ಲೈವ್ ಶೋನಲ್ಲಿ ರಶ್ಮಿಕಾ ಜೊತೆ ಅಸಭ್ಯವಾಗಿ ವರ್ತಿಸಿದ ವಿಜಯ್ ದೇವಕೊಂಡ..!

ಸ್ಯಾಂಡಲ್‍ವುಡ್ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಒಂದಿಲ್ಲೊಂದು ವಿಷಯಕ್ಕೆ ಸುದ್ದಿಯಾಗ್ತಾನೆ ಇರ್ತಾರೆ, ಇತ್ತಿಚೆಗೆ ತಮಿಳು ಚಾನೆಲ್ ಒಂದರಲ್ಲಿ ಸಂದರ್ಶನ ನೀಡುವಾಗ ನನಗೆ ಕನ್ನಡ ಮಾತನಾಡಲು ಸಹ ಕಷ್ಟ ಅನ್ನೋ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ರು, ಆದ್ರೆ ಈಗ ಇಲ್ಲಿ ರಶ್ಮಿಕಾ ಬದಲಿಗೆ ವಿಜಯ್ ದೇವರಕೊಂಡ ರಶ್ಮಿಕಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ, ಇತ್ತಿಚೆಗೆ ಡಿಯರ್ ಕಾಂಮ್ರೆಡ್ ಚಿತ್ರ ರಿಲೀಸ್ ಆಗಿದ್ದು ಸಕ್ಸಸ್ ಕೂಡ ಪಡೆದುಕೊಂಡಿದೆ, ಇದೇ ವೇಳೆ ಚಾನೆಲ್ ಒಂದಕ್ಕೆ ಸಂದರ್ಶನ ನೀಡುತ್ತಿದ್ದ ವೇಳೆ ವಿಜಯ್ ದೇವರಕೊಂಡ ಉದ್ಧಟತನ ತೋರುವ ಮೂಲಕ ರಶ್ಮಿಕಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ,
ರಶ್ಮಿಕಾಗೆ ಕಾರ್ಯಕ್ರಮದಲ್ಲಿ ವಿಜಯ್ ದೇವರಕೊಂಡ ಜೊತೆ ನಟಿಸಿದ ಎರಡು ಚಿತ್ರದಲ್ಲಿ ಯಾವ ಪಾತ್ರ ನಿಮಗೆ ವಿಭಿನ್ನ ಅಂತ ಕೇಳಿದ ಪ್ರಶ್ನೆಗೆ ರಶ್ಮಿಕಾ `ಜೀವನ ಅಂದ ಮೇಲೆ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಬೇಕು ಗೀತಾ, ಲಿಲ್ಲಿ ಹಾಗೂ ಈ ತಾತನ ಜೊತೆ ನಟಿಸಬೇಕು ಎಂದು ವಿಜಯ್ ದೇವಕೊಂಡ ಅವರ ಕಡೆ ಕೈ ತೋರಿಸಿ ಹೇಳಿದ್ರು, ರಶ್ಮಿಕಾ ಹೇಳಿದ ಮಾತು ಕೇಳಿದ ದೇವರಕೊಂಡ ರಶ್ಮಿಕಾ ಮೇಲೆ ಕಾಲು ಹಾಕಿ ಉದ್ಧಟತನ ತೋರಿದ್ದಾರೆ, ತಾತಾ ಅಂದ್ಯಲ್ಲಾ ಬಾ ತಾತನ ಕಾಲು ಒತ್ತು ಎಂದು ರಶ್ಮಿಕಾ ಮೇಲೆ ಕಾಲು ಹಾಕಿದ್ದಾರೆ.

ಆದರೆ ರಶ್ಮಿಕಾ ಯಾವುದಕ್ಕೂ ಕೋಪಿಸಿಕೊಳ್ಳದೇ ತಾಳ್ಮೆಯಿಂದ ಕಾಲನ್ನು ಕೆಳಗಿಳಿಸಿದ್ದಾರೆ, ಇದು ಪದೇ ಪದೇ ನಡೆದರು ರಶ್ಮಿಕಾ ನಗುನಗುತ್ತಾ ಕಾಲನ್ನು ಕೆಳಗಿಸಿದ್ದಾರೆ, ಸದ್ಯ ಈ ವಿಚಾರದಲ್ಲಿ ರಶ್ಮಿಕಾ ಅಭಿಮಾನಿಗಳು ವಿಜಯ್ ದೇವರಕೊಂಡ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top