ವಿರಾಟ್‌ ಕೊಹ್ಲಿ ಪರ ಬ್ಯಾಟ್‌ ಬೀಸಿದ ವಿಶ್ವಕಪ್‌ ಹೀರೋ

ಐಪಿಎಲ್‌ನಲ್ಲಿ ಆರ್‌ಸಿಬಿ ಈ ಬಾರಿಯು ಕಪ್‌ ಗೆಲ್ಲುವಲ್ಲಿ ಎಡವುತ್ತಿದ್ದಂತೆ, ಇತ್ತ ಆರ್‌ಸಿಬಿ ತಂಡದ ನಾಯಕ ವಿರಾಟ್‌ ಕೊಹ್ಲಿ ನಾಯಕತ್ವದ ಬಗ್ಗೆ ಪ್ರಶ್ನೆಗಳು ಮೂಡಲು ಶುರುವಾಗಿದೆ. ಇನ್ನು ಕೆಲವ್ರು ವಿರಾಟ್‌ ಕೊಹ್ಲಿಯವರನ್ನು ಆರ್‌ಸಿಬಿ ತಂಡದ ನಾಯಕತ್ವ ಸ್ಥಾನದಿಂದ ಕೆಳಗಿಳಿಸ ಬೇಕು, ಹಾಗೇ ಟೀಂ ಇಂಡಿಯಾದಿಂದಲೂ ವಿರಾಟ್‌ ನಾಯಕತ್ವದಿಂದ ದೂರ ಉಳಿಯಬೇಕು ಅನ್ನೋ ಮಾತುಗಳನ್ನು ಹೇಳುತ್ತಿದ್ದಾರೆ.

ಈಗಾಗಲೇ ಒಂದು ಕಡೆ ಗೌತಂ ಗಂಭೀರ್‌ ನೇರವಾಗಿ ವಿರಾಟ್‌ರನ್ನು ಆರ್‌ಸಿಬಿ ತಂಡದ ನಾಯಕತ್ವದ ಸ್ಥಾನದಿಂದ ಕೆಳಗಿಳಿಸಿ ಅಂತ ಹೇಳಿದ್ರು, ಇನ್ನು ಟೀಂ ಇಂಡಿಯಾದಲ್ಲಿ ವಿರಾಟ್‌ ಬದಲಿಗೆ ರೋಹಿತ್‌ ಶರ್ಮಾ ಅವರಿಗೆ ನಾಯಕತ್ವ ಸ್ಥಾನ ಕೊಡದೇ ಹೋದಲ್ಲಿ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಲಿದೆ ಅಂತನೂ ಹೇಳಿದ್ರು, ಇನ್ನು ಗಂಭೀರ್‌ ವಿರಾಟ್‌ ವಿರುದ್ಧ ಮಾತುಗಳನ್ನು ಹೇಳಿದ ನಂತರ ಡೆಲ್ಲಿ ಡ್ಯಾಷರ್‌ ವಿರೇಂದ್ರ ಸೆಹ್ವಾಗ್‌ ವಿರಾಟ್‌ ಕೊಹ್ಲಿ ಪರ ಬ್ಯಾಟ್‌ ಬೀಸೀದ್ರು, ಆರ್‌ಸಿಬಿ ಗೆಲ್ಲದೆ ಇರೋದಕ್ಕೆ ಕೇವಲ ಕ್ಯಾಪ್ಟನ್‌ ಕಾರಣವಾಗೋದಿಲ್ಲ, ತಂಡದಲ್ಲಿ ಉಳಿದ ಆಟಗಾರರು ಸಹಕಾರ ನೀಡಬೇಕು ಅಂತ ಹೇಳುವುದರ ಜೊತೆಯಲ್ಲಿ ಐಪಿಎಲ್‌ ಮತ್ತು ಇಂಟರ್‌ನ್ಯಾಷನಲ್‌ ಕ್ರಿಕೆಟ್‌ಗೆ ತಾಳೆ ಹಾಕಬಾರದು, ಹಾಗೇ ನೋಡಿದ್ರೆ ವಿರಾಟ್‌ ಕ್ಯಾಪ್ಟನ್‌ ಶಿಪ್‌ನಲ್ಲಿ ಟೀಂ ಇಂಡಿಯಾ ಉತ್ತಮ ಸಾಧನೆ ಮಾಡಿದೆ ಅಂತ ವೀರು ಹೇಳಿದ್ರು, ಇದೀಗ ವಿರಾಟ್‌ ಪರವಾಗಿ ಟೀಂ ಇಂಡಿಯಾಗೆ ವಿಶ್ವಕಪ್‌ ತಂದುಕೊಟ್ಟ ನಾಯಕ ಕಪಿಲ್‌ ದೇವ್‌ ಕೂಡ ಬ್ಯಾಟ್‌ ಬೀಸಿದ್ದು, ಟೀಂ ಇಂಡಿಯಾದಲ್ಲಿ ಕೊಹ್ಲಿ ನಾಯಕತ್ವದಲ್ಲಿ ಅತ್ಯುತ್ತಮವಾಗಿದೆ.

ವಿರಾಟ್‌ ನಾಯಕತ್ವ ನಿರ್ಧರಿಸಲು ಐಪಿಎಲ್‌ ಮಾನದಂಡವಾಗಬಾರದು ಅಂತ ವಿರಾಟ್‌ ಕೊಹ್ಲಿ ನಾಯಕತ್ವದ ಬಗ್ಗೆ ಪ್ರಶ್ನೆ ಮಾಡುತ್ತಿದ್ದವರಿಗೆ ಕಪಿಲ್‌ ದೇವ್‌ ಚಾಟಿ ಬೀಸಿದ್ದಾರೆ. ಒಟ್ಟಿನಲ್ಲಿ ವಿರಾಟ್‌ ಕೊಹ್ಲಿ ನಾಯಕತ್ವದ ವಿಚಾರದಲ್ಲಿ ಐಪಿಎಲ್‌ ಮತ್ತು ಟೀಂ ಇಂಡಿಯಾದ ಎರಡು ವಿಚಾರದಲ್ಲೂ ಪರ ವಿರೋಧಗಳು ಕೇಳಿ ಬರ್ತಾ ಇದ್ದು, ಅಭಿಮಾನಿಗಳು ಮಾತ್ರ ವಿರಾಟ್‌ ಕ್ಯಾಪ್ಟನ್‌ ಶಿಪ್‌ ಉತ್ತಮ ಅಂತ ಹೇಳುತ್ತಿದ್ದಾರೆ.

ಹಾಗಾದ್ರೆ ವಿರಾಟ್‌ ಕೊಹ್ಲಿ ನಾಯಕತ್ವದ ಬಗ್ಗೆ ನೀವ್‌ ಏನ್‌ ಹೇಳ್ತೀರಾ..ವಿರಾಟ್‌ ಕೊಹ್ಲಿ ಇನ್ನಷ್ಟು ಉತ್ತಮವಾಗಿ ನಾಯಕತ್ವನ್ನು ನಿಭಾಯಿಸಬೇಕಾದ್ರೆ ಯಾವ ಯಾವ ಗುಣಗಳನ್ನು ಅಳವಡಿಸಿಕೊಳ್ಳ ಬೇಕು ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top