
ಕ್ರಿಕೆಟ್ನ ರನ್ ಮಷಿನ್ ವಿರಾಟ್ ಕೊಹ್ಲಿ ಫಿಲ್ಡ್ಗೆ ಇಳಿದ್ರು ಅಂದ್ರೆ ಒಂದಿಲ್ಲೊಂದು ದಾಖಲೆಗಳನ್ನ ಸೃಷ್ಟಿ ಮಾಡುತ್ತಲೆ ಇರುತ್ತಾರೆ. ಈಗಾಗಲೇ ಅತೀ ವೇಗವಾಗಿ ಕ್ರಿಕೆಟ್ ಜಗತ್ತಿನಲ್ಲಿ ರನ್ ಮತ್ತು ಶತಕಗಳನ್ನು ಸಿಡಿಸೋ ಮೂಲಕ ದಾಖಲೆ ಮೇಲೆ ದಾಖಲೆ ಕ್ರಿಯೇಟ್ ಮಾಡ್ತಾ ಇದ್ದು, ಐಪಿಎಲ್ನಲ್ಲೂ ಸಹ ಒಂದಿಲ್ಲೊಂದು ದಾಖಲೆಗಳನ್ನು ತಮ್ಮ ರೆಕಾರ್ಡ್ ಬುಕ್ನಲ್ಲೂ ದಾಖಲಿಸಿಕೊಂಡಿದ್ದಾರೆ.
ಈಗಾಗಲೇ ಟಿ20 ಪಂದ್ಯದಲ್ಲಿ 9000 ರನ್ ಬಾರಿಸಿರೋ ಮೊದಲ ಆಟಗಾರರ ಅನ್ನೋ ಹೆಗ್ಗಳಿಕೆ ಪಾತ್ರವಾಗಿದ್ರೆ, ಇತ್ತ ಐಪಿಎಲ್ ಶುರುವಿನಿಂದ ಒಂದೇ ಟೀಂನಲ್ಲಿ ಆಡಿರೋ ಏಕೈಕ ಆಟಗಾರರ ಅನ್ನೋ ದಾಖಲೆನೂ ಕೂಡ ಇವರ ಹೆಸರಿನಲ್ಲಿ ಇದೆ. ಇದೀಗ ವಿರಾಟ್ ಕೊಹ್ಲಿ ಶಾರ್ಜಾದಲ್ಲಿ ನಡೆಯಲಿರೋ ಪಂಜಾಬ್ ವಿರುದ್ಧ ಪಂದ್ಯದಲ್ಲಿ ಆಡುವ ಮೂಲಕ ಲೀಗ್ ಕ್ರಿಕೆಟ್ನಲ್ಲಿ 200 ಪಂದ್ಯಗಳನ್ನು ಆಡಲಿರೋ ಆರ್ಸಿಬಿ ಆಟಗಾರರ ಅನ್ನೋ ಹೊಸ ಮೈಲಿಗಲ್ಲೊಂದನ್ನು ವಿರಾಟ್ ಸಾಧಿಸಲಿದ್ದಾರೆ.
ವಿರಾಟ್ ಕೊಹ್ಲಿ ಆರ್ಸಿಬಿ ಪರವಾಗಿ ಐಪಿಎಲ್ನಲ್ಲಿ ಅತಿಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರನಾಗಿದ್ದಾರೆ. ವಿರಾಟ್ ಐಪಿಎಲ್ನಲ್ಲಿ ಆರ್ಸಿಬಿ ಪರವಾಗಿ 184 ಪಂದ್ಯಗಳನ್ನು ಆಡಿದ್ದು, ಇನ್ನು ಚಾಂಪಿಯನ್ಸ್ ಲೀಗ್ನಲಿ ಆರ್ಸಿಬಿ ಪರ 15 ಪಂದ್ಯಗಳನ್ನು ಆಡಿದ್ದಾರೆ. ಇಂದಿನ ಪಂದ್ಯದ ಮೂಲಕ ವಿರಾಟ್ ಕೊಹ್ಲಿ ಆರ್ಸಿಬಿ ಪರ 200 ಪಂದ್ಯಗಳನ್ನು ಆಡಿದ ಆಟಗಾರ ಆಗಲಿದ್ದಾರೆ. ಇನ್ನು ಐಪಿಎಲ್ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರೊ ಆಟಗಾರ ವಿರಾಟ್ ಕೊಹ್ಲಿ ಆಗಿದ್ದು ಪ್ರತಿ ಐಪಿಎಲ್ನಲ್ಲಿ 17 ಕೋಟಿ ಮೊತ್ತವನ್ನು ಪಡೆಯುವ ಮೂಲಕ ಅತಿ ದುಬಾರಿ ಆಟಗಾರ ಆಗಿದ್ರೆ, ಐಪಿಎಲ್ ಒಂದು ಸೀಸನ್ನಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ದಾಖಲೆ ಕೂಡ ವಿರಾಟ್ ಕೊಹ್ಲಿ ಹೆಸರಲ್ಲಿದೆ. 2018ರ ಐಪಿಎಲ್ ಟೂರ್ನಿಯಲ್ಲಿ ವಿರಾಟ್ 973ರನ್ಗಳನ್ನು ಸಿಡಿಸುವ ಮೂಲಕ ಅತಿ ಹೆಚ್ಚು ರನ್ ಸಿಡಿಸಿದ ಆಟಗಾರರ ಆಗಿದ್ದು, ಅದರ ಜೊತೆಯಲ್ಲಿ 4 ಶತಕ ಮತ್ತು 7 ಅರ್ಧ ಶತಕ ಸಿಡಿಸಿದ ಮೊದಲ ಆಟಗಾರ ಅನ್ನೋ ದಾಖಲೆಯನ್ನು ತಮ್ಮ ಅಕೌಂಟ್ನಲ್ಲಿ ಇಟ್ಟುಕೊಂಡಿದ್ದಾರೆ.
ಅಷ್ಟೇ ಅಲ್ಲದೇ ಅತಿ ಹೆಚ್ಚು ಜೊತೆಯಾಟದ ಮೊದಲ ಎರಡು ಸ್ಥಾನದಲ್ಲಿ ಎಬಿಡಿ ಮತ್ತು ಗೇಲ್ ಜೊತೆ ಶೇರ್ ಮಾಡಿಕೊಂಡಿರೋ ದಾಖಲೆ ಕೂಡ ವಿರಾಟ್ ಹೆಸರಿನಲ್ಲಿದ್ದು, ಆಮೂಲಕ ಕಿಂಗ್ ಕೊಹ್ಲಿ ಎಲ್ಲಾ ರೆಕಾರ್ಡ್ಗಳು ನನ್ನ ಬಳಿಯೇ ಇದೆ ಅಂತ ಹೇಳ್ತಿದ್ದಾರೆ.
ಹಾಗಾದ್ರೆ ವಿರಾಟ್ ಕೊಹ್ಲಿ ಇನ್ನು ಯಾವೆಲ್ಲಾ ದಾಖಲೆಗಳನ್ನು ಮಾಡಬಹುದು ಕಾಮೆಂಟ್ ಮಾಡಿ ತಿಳಿಸಿ.