ಲೈಂಗಿಕ ಕ್ರಿಯೆಯಿಂದಲೂ ಬರುತ್ತಾ ಕೊರೊನಾ ವೈರಸ್..?!

ಕೊರೊನಾ ಈ ಒಂದು ಪದ ಈಗ ಯಾವ ಮಟ್ಟಕ್ಕೆ ವಿಶ್ವದಲ್ಲಿ ಭಯ ಹುಟ್ಟಿಸಿದೆ ಎಂದರೆ, ಮನುಷ್ಯ ತಾನು ಬದುಕಿರುವವರೆಗೂ ಕೊರೊನಾ ವೈರಸ್ ಅಂತು ಮರೆಯೋದಕ್ಕೆ ಸಾಧ್ಯವಿಲ್ಲ, ಇನ್ನು ಕೊರೊನಾ ವೈರಸ್ ಇದರಿಂದ ಬರುತ್ತದೆ, ಅದರಿಂದ ಬರುತ್ತದೆ, ಇದನ್ನು ಮಾಡಿದ್ರೆ ಬರೊಲ್ಲ ಅಂತ ಹೇಳಿತ್ತಿದ್ದವರಿಗೆ ಈಗ ಅಚ್ಚರಿಯ ವಿಷಯ ಒಂದು ಹೊರ ಬಿದ್ದಿದೆ, ಹೌದು ಸೆಕ್ಸ್ ಮಾಡುವುದರಿಂದಲೂ ಕೊರೊನಾ ಬರಲಿದೆ ಎಂದು ಸಂಶೋದನೆಯಿಂದ ಧೃಢಪಟ್ಟಿದೆಯಂತೆ.. ಚೀನಾದ ಸಂಶೋಧಕರು 36 ಜನ ಕೊರೊನಾ ಸೋಂಕಿತ ಗುಣಮುಖರಾದ ವ್ಯಕ್ತಿಗಳನ್ನು ಸಂಶೋಧನೆಗೆ ಒಳಪಡಿಸಿದಾಗ ಈ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಇನ್ನು 36 ಜನರಲ್ಲಿ 6 ಜನರ ವಿರ್ಯಾಣುವಿನಲ್ಲಿ ಕೊರೊನಾ ವೈರಸ್ ಅಡಗಿರುವ‌ ಮಾಹಿತಿ ಗೊತ್ತಾಗಿದೆ. ಇನ್ನು ಕೊರಾನಾ ಸೋಂಕಿತರು ಮತ್ತು ಗುಣಮುಖರಾದವರ ಜೊತೆ ಸೆಕ್ಸ್ ನಡೆಸುವಾಗ ಕಾಂಡೋಮ್ ಬಳಸಿ ಸೆಕ್ಸ್ ಮಾಡಬೇಕು ಎಂದು ಹೇಳಿದ್ದು, ಕೊರೊನಾ ವೈರಸ್ ವಿರ್ಯಾಣುವಿನಲ್ಲಿ ಅಧಿಕ ಕಾಲ ಬದುಕಿರುವುದರಿಂದ ಸೆಕ್ಸ್ ಮಾಡುವ ವೇಳೆ ಮುನ್ನೆಚರಿಕೆ ವಹಿಸಬೇಕು ಎಂದು ಜಾಮಾ ನೆಟ್‌ವರ್ಕ್‌ ಓಪನ್‌ ಎಂಬ ವೈದ್ಯಕೀಯ ನಿಯತಕಾಲಿಕ ಪತ್ರಿಕೆಯಲ್ಲಿ ಈ ಕುರಿತಾಗಿ ಸಂಶೋಧಕ ಶಿಕ್ಸಿ ಝಂಗ್‌ ಅವರು ಪ್ರಬಂಧ ಬರೆದಿದ್ದಾರೆ. ಕೊರೊನಾ ವೈರಸ್‌ನಿಂದ ಗುಣಮುಖನಾದ ರೋಗಿಯ ವೀರ್ಯದಲ್ಲಿ ಅಡಗಿ ಕೂರುವ ಕೊರೊನಾ ವೈರಸ್ ಇತರರಿಗೂ ಹರಡುವಷ್ಟು ಪ್ರಭಾವಿಯಾಗಿದೆ ಎಂದು ಎಚ್ಚರಿಸಿದ್ದಾರೆ..! ಸದ್ಯ ಈ ವಿಷಯ ಈಗ ಬಹಳಷ್ಟು ಚರ್ಚೆಗೆ ಗ್ರಾಸವಾಗಿದ್ದು,ಇನ್ನಷ್ಟು ಸಂಶೋದನೆಗೆ ಒಳಪಡಿಸುವ ಅಗತ್ಯವಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top