ವಿರಾಟ್ ಅನುಷ್ಕಾಗೆ ಹೆಣ್ಣುಮಗು ಈ ಸಲ ಕಪ್ ನಮ್ದೆ

ಟೀಂ ಇಂಡಿಯಾ ನಾಯಕ ವಿರಾಟ್‍ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿಗೆ ಹಣ್ಣು ಮಗು ಜನಿಸಿದೆ. ಇವತ್ತು ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅನುಷ್ಕಾ ಶರ್ಮಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಇಂದು ಮಧ್ಯಾಹ್ನ ಅನುಷ್ಕಾ ಶರ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ಸಂತಸದ ಸುದ್ದಿಯನ್ನು ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ ಶೇರ್ ಮಾಡಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ.

ಸದ್ಯ ವಿರುಷ್ಕಾ ಜೋಡಿಗೆ ಹೆಣ್ಣು ಮಗು ಆಗುತ್ತಿದ್ದಂತೆ ಎಲ್ಲರೂ ವಿಶ್ ಮಾಡುತ್ತಿದ್ರೆ, ಇತ್ತ ಇಂಡಿಯನ್ ವಿಮೆನ್ಸ್ ಟೀಂಗೆ ಒಬ್ಬ ಆಟಗಾರ್ತಿ ಜನನ ಆಯ್ತು ಅಂತ ಹೇಳ್ತಾ ಇದ್ರೆ, ಇತ್ತ ಅನುಷ್ಕಾ ಫ್ಯಾನ್ಸ್ ಬಾಲಿವುಡ್‍ಗೆ ಮತ್ತೊಬ್ಬ ನಟಿಯ ಬರೋದು ಪಕ್ಕಾ ಅಂತ ಹೇಳ್ತಿದ್ದಾರೆ. ಇನ್ನು ಇದೆಲ್ಲಕ್ಕಿಂತ ವಿಶೇಷ ಅಂದ್ರೆ ವಿರಾಟ್ ಕೊಹ್ಲಿ ಹೆಣ್ಣು ಮಗು ಆಗುತ್ತಿದ್ದಂತೆ ಐಪಿಎಲ್ ಪ್ರಿಯರು ಅದರಲ್ಲೂ ಆರ್‍ಸಿಬಿ ಅಭಿಮಾನಿಗಳು ಹೊಸ ಲೆಕ್ಕಾಚಾರ ಹಾಕೋದಕ್ಕೆ ಶುರುಮಾಡಿದ್ದಾರೆ.

ಹೌದು ಸದ್ಯ ಐಪಿಎಲ್‍ನಲ್ಲಿ ಆರ್‍ಸಿಬಿ ಇದುವರೆಗೂ ಒಂದು ಕಪ್ ಗೆದ್ದಿಲ್ಲ, ಪ್ರತಿಬಾರಿ ಐಪಿಎಲ್ ಶುರುವಾಗುವ ವೇಳೆ ಈ ಸಲ ಕಪ್ ನಮ್ದೆ ಅನ್ನೋ ಮೂಲಕ ಐಪಿಎಲ್ ಶುರುಮಾಡಿ ಕೊನೆಯಲ್ಲಿ ನಿರಾಸೆ ಅನುಭವಿಸುತ್ತಿದ್ದೇವೆ, ಆದ್ರೆ ಇದೀಗ ವಿರಾಟ್ ಕೊಹ್ಲಿಗೆ ಹೆಣ್ಣು ಮಗು ಆಗುತ್ತಿದ್ದಂತೆ ಹಳೇಯ ಲೆಕ್ಕಾಚಾರಗಳನ್ನು ಮಾಡುವ ಮೂಲಕ ಈ ಸಲ ಆರ್‍ಸಿಬಿ ಕಪ್ ಗೆಲ್ಲೋದು ಪಕ್ಕಾ ಅನ್ನೋದಕ್ಕೆ ಶುರುಮಾಡಿದ್ದಾರೆ.

ಸದ್ಯ ಈ ವಿಷಯ ಸೋಶಿಯಲ್ ಮಿಡಿಯಾದಲ್ಲಿ ಟಾಕ್ ಆಗಿದೆ ಹೌದು 2014ರಲ್ಲಿ ಗೌತಮ್ ಗಂಭೀರ್‍ಗೆ ಹಣ್ಣು ಮಗುವಾಗಿದ್ದ ವೇಳೆ ಗೌತಮ್ ಗಂಭೀರ್ ಕೆಕೆಆರ್ ತಂಡದ ನಾಯಕರಾಗಿ ಆಡುತ್ತಿದ್ದರು ಈ ವೇಳೆ 2014ರ ಐಪಿಎಲ್‍ನಲ್ಲಿ ಗೌತಮ್ ಗಂಭೀರ್ ಸಾರಥ್ಯದ ಕೆಕೆಆರ್ ತಂಡ ಚಾಂಪಿಯನ್ ಆಗಿತ್ತು, ಇನ್ನು ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರಿಗೆ ಡಿಸೆಂಬರ್ 2018ರಲ್ಲಿ ಹೆಣ್ಣುಮಗುವಾಗಿದ್ದು, 2019ರಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್‍ನಲ್ಲಿ ಚಾಂಪಿಯನ್ಸ್ ಆಗಿತ್ತು.

ಈ ಲೆಕ್ಕಾಚಾರ ನೋಡಿದ ಆರ್‍ಸಿಬಿ ಅಭಿಮಾನಿಗಳು ಇದೀಗ ವಿರಾಟ್ ಕೊಹ್ಲಿಗೂ ಹೆಣ್ಣು ಮಗುವಾಗಿದ್ದು, ಈ ಬಾರೀ ಈ ಅದೃಷ್ಟ ದೇವತೆಯಿಂದ ಆರ್‍ಸಿಬಿ ಕಪ್ ಗೆಲ್ಲೋದು ಪಕ್ಕಾ, ವಿರಾಟ್ ಕೊಹ್ಲಿ ಐಪಿಎಲ್ ಕಪ್ ಎತ್ತಿಹಿಡಿಯೋದು ಫಿಕ್ಸ್ ಅಂತ ಹೇಳುವ ಮೂಲಕ ಸೋಶಿಯಲ್ ಮಿಡಿಯಾದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ಅದೇನೇ ಇದ್ರು ಸಹ ಪ್ರತಿ ಭಾರಿ ಐಪಿಎಲ್ ಶುರುವಾಗುವ ಮುಂಚೆ ಈ ರೀತಿಯ ಲೆಕ್ಕಾಚಾರಗಳನ್ನು ಹಾಕೋದು ಕಾಮನ್. ಸದ್ಯ ವಿರುಷ್ಕಾ ಜೋಡಿ ತಮ್ಮ ಮಗುವಿನ ಆಗಮನದ ಖುಷಿಯಲ್ಲಿದ್ದು, ಇತ್ತ ಅಭಿಮಾನಿಗಳು ಸಹ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top