ವಿರಾಟ್‌ ಕೊಹ್ಲಿ ಸಲಹೆ ನೀಡಿದ ಇರ್ಫಾನ್‌ ಪಠಾಣ್‌..

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಈಗಾಗಲೇ ಪ್ಲೇ ಆಫ್‌ ಹಂತಕ್ಕೆ ಎಂಟ್ರಿಕೊಟ್ಟಿದ್ದು, ಇದೀಗ ಕಪ್‌ ಗೆಲ್ಲಲು ರಣತಂತ್ರಗಳನ್ನು ಎಣಿಯಲಾಗುತ್ತಿದೆ. ಹೀರಬೇಕಾದ್ರೆ, ಇದೀಗ ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್‌ ಆಟಗಾರ ಇರ್ಫಾನ್‌ ಪಠಾಣ್‌ ಕೊಹ್ಲಿಗೆ ಸಲಹೆಯನ್ನು ನೀಡಿದ್ದಾರೆ. ಹೌದು ಇರ್ಫಾನ್‌ ಪಠಾಣ್‌ ಆರ್‌ಸಿಬಿ ಬ್ಯಾಟಿಂಗ್‌ ಲೈನಪ್‌ ಬಗ್ಗೆ ಮಾತನಾಡಿದ್ದು, ಆರ್‌ಸಿಬಿ ಬ್ಯಾಟಿಂಗ್‌ ಆರ್ಡರ್‌ನಲ್ಲಿ ಸತ್ವವನ್ನು ಕಳೆದುಕೊಂಡಂತೆ ಕಾಣುತ್ತಿದೆ, ಈ ಜವಾಬ್ದಾರಿಯನ್ನು ವಿರಾಟ್‌ ಕೊಹ್ಲಿ ಹೊರಬೇಕು, ಬ್ಯಾಟಿಂಗ್‌ ಆರ್ಡರ್‌ನಲ್ಲಿ ಬದಲಾವಣೆಯನ್ನು ಅನಿವಾರ್ಯವಾಗಿ ಅವರು ತರಬೇಕು ಎಂದು ಹೇಳಿದ್ದಾರೆ.

ಈ ಬಾರಿ ಐಪಿಎಲ್‌ನಲ್ಲಿ ಅರೋನ್‌ ಫಿಂಚ್‌ ಫಾರ್ಮ್‌ನಲ್ಲಿ ಇಲ್ಲದೇ ಇರೋದು ತಲೆನೋವಾಗಿದ್ದು, ಈ ಕಾರಣಕ್ಕಾಗಿ ವಿರಾಟ್‌ ಹೆಚ್ಚಿನ ಜವಾಬ್ದಾರಿಯನ್ನು ಹೊತ್ತುಕೊಂಡು ಆರ್‌ಸಿಬಿ ಪರ ಆರಂಭಿಕರಾಗಿ ಕಣಕ್ಕೆ ಇಳಿಯಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಉತ್ತಮ ಇನ್ನಿಂಗ್ಸ್‌ ಕಟ್ಟಲ್ಲು ಸಹಕಾರಿಯಾಗುತ್ತದೆ ಎಂದು ಹೇಳಿದ್ದು, ಯುವ ಆಟಗಾರ ದೇವದತ್‌ ಪಡಿಕಲ್‌ ಉತ್ತಮವಾಗಿ ಪ್ರದರ್ಶನ ನೀಡ್ತಾ ಇದ್ದಾರೆ. ಮೊದಲ ಐಪಿಎಲ್‌ ಟೂರ್ನಿಯಲ್ಲೇ ಉತ್ತಮವಾಗಿ ರನ್‌ ಕಲೆಹಾಕುತ್ತಿದ್ದಾರೆ.

ಹೆಚ್ಚುವರಿಯಾಗಿ ಬ್ಯಾಟ್ಸ್‌ಮನ್‌ಗಳು ಆಡಲು ನಿರ್ಧರಿಸಿರೆ ಕೊಹ್ಲಿ ಆರ್‌ಸಿಬಿ ಪರವಾಗಿ ಓಪನಿಂಗ್‌ ಬ್ಯಾಟಿಂಗ್‌ ಮಾಡಬೇಕು , ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್‌ಮನ್‌ಗಳ ಅವಶ್ಯಕತೆ ಇದೆ, ಹಾಗಾಗಿ ಹೆಚ್ಚುವರಿ ಬ್ಯಾಟ್ಸಮನ್‌ಗಳನ್ನು ಆಡಿಸಿದ್ರೆ ಅವರು ತಮ್ಮ ಆಟವನ್ನು ತೋರಿಸಲು ಸಹಕಾರಿಯಾಗುತ್ತದೆ ಎಂದು ಪಠಾಣ್‌ ಹೇಳಿದ್ದಾರೆ.

