ವಿರಾಟ್ ಕೊಹ್ಲಿಗೆ ಶಾಕ್ ಕೊಟ್ಟ RCB ಮಾಜಿ ಕೋಚ್

ಐಪಿಎಲ್ 2020 ಮುಕ್ತಾಯ ವಾಗುತ್ತಿದ್ದಂತೆ ಕ್ರಿಕೆಟ್ ದಿಗ್ಗಜರು ತಮ್ಮ ನೆಚ್ಚಿನ ಪ್ಲೇಯಿಂಗ್ ಇಲೆವೆನ್ ತಂಡವನ್ನು ಹೇಳುತ್ತಿದ್ದಾರೆ. ಈಗಾಗಲೇ ವೀರು, ಗಂಭೀರ್ ಸೇರಿದಂತೆ ಅನೇಕರು ತಂಡವನ್ನು ರೆಡಿಮಾಡಿದ್ದು, ಇದೀಗ ಆರ್‍ಸಿಬಿಯ ಮಾಜಿ ಕೋಚ್ ಕೂಡ ಬೆಸ್ಟ್ ಐಪಿಎಲ್ ಪ್ಲೇಯಿಂಗ್ 11 ತಂಡವನ್ನು ರಚಿಸಿದ್ದಾರೆ. ಆದ್ರೆ ಆರ್‍ಸಿಬಿಯ ಮಾಜಿ ಕೋಚ್ ವಿರಾಟ್ ಕೊಹ್ಲಿಗೆ ದೊಡ್ಡ ಶಾಕ್ ನೀಡಿದ್ದಾರೆ. ಹೌದು ಈ ಬಾರಿ ಬೆಸ್ಟ್ ಐಪಿಎಲ್ ಪ್ಲೇಯಿಂಗ್ ಇಲೆವೆನ್ ತಂಡವನ್ನು ರಚಿಸಿರೋದು ಆರ್‍ಸಿಬಿಯ ಮಾಜಿ ಕೋಚ್ ಆಶೀಶ್ ನೆಹ್ರಾ.. ನೆಹ್ರಾ ತಮ್ಮ ಡ್ರೀಮ್ ಇಲೆವೆನ್ ತಂಡದಲ್ಲಿ ವಿರಾಟ್ ಕೊಹ್ಲಿ ಜೊತೆಯಲ್ಲಿ ವಿನ್ನಿಂಗ್ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾಗೂ ಕೂಡ ಸ್ಥಾನವನ್ನು ನೀಡಿಲ್ಲ. ಅಷ್ಟೇ ಅಲ್ಲಾ ದಿಗ್ಗಜರು ಸೂಚಿಸಿರೋ ಟೀಂನಲ್ಲಿ ಧೋನಿ ಕೂಡ ಸ್ಥಾನ ಪಡೆದಿರಲಿಲ್ಲ ಅದರಂತೆ ನೆಹ್ರಾ ಅವರ ಟೀಂನಲ್ಲೂ ಧೋನಿಗೆ ಸ್ಥಾನವಿಲ್ಲವಾಗಿದೆ.

ಹಾಗಾದ್ರೆ ನೆಹ್ರಾ ಟೀಂನಲ್ಲಿ ಯಾರೆಲ್ಲಾ ಸ್ಥಾನ ಪಡೆದುಕೊಂಡಿದ್ದಾರೆ ಅಂತ ನೋಡೋದಾದ್ರೆ, ಆರಂಭಿಕರಾಗಿ ಈ ಬಾರಿಯ ಆರೇಂಜ್ ಕ್ಯಾಪ್ ಪಡೆದುಕೊಂಡಿರೋ ಕೆ ಎಲ್ ರಾಹುಲ್ ಪಡೆದಿದ್ರೆ, ಇವರ ಜೊತೆ ಐಪಿಎಲ್‍ನ ಎರಡನೇ ಅತಿ ಹೆಚ್ಚು ರನ್ ಸಿಡಿಸಿರೋ ಶಿಖರ್ ಧವನ್ ಸ್ಥಾನ ಪಡೆದುಕೊಂಡಿದ್ದಾರೆ. ಮೂರನೇ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್‍ಗೆ ಸ್ಥಾನ ನೀಡಿದ್ದು, ವಿರಾಟ್ ಕೊಹ್ಲಿ ರನ್ ಗಳಿಸಿಲ್ಲ ಅಂತ ಅಲ್ಲ ಬದಲಾಗಿ ತಂಡಕ್ಕೆ ಪರಿಣಾಮಕಾರಿಯಾಗಿ ರನ್ ಕೊಡುಗೆಯನ್ನು ಸೂರ್ಯ ಕುಮಾರ್ ನೀಡಿದ್ದಾರೆ . ಹಾಗಾಗಿ ವಿರಾಟ್‍ಗೆ ಸ್ಥಾನವಿಲ್ಲ ಅಂತ ಹೇಳಿದ್ದಾರೆ. ಇನ್ನು ಎಬಿಡಿಗೆ ಸ್ಥಾನ ನೀಡಿದ್ದು, ಎಬಿಡಿ ಇಲ್ಲ ಅಂತ ಟೀಂ ಸಂಪೂರ್ಣ ಆಗೋಲ್ಲ ಅಂತ ಹೇಳಿದ್ದಾರೆ. ಇನ್ನು ಮಿಡಲ್ ಆರ್ಡರ್‍ನಲ್ಲಿ ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯರಿಗೆ ಸ್ಥಾನ ನೀಡಿದ್ದು, ಬೌಲಿಂಗ್ ವಿಭಾಗದಲ್ಲಿ ಜೋಫ್ರ ಆರ್ಚರ್ ಮತ್ತು ರಶೀದ್ ಖಾನ್‍ಗೆ ಸ್ಥಾನ ನೀಡಿದ್ದು, ಇವರಿಬ್ಬರು ಬೌಲಿಂಗ್ ಜೊತೆಯಲ್ಲಿ ಬ್ಯಾಟಿಂಗ್‍ನಲ್ಲೂ ಸಿಡಿಯಬಲ್ಲ ಸಾಮಥ್ರ್ಯ ಹೊಂದಿದ್ದಾರೆ ಅಂತ ಹೇಳಿದ್ದಾರೆ. ಇನ್ನು ಇವರ ಜೊತೆಯಲ್ಲಿ ಚಹಲ್ ಮತ್ತು ಬುಮ್ರಾಗೂ ಸ್ಥಾನ ನೀಡಿದ್ದು, ಶಮಿ ಮತ್ತು ಅಶ್ವಿನ್ ಇವರಿಬ್ಬರಲ್ಲಿ ಒಬ್ಬರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.

ನಿಮ್ಮ ಪ್ರಕಾರ ಆಶೀಶ್ ನೆಹ್ರಾ ಅವ್ರ ಡ್ರೀಮ್ 11 ಬಗ್ಗೆ ನಿಮ್ಮ ಕಾಮೆಂಟ್ ಏನು..ನೆಹ್ರಾ ಅವರ ಈ ಟೀಂ ಅನ್ನು ಯಾವ ಟೀಂ ಹೆಸರಿನಲ್ಲಿ ಸೂಚಿಸುತ್ತೀರಾ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top