ಇದೀಗ ವಿರಾಟ್‍ಗೆ ಹೇಳುತ್ತಿದ್ದೇವೆ ಅಂತ ಗಂಭೀರ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಆರ್‍ಸಿಬಿ ನಾಯಕತ್ವದ ಬಗ್ಗೆ ಅಸಮಾಧಾನ ಹೊರಹಾಕಿರೋ ಗೌತಮ್ ಗಂಭೀರ್ ಆರ್‍ಸಿಬಿ ಪ್ರದರ್ಶನದ ಬಗ್ಗೆಯೂ ಟೀಕೆಯನ್ನು ಮಾಡಿದ್ದಾರೆ. ಪ್ಲೇ ಆಫ್ ಹಂತಕ್ಕೆ ಏರಲು ಯೋಗ್ಯವಾಗಿರಲಿಲ್ಲ, ಈ ಆವೃತ್ತಿಯಲ್ಲಿ ಕೊಹ್ಲಿ ಪಡೆಯ ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ, ಈ ಬಾರಿಯ ಐಪಿಎಲ್‍ನಲ್ಲಿ ನೀರಸ ಪ್ರದರ್ಶನ ನೀಡಿರೋದ್ರಿಂದ ಪ್ಲೇ ಆಫ್ ಹಂತಕ್ಕೆ ತಂಡ ಹೋಗೋಕೆ ಯೋಗ್ಯವಾಗಿರಲಿಲ್ಲ ಗೌತಮ್ ಗಂಭೀರ್ ಹೇಳಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಆರ್‍ಸಿಬಿ ಅಭಿಮಾನಿಗಳು ಗೌತಮ್ ಗಂಭೀರ್‍ಗೆ ಸಖತ್ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಕಪ್ ಗೆಲ್ಲಿ ಬಿಡಲಿ, ನಾವ್ ಆರ್‍ಸಿಬಿ ಲಾಯಲ್ ಫ್ಯಾನ್ಸ್, ಆರ್‍ಸಿಬಿ ಕಪ್ ಗೆಲ್ಲೋದಾದ್ರೆ ಅದು ಕೊಹ್ಲಿ ನಾಯಕತ್ವದಲ್ಲಿ ಮಾತ್ರ ಅನ್ನೋ ಮೂಲಕ ಗಂಭೀರ್‍ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಹಾಗಾದ್ರೆ ವಿರಾಟ್ ಕೊಹ್ಲಿಯವರ ಆರ್‍ಸಿಬಿ ಪರ ಕ್ಯಾಪ್ಟನ್ಸಿ ಬಗ್ಗೆ ನಿಮ್ಮ ಅಭಿಪ್ರಾಯವೇನು, ಮುಂದಿನ ಐಪಿಎಲ್‍ನಲ್ಲಿ ವಿರಾಟ್ ನಾಯಕ ಸ್ಥಾನದಿಂದ ಕೆಳಗಿಳಿಯ ಬೇಕಾ ನೀವ್ ಏನ್ ಹೇಳ್ತೀರಾ ಗೌತಮ್ ಗಂಭೀರ್ ಹೇಳಿಕೆ ಬಗ್ಗೆ ನಿಮ್ಮ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top