ವರ್ಷದ ಕೊನೆಯಲ್ಲಿ ಭರ್ಜರಿ ಗಿಫ್ಟ್ ಕೊಡಲು ರೆಡಿಯಾದ ಈ ಸ್ಟಾರ್ ನಟರು..!

ಹೊಸ ವರ್ಷ ಸ್ವಾಗತಿಸಲು ಇನ್ನು ಕೆಲವೇ ದಿನಗಳು ಬಾಕಿ ಇದೆ, ವರ್ಷದ ಕೊನೆಯಲ್ಲಿ ಈ ಸ್ಟಾರ್ ನಟರು ಈಗ ತಮ್ಮ ಅಭಿಮಾನಿಗಳಿಗೆ 2019 ಗಿಫ್ಟ್ ಕೊಡಲು ರೆಡಿಯಾಗಿದ್ದಾರೆ. ಹೌದು ಈ ಸ್ಟಾರ್ ನಟರು ಈಗ ವರ್ಷದ ಕೊನೆಯಲ್ಲಿ ಸಿಹಿಸುದ್ದಿ ನೀಡಲು ರೆಡಿಯಾಗಿದ್ದಾರೆ.

ಬಹು ನಿರೀಕ್ಷಿತ ಕೆಜಿಎಫ್ 2 ಸಿನಿಮಾದ ಫಸ್ಟ್ ಲುಕ್ ಇದೇ ಡಿಸೆಂಬರ್ 21ಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದ್ದು, ಈ ಮೂಲಕ ಯಶ್ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಲು ರೆಡಿಯಾಗಿದ್ದಾರೆ. ವಿಶೇಷವೆನೆಂದರೆ ಕಳೆದ ಡಿಸೆಂಬರ್ 21ರಂದು ಕೆಜಿಎಫ್ ಚಾಪ್ಟರ್ 1 ರಿಲೀಸ್ ಕೂಡ ಆಗಿತ್ತು.

ಇನ್ನು ಪುನೀತ್ ರಾಜ್‍ಕುಮಾರ್ ಅಭಿನಯದ `ಯುವರತ್ನ’ ಚಿತ್ರ ಕೂಡ ಸಿನಿರಸಿಕರಿಗೆ ವರ್ಷದ ಕೊನೆಯಲ್ಲಿ ಸಿಹಿಸುದ್ದಿಯನ್ನು ನೀಡುಲು ರೆಡಿಮಾಡಿಕೊಂಡಿದ್ದು, ಡಿಸೆಂಬರ್ 31ರಂದು ಯುವರತ್ನ ತಂಡ ಸಪ್ರೈಸ್ ನೀಡಲಿದೆಯಂತೆ, ಆದ್ರೆ ಏನಿರಬಹುದು ಅನ್ನೋ ಕುತೂಹಲ ಈಗ ಎಲ್ಲರಲ್ಲೂ ಮನೆಮಾಡಿದೆ. ಚಿತ್ರದ ಮತ್ತೊಂದು ಟ್ರೈಲರ್ ರಿಲೀಸ್ ಮಾಡಲಿದೆಯಾ ಅಥವಾ ಚಿತ್ರದ ಬಿಡುಗಡೆ ದಿನಾಂಕ ಅನೌನ್ಸ್ ಮಾಡಲಿದೆಯ ಕಾದುನೋಡಬೇಕಾಗಿದೆ.

yuvaratna

ಇಷ್ಟೇ ಅಲ್ಲದೇ ಟಾಲಿವುಡ್‍ನಲ್ಲಿ ನಿರೀಕ್ಷೆ ಹುಟ್ಟಿಸಿರೋ ಸಿನಿಮಾ ಅಂದ್ರೆ ಅದು `ಆರ್ ಆರ್ ಆರ್’ ಜೂನಿಯರ್ ಎನ್‍ಟಿಆರ್, ರಾಮ್‍ಚರಣ್, ರಾಜಮೌಳಿ ಕಾಂಬಿನೇಷನ್‍ನಲ್ಲಿ ಬರ್ತಾ ಇರೋ ಈ ಚಿತ್ರ ಜನವರಿ 1ರಂದು ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಿದೆಯಂತೆ ಈ ಮೂಲಕ ಸಿನಿ ರಸಿಕರಿಗೆ ಡಿಸೆಂಬರ್ ಕೊನೆ ಮತ್ತು ಜನವರಿ ಮೊದಲು ಭರ್ಜರಿ ಗಿಫ್ಟ್ ಚಿತ್ರರಂಗದಿಂದ ಸಿಗೋದು ಗ್ಯಾರಂಟಿಯಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top