ಮಿಡಲ್‌ ಆರ್ಡರ್‌ನಲ್ಲಿ ಇನ್ನಿಂಗ್ಸ್‌ ಕಟ್ಟಲು ಬ್ಯಾಟ್ಸಮನ್‌ಗಳು ಬೇಕು. ವಿರಾಟ್‌ ಬೇಗನೇ ಔಟಾದರೆ ಮಧ್ಯಮಕ್ರಮಾಂಕದಲ್ಲಿ ಆಡಲು ಯಾರು ಇರುವುದಿಲ್ಲ ಹೆಚ್ಚುವರಿ ಬ್ಯಾಟ್ಸಮನ್‌ನೊಂದಿಗೆ ಆರ್‌ಸಿಬಿ ಆಡಿದರೆ ಆಗ ವಿರಾಟ್‌ ಓಪನಿಂಗ್‌ ಬರಬೇಕು, ಆಲ್‌ರೌಂಡರ್‌ಗಳು 5 ರಿಂದ7 ಕ್ರಮಾಂಕದಲ್ಲಿ ಬರುತ್ತಿದ್ದಾರೆ ಎಂದರೆ ನೀವು ನಿಮ್ಮ ಬ್ಯಾಟಿಂಗ್‌ ಅನ್ನು ಕಡಿಮೆ ಮಾಡುತ್ತಿದ್ದೀರಿ ಎಂದು ಇರ್ಫಾನ್‌ ಪಠಾಣ್‌ ಸ್ಟಾರ್‌ ಸ್ಪೋರ್ಟ್ಸ್‌ ಲೈವ್‌ನಲ್ಲಿ ಹೇಳಿದ್ದಾರೆ.

ಇನ್ನು ವಿರಾಟ್‌ ಕೊಹ್ಲಿಗೆ ಇರ್ಫಾನ್‌ ಪಠಾಣ್‌ ಓಪನಿಂಗ್‌ ಬರೋ ಸಲಹೆಯನ್ನು ನೀಡಿದ್ರೆ, ಇತ್ತ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟ ಮೇಲೆ ಆರ್‌ಸಿಬಿ ಈ ಬಾರಿ ಕಪ್‌ ಗೆಲ್ಲಲಿದೆ ಅನ್ನೋ ಖುಷಿಯಲ್ಲಿರೋ ಅಭಿಮಾನಿಗಳಿಗೆ ಮಾಜಿ ಸ್ಟಾರ್‌ ಆಟಗಾರರೊಬ್ಬರು ಶಾಕಿಂಗ್‌ ಹೇಳಿಕೆಯನ್ನು ನೀಡಿದ್ದಾರೆ. ಹೌದು ಆರ್‌ಸಿಬಿ ಈ ಬಾರಿ ಕಪ್‌ ಗೆಲ್ಲಲಿದೆ ಅಂತ ನೀವು ಭಾವಿಸಿಕೊಳ್ಳ ಬೇಡಿ ಎಂದು ಹೇಳಿದ್ದಾರೆ. ಇಂಗ್ಲೆಂಡ್‌ನ ಮಾಡಿ ಆಟಗಾರ ಮೈಕಲ್ ವಾನ್‌ ಈ ರೀತಿಯ ಹೇಳಿಕೆಯನ್ನು ನೀಡಿದ್ದು, ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಆರ್‌ಸಿಬಿ ಕಪ್‌ ಗೆಲ್ಲುವ ರೀತಿಯಾಗಿ ಆಟದಲ್ಲಿ ಯಾವುದೇ ಪ್ರದರ್ಶನವನ್ನು ನೀಡುತ್ತಿಲ್ಲ, ನಾನು ಐಪಿಎಲ್‌ ಶುರುವಿನಿಂದಲೂ ಹೇಳುತ್ತಿದ್ದೇನೆ ಆರ್‌ಸಿಬಿ ಈ ಬಾರಿ ಕಪ್‌ ಗೆಲ್ಲುವುದಿಲ್ಲ, ಅವರು ಕಪ್‌ ಗೆಲ್ಲುವ ರೀತಿ ತಮ್ಮ ಆಟವನ್ನು ಪ್ರದರ್ಶಿಸುತ್ತಿಲ್ಲ ಎಂದು ಹೇಳಿದ್ದಾರೆ. ಇನ್ನು ನಾನು ಆರ್‌ಸಿಬಿ ಪರವಾಗಿ ಮಾತನಾಡಬೇಕು ಅಂದ್ರೆ, 2020ರಲ್ಲಿ ಏನೂ ಬೇಕಾದರೂ ಆಗ ಬಹುದು, ವಿರಾಟ್‌ ಕೊಹ್ಲಿ ಎಡಗೈನಲ್ಲಿ ಬ್ಯಾಟಿಂಗ್‌ ಮಾಡಿ ಆದ್ರು ತಂಡವನ್ನು ಗೆಲ್ಲಿಸಬಹುದು ಆದ್ರೆ ಅದು ಅಸಾಧ್ಯವಾದ ಮಾತು ಎಂದ ಮೈಕಲ್‌ ವಾನ್‌ ಹೇಳಿದ್ದಾರೆ.

ನಿಮ್ಮ ಪ್ರಕಾರ ಆರ್‌ಸಿಬಿಯ ಓಪನರ್‌ ಆಗಿ ದೇವದತ್‌ ಪಡಿಕಲ್‌ ಜೊತೆ ವಿರಾಟ್‌ ಬರಬೇಕಾ, ಇರ್ಫಾನ್‌ ಪಠಾಣ್‌ ಅವರ ಈ ಸಲಹೆ ಬಗ್ಗೆ ನೀವ್‌ ಏನ್‌ ಹೇಳ್ತೀರಾ ಕಾಮೆಂಟ್‌ ಮಾಡಿ ತಿಳಿಸಿ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top