ವಿರಾಟ್‌ ಅಲಭ್ಯತೆ ಆಸ್ಟ್ರೇಲಿಯಾ ಬೌಲರ್‌ಗಳಿಗೆ ಸಂಭ್ರಮ ಎಂದ ಕ್ರಿಕೆಟ್‌ ದಿಗ್ಗಜರು

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್‌ ಪಂದ್ಯ ನಾಳೆ ಅಡಿಲೇಡ್‌ನಲ್ಲಿ ನಡೆಯಲಿದ್ದು, ಈಗಾಗಲೇ ಪಂದ್ಯ ಬಗ್ಗೆ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಆಸ್ಟ್ರೇಲಿಯಾ ತಂಡದಲ್ಲಿ ಪ್ರಮುಖ ಆಟಗಾರರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ತಂಡಕ್ಕೆ ದೊಡ್ಡ ಹೊಡೆತ ಬೀಳಲಿದೆ. ಹೀಗಿರ ಬೇಕಾದ್ರೆ ಇದೀಗ ಆಸ್ಟ್ರೇಲಿಯಾ ತಂಡಕ್ಕೆ ವಿರಾಟ್‌ ಕೊಹ್ಲಿ ಯಾವ ರೀತಿ ಕಾಡಲಿದ್ದಾರೆ ಅನ್ನೋ ಮಾತನ್ನ ಮಾಜಿ ಕ್ರಿಕೆಟ್‌ ದಿಗ್ಗಜರು ಹೇಳಿದ್ದಾರೆ. ಹೌದು ಇದೀಗ ಸುನೀಲ್‌ ಗವಾಸ್ಕರ್‌ ಮತ್ತು ಆಲನ್‌ ಬಾರ್ಡರ್‌ ಈ ಸರಣಿ ಬಗ್ಗೆ ಮಾತನಾಡಿದ್ದು, ವಿರಾಟ್‌ ಕೊಹ್ಲಿ ಕೊನೆಯ ಮೂರು ಟೆಸ್ಟ್‌ ಪಂದ್ಯಗಳಿಗೆ ಅಲಭ್ಯತೆ ಬಗ್ಗೆ ಈ ಇಬ್ಬರು ದಿಗ್ಗಜರು ಹೇಳಿದ್ದು, ಕೊಹ್ಲಿ ಇಲ್ಲದಿರುವುದು ಟೀಂ ಇಂಡಿಯಾಗೆ ತುಂಬಾನೇ ಕಾಡಲಿದೆ ಎಂದು ಹೇಳಿದ್ದು, ಮೊದಲ ಟೆಸ್ಟ್‌ ಪಂದ್ಯ ಬಳಿಕ ವಿರಾಟ್‌ ತವರಿಗೆ ಮರಳುತ್ತಿದ್ದು, ಆ ನಂತರ ಆಸ್ಟ್ರೇಲಿಯಾ ಬೌಲರ್‌ಗಳಿಗೆ ವಿರಾಟ್‌ಗೆ ಕೊನೆಯ ಮೂರು ಪಂದ್ಯಗಳು ಬೌಲಿಂಗ್‌ ಮಾಡದೇ ಇರೋದ್ರಿಂದ ದೊಡ್ಡ ಹುಮ್ಮಸ್ಸು ನೀಡಲಿದೆ ಅಂತ ಹೇಳದ್ದಾರೆ. ವಿರಾಟ್‌ ಕೊಹ್ಲಿ ಅಲಭ್ಯತೆ ತಂಡಕ್ಕೆ ಕಾಡಿದ್ರೆ, ಆತ ಇಲ್ಲದಿರುವುದರಿಂದ ಆಸೀಸ್‌ ಬೌಲರ್‌ಗಳು ಸಂಭ್ರಮಿಸಲಿದ್ದಾರೆ. ಆದರೆ ಅಡಿಲೇಡ್‌ ಪಂದ್ಯದಲ್ಲಿ ವಿರಾಟ್‌ ಬೌಲರ್‌ಗಳ ಬಾಲ್‌ ಅನ್ನು ಮೈದಾನದ ಮೂಲೆ ಮೂಲೆಗೆ ಕಳುಹಿಸುತ್ತಾರೆ. ಆ ಮೂಲಕ ತಂಡಕ್ಕೆ ಶುಭಾರಂಭ ತಂದುಕೊಡಲಿದ್ದಾರೆ. ಆ ಮೇಲೆ ತಂಡ ಯಾವರೀತಿ ತೆಗೆದುಕೊಂಡು ಹೋಗಲಿದೆ ಎಂದು ಕಾದುನೋಡಬೇಕು ಅಂತ ಆಲನ್‌ ಬಾರ್ಡರ್‌ ಹೇಳಿದ್ದಾರೆ.

