ವಿರಾಟ್‌,ಎಬಿಡಿಯನ್ನು ಐಪಿಎಲ್‌ನಿಂದ ಬ್ಯಾನ್‌ ಮಾಡ್ಬೇಕು -ಕೆಎಲ್‌ ರಾಹುಲ್‌..

ಇಂದು ಆರ್‌ಸಿಬಿ ಮತ್ತು ಪಂಜಾಬ್‌ ತಂಡಗಳ ನಡುವೆ ಶಾರ್ಜಾದಲ್ಲಿ ಮ್ಯಾಚ್‌ ನಡೀತಾ ಇದ್ದು, ಇಂದಿನ ಪಂದ್ಯ ಎರಡು ತಂಡಗಳಿಗೆ ಮಹತ್ವವಾಗಿದೆ. ಆದ್ರೆ ಹೀಗಿರೋವಾಗ್ಲೇ ಇದೀಗ ಕೆಎಲ್‌ ರಾಹುಲ್‌ ವಿರಾಟ್‌ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್‌ ಅವರನ್ನು ಐಪಿಎಲ್‌ನಿಂದ ಬ್ಯಾನ್‌ ಮಾಡಬೇಕು ಅಂತ ಹೇಳಿದ್ದಾರೆ. ಅರೆ ಇದೇನಿದೂ ರಾಹುಲ್‌ ಯಾಕೆ ಹೀಗೆ ಹೇಳಿದ್ರು ಅಂತ ಶಾಕ್‌ ಆಗಬೇಡಿ. ಈ ರೀತಿ ರಾಹುಲ್‌ ಹೇಳೋದಕ್ಕೆ ಕಾರಣ ಇದೆ. ಹೌದು ಇಂಡಿಯಾ ಪೂಮಾ ಬ್ರ್ಯಾಂಡ್‌ ಪ್ರಮೋಷನ್‌ನಲ್ಲಿ ವಿರಾಟ್‌ ಮತ್ತು ಕೆಎಲ್‌ ರಾಹುಲ್‌ ಇಬ್ಬರು ಲೈವ್‌ ಬಂದಿದ್ದು ಈ ವೇಳೆ ಅಭಿಮಾನಿ ಕೇಳಿದ ನೀವು ಐಪಿಎಲ್‌ನಲ್ಲಿ ಯಾವುದಾದರೂ ಒಂದು ರೂಲ್ಸ್‌ ಚೇಂಚ್‌ ಮಾಡೋದಾದ್ರೆ ಯಾವ ರೂಲ್ಸ್‌ ಚೇಂಚ್‌ ಮಾಡ್ತೀರಾ ಅಂತ ಕೇಳಿದ ಪ್ರಶ್ನೆಗೆ ಕೆಎಲ್‌ ರಾಹುಲ್‌ ವಿರಾಟ್‌ ಮತ್ತು ಎಬಿಡಿಯನ್ನು ಐಪಿಎಲ್‌ನಿಂದ ಬ್ಯಾನ್‌ ಮಾಡಬೇಕು ಅಂತ ಮನವಿ ಮಾಡ್ತೀನಿ ಅಂತ ಹೇಳಿದ್ದಾರೆ.

ಅಭಿಮಾನಿ ಕೇಳಿದ ಪ್ರಶ್ನೆಗೆ ಈ ರೀತಿಯ ತಮಾಷೆಯ ಉತ್ತರ ನೀಡಿದ್ದಾರೆ. ಐಪಿಎಲ್‌ನಲ್ಲಿ 5000 ರನ್‌ ಗಳಿಸಿದ್ದಾರೆ, ಹೀಗಾಗಿ ಸಾಕು ಇನ್ನು ಉಳಿದ ಆಟಗಾರರು ರೆಕಾರ್ಡ್‌ಗಳನ್ನು ಮಾಡಬೇಕು..ಇವರು ಇದ್ದರೆ ಇವರೇ ಎಲ್ಲಾ ರೆಕಾರ್ಡ್‌ಗಳನ್ನು ಮಾಡುತ್ತಾರೆ.ಹಾಗಾಗಿ ವಿರಾಟ್‌ ಮತ್ತು ಎಬಿಡಿಯನ್ನು ಐಪಿಎಲ್‌ನಿಂದ ಬ್ಯಾನ್ ಮಾಡಿ ಎಂದು ಮನಿವಿ ಮಾಡಿಕೊಳ್ತೀನಿ ಅಂತ ಹೇಳಿದ್ದಾರೆ. ಇದು ಕೇವಲ ಒಂದು ತಮಾಷೆಯ ಸಂಭಾಷಣೆಯಾಗಿದ್ದು, ವಿರಾಟ್‌ ಕೆಎಲ್‌ ರಾಹುಲ್‌ ಹೇಳಿದ ಈ ಮಾತಿಗೆ ಲೈವ್‌ನಲ್ಲಿ ನಕ್ಕು ಸುಮ್ಮನಾದ್ರು. ಸದ್ಯ ಐಪಿಎಲ್‌ನಲ್ಲಿ ದಾಖಲೆ ಮೇಲೆ ದಾಖಲೆ ವಿರಾಟ್‌ ಮತ್ತು ಎಬಿಡಿ ದಾಖಲಿಸ್ತಾ ಇದ್ದು, ಇದೀಗ ಕೆಎಲ್‌ ರಾಹುಲ್‌ ಇವರಿಬ್ಬರನ್ನು ಬ್ಯಾನ್‌ ಮಾಡಿ ಆಗ ನಾವು ರೆಕಾರ್ಡ್‌ಗಳನ್ನ ಮಾಡಬಹುದು ಅಂತ ತಮಾಷೆ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top