ಇನ್ನು ಇದೇ ವೇಳೆ ಟೀಂ ಇಂಡಿಯಾದ ಪ್ರಮುಖ ಬೌಲರ್‌ ಜಸ್ಪ್ರೀತ್‌ ಬೂಮ್ರಾ ತಂಡದ ಪ್ರಮುಖ ಅಸ್ತ್ರ ನಾನು ಅವರ ಅಭಿಮಾನಿ ಅವರ ಅತ್ಯಂತ ಮಾರಕವಾದ ಬೌಲಿಂಗ್‌ಗೆ ನಾನು ಅಭಿಮಾನಿ ಎಂದು ಕ್ರಿಕೆಟ್‌ ದಂತಕತೆ ಆಲನ್‌ ಬಾರ್ಡರ್‌ ಬೂಮ್ರಾ ಬಗ್ಗೆ ಹಾಡಿಹೊಗಳಿದ್ದಾರೆ.

ಫಿಟ್‌ನೆಸ್‌ ಪರೀಕ್ಷೆಯಲ್ಲಿ ಪಾಸ್‌ ಆಗಿರೋ ರೋಹಿತ್‌ ಶರ್ಮಾ ಆಸ್ಟ್ರೇಲಿಯಾಕ್ಕೆ ಹೊರಟಿದ್ದಾರೆ. ಟೆಸ್ಟ್‌ ಸರಣಿಯಲ್ಲಿ ವಿರಾಟ್‌ ಅಲಭ್ಯತೆಯಲ್ಲಿ ರೋಹಿತ್‌ ಶರ್ಮಾ ತಂಡ ಸೇರಿಕೊಳ್ಳುತ್ತಾರ ಇಲ್ಲವ ಅನ್ನೋ ಅನುಮಾನಗಳು ಶುರುವಾಗಿದ್ದವು, ಇದೀಗ ರೋಹಿತ್‌ ಶರ್ಮಾ ಆಸ್ಟ್ರೇಲಿಯಾಗೆ ಹೊರಟ್ಟಿದ್ದು, ಮೊದಲ ಡೇ ಅಂಡ್‌ ನೈಟ್‌ ಟೆಸ್ಟ್‌ ಪಂದ್ಯಕ್ಕೆ ಅವರು ಲಭ್ಯವಿರುವುದಿಲ್ಲ, ನಂತರದ ಮೂರು ಟೆಸ್ಟ್‌ ಪಂದ್ಯಗಳಿಗೆ ರೋಹಿತ್‌ ಟೀಂ ಇಂಡಿಯಾ ಸೇರಿಕೊಳ್ಳಲಿದ್ದು, ಇದೀಗ ರೋಹಿತ್‌ ದುಬೈ ಮೂಲಕ ಆಸ್ಟ್ರೇಲಿಯಾ ತಲುಪಿದ್ದಾರೆ. ಕೊರೊನಾ ನಿಯಮದ ಪ್ರಕಾರ 14 ದಿನ ಕ್ವಾರಂಟೈನ್‌ನಲ್ಲಿ ರೋಹಿತ್‌ ಶರ್ಮಾ ಇರಲಿದ್ದು, ಈ ವೇಳೆ ರೋಹಿತ್‌ ಇನ್ನಷ್ಟು ಫಿಟ್‌ನೆಸ್‌ ಕಾಯ್ದುಕೊಳ್ಳಲ್ಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಈ ವಿಚಾರವಾಗಿ ನಿಮ್ಮ ಅನಿಸಿಕೆ ಏನೂ ಕ್ರಿಕೆಟ್‌ ದಿಗ್ಗಜರು ಹೇಳಿದ ರೀತಿ ವಿರಾಟ್‌ ಕೊಹ್ಲಿ ಅಲಭ್ಯತೆ ಆಸ್ಟ್ರೇಲಿಯಾ ಬೌಲರ್‌ಗಳಿಗೆ ವರವಾಗಲಿದ್ಯ. ನೀವ್‌ ಏನ್‌ ಹೇಳ್ತೀರಾ ